ಹಾನಗಲ್​​ ಗ್ಯಾಂಗ್​ರೇಪ್ ಕೇಸ್ ಮಾಸುವ ಮುನ್ನವೇ ಹಾವೇರಿಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ: 7 ಆರೋಪಿಗಳ ಬಂಧನ

ಹಾನಗಲ್ಲ ಗ್ಯಾಂಗ್ ರೇಪ್​ ಪ್ರಕರಣವನ್ನು ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ. ಹಿಂದೂ ಯುವಕನ ಜೊತೆ ಮಾತನಾಡುತ್ತಾ ನಿಂತಿದ್ದಕ್ಕೆ ಮುಸ್ಲಿಂ ಯುವತಿಯನ್ನು ಮುಸ್ಲಿಂ ಯುವಕರ ಗ್ಯಾಂಗ್ ಹಲ್ಲೆ ನಡೆಸಿದೆ. 9 ಮುಸ್ಲಿಂ ಯುವಕರ ಪೈಕಿ 7 ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಾನಗಲ್​​ ಗ್ಯಾಂಗ್​ರೇಪ್ ಕೇಸ್ ಮಾಸುವ ಮುನ್ನವೇ ಹಾವೇರಿಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ: 7 ಆರೋಪಿಗಳ ಬಂಧನ
ಬ್ಯಾಡಗಿ ಪೋಲಿಸ್​ ಠಾಣೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jan 20, 2024 | 4:51 PM

ಹಾವೇರಿ, ಜನವರಿ 20: ರಾಜ್ಯವನ್ನೇ ಬೆಚ್ಚಿ ಬಿಳಿಸಿದ್ದ ಜಿಲ್ಲೆಯ ಹಾನಗಲ್ಲ ಗ್ಯಾಂಗ್ ರೇಪ್​ ಪ್ರಕರಣ ಮಾಸುವ ಮುನ್ನವೇ ನಿನ್ನೆ ಬ್ಯಾಡಗಿಯ ಶಿವ ದೇವಸ್ಥಾನದ ಬಳಿ ಮತ್ತೊಂದು ನೈತಿಕ ಪೊಲೀಸ್‌ಗಿರಿ (moral policing) ನಡೆದಿದೆ. ಹಿಂದೂ ಯುವಕನ ಜೊತೆ ಮಾತನಾಡುತ್ತಾ ನಿಂತಿದ್ದಕ್ಕೆ ಮುಸ್ಲಿಂ ಯುವತಿಯನ್ನು ಮುಸ್ಲಿಂ ಯುವಕರ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಸದ್ಯ ಸಂತ್ರಸ್ತ ದೂರಿನ ಆಧಾರದ ಮೇಲೆ 9 ಮುಸ್ಲಿಂ ಯುವಕರ ಪೈಕಿ 7 ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬ್ದುಲ್ ಖಾದರ್, ಮನ್ಸೂರ್, ಮೆಹಬೂಬ್ ಖಾನ್, ರಿಯಾಜ್, ಅಲ್ಪಾಜ್, ಅಬ್ದುಲ್, ಖಾದರ್, ಸಲೀಂಸಾಬ್, ಮೆಹಬೂಬ್ ಅಲಿ ಬಂಧಿತರು.

ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಹೇಳಿದ್ದಿಷ್ಟು 

ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಪ್ರತಿಕ್ರಿಯಿಸಿದ್ದು, ಅನ್ಯಕೋಮಿನ ಯುವಕ, ಯುವತಿ ಮೇಲೆ ಹಲ್ಲೆ ನಡೆದಿದೆ. 9 ಮುಸ್ಲಿಂ ಯುವಕರ ಗ್ಯಾಂಗ್‌ನಿಂದ ನೈತಿಕಪೊಲೀಸ್‌ಗಿರಿ ನಡೆದಿದೆ. 7 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾನಗಲ್​​ ಗ್ಯಾಂಗ್​ರೇಪ್ ಕೇಸ್: ಕಾಂಗ್ರೆಸ್​ ಸರ್ಕಾರ ಅತ್ಯಾಚಾರಿಗಳ ಪರ ನಿಂತಿದೆ, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ -ಬಸವರಾಜ ಬೊಮ್ಮಾಯಿ

ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಇಂದು ಮುಸ್ಲಿಂ ಯುವತಿ, ಹಿಂದೂ ಯುವಕನ ಜೊತೆ ನಗರದ ಶಿವನ ದೇವಸ್ಥಾನದ ಹತ್ತಿರ ಮಾತನಾಡುತ್ತ ನಿತ್ತಿದ್ದು ಕಂಡ 9 ಜನರ ಗ್ಯಾಂಗ್ ಏಕಾ ಏಕಿ ದಾಳಿ ನಡೆಸಿ ಯುವತಿಯನ್ನು ಎಳೆದಾಡಿ ಯುವಕ ಮತ್ತು ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಯುವತಿ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಯುವತಿಯ ದೂರು ಆಧರಿಸಿ 7 ಜನ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನೂ ತಲೆ ಮರೆಸಿಕೊಂಡಿರುವ ಇಬ್ಬರ ಹುಡುಕಾಟ ನಡೆಸಿರುವ ಪೊಲೀಸರು ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಹೇಳಿಕೆ ಮೇಲೆ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್: ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ರೂ. ಆಮಿಷ: ಸಂತ್ರಸ್ತೆ ಪತಿ ಗಂಭೀರ ಆರೋಪ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತೆ ಹದಗೆಟ್ಟಿದೆ ಎಂದು ಆರೋಪಿಸಿ ನಾಳೆ ಹಾವೇರಿಯಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಬೀದಿಗಿಳಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಬಿಜೆಪಿ ನಾಯಕರಿಗೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೊತ್ತೊಂದು ಅಸ್ತ್ರ ಸಿಕ್ಕಂತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:48 pm, Sat, 20 January 24