ಅನ್ನದಾತನಿಗೆ ಕಿರುಕುಳ: ಬರಗಾಲದಲ್ಲೂ ಸಾಲ ಮರುಪಾವತಿ ಮಾಡುವಂತೆ ತಾಕೀತು, ಟ್ರ್ಯಾಕ್ಟರ್ ಜಪ್ತಿ ಮಾಡುವ ಬೆದರಿಕೆಯೊಡ್ಡಿದ ಎಚ್.ಡಿ.ಎಫ್.ಸಿ ಬ್ಯಾಂಕ್

|

Updated on: Nov 22, 2023 | 1:17 PM

ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ ಅನ್ನೊ ಹಾಗಾಗಿದೆ ರೈತರ ಸದ್ಯದ ಪಾಡು. ಭೀಕರ ಬರ ಇದ್ದರು ಸರಕಾರವೆ ರೈತರಿಗೆ ಸಾಲದ ನೊಟೀಸ್ ನೀಡಬಾರದು, ಕಿರುಕುಳ ಕೊಡಬಾರದು ಅಂತಾ ಆದೇಶ ಮಾಡಿದ್ದರೂ, ಈ ಬ್ಯಾಂಕುಗಳು ಮಾತ್ರ ಯಾವುದಕ್ಕೂ ಕ್ಯಾರೆ ಅನ್ನುತ್ತಿಲ್ಲ. ಮೊದಲೆ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದು ರೈತರ ಆಕ್ರೋಶದ ಕಟ್ಟೆ ಒಡೆಯದಿರಲಿ.

ಅನ್ನದಾತನಿಗೆ ಕಿರುಕುಳ: ಬರಗಾಲದಲ್ಲೂ ಸಾಲ ಮರುಪಾವತಿ ಮಾಡುವಂತೆ ತಾಕೀತು, ಟ್ರ್ಯಾಕ್ಟರ್ ಜಪ್ತಿ ಮಾಡುವ ಬೆದರಿಕೆಯೊಡ್ಡಿದ ಎಚ್.ಡಿ.ಎಫ್.ಸಿ ಬ್ಯಾಂಕ್
ಅನ್ನದಾತನಿಗೆ ಕಿರುಕುಳ: ಬರಗಾಲದಲ್ಲೂ ಸಾಲ ಮರುಪಾವತಿ ಮಾಡುವಂತೆ ತಾಕೀತು
Follow us on

ಆ ರೈತ ತನ್ನ ಜಮೀನನ್ನು ಉತ್ತಿ ಬಿತ್ತಲು ಅನುಕೂಲ ಆಗಲೆಂದು ತನ್ನಲ್ಲಿದ್ದ ಹಣ ಸೇರಿಸಿ ಬ್ಯಾಂಕನಲ್ಲಿ ಸ್ವಲ್ಪ ಸಾಲ ಮಾಡಿ ಒಳ್ಳೆ ಟ್ರಾಕ್ಟರ್ ಖರೀದಿ ಮಾಡಿದ್ದೆ ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಈ ವರ್ಷ ತೀವ್ರ ಬರಗಾಲ (Drought) ಆವರಿಸಿದೆ, ಮಳೆ ಇಲ್ಲದೆ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಸರ್ಕಾರ ಕೂಡ ಬರಗಾಲ ಅಂತಾ ಘೋಷಣೆ ಮಾಡಿದೆ. ಅದರೆ ರಾಷ್ಟ್ರೀಕೃತ ಬ್ಯಾಂಕಗಳು ಮೊದಲು ಸಾಲ ತೀರಿಸಿ ರೈತರಿಗೆ ನೊಟೀಸ್ ನೀಡುತ್ತಿವೆ (Harassment to farmers) ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರ್ಯಾಕ್ಟರ್ ಜಪ್ತಿ ( Tractor Confiscation) ಮಾಡಿದ ಘಟನೆ ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ.

ಕೋಣನತಂಬಗಿ ಗ್ರಾಮದ ರೈತ ನಾಗರಾಜ್ ರಿತ್ತಿಕುರಬರ 2019 ರಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ (HDFC Bank) 5 ಲಕ್ಷ ರುಪಾಯಿ ಟ್ರ್ಯಾಕ್ಟರ್ ಸಾಲ ಮಾಡಿದ್ದ. ಅಲ್ಲದೆ 82 ಸಾವಿರದಂತೆ ಮೂರು ಕಂತು ಪಾವತಿ ಮಾಡಿದ್ದಾನೆ. ಅದರೆ ಈ ವರ್ಷ ಭೀಕರ ಬರಗಾಲ ಇದ್ದುದ್ದರಿಂದ ಆತನಿಗೆ ಸಾಲದ ಕಂತನ್ನು ಕಟ್ಟಲು ಆಗಿಲ್ಲ. ಆದರೆ ಸದರಿ ಬ್ಯಾಂಕ್ ಇನ್ನೂ 3 ಲಕ್ಷ 33 ಸಾವಿರ ರುಪಾಯಿ ಬಾಕಿಯಿದೆ ಎಂದು ನೊಟೀಸ್ ನೀಡಿದೆ. ಸಾಲ ಮರುಪಾವತಿ ಮಾಡದಿದ್ದಲ್ಲಿ ಎರಡು- ಮೂರು ದಿನದಲ್ಲಿ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ನಾಗರಾಜ ರಿತ್ತಿಕುರುಬರ, ಟ್ರ್ಯಾಕ್ಟರ್ ಮಾಲಿಕ ಆತಂಕ ವ್ಯಕ್ತಪಡಿಸಿದ್ದಾರೆ.

Also read:  ಉಚಿತ ವಿದ್ಯುತ್‌ ಕೊಟ್ಟರೆ ದುರುಪಯೋಗವಾಗುತ್ತದೆ ಎಂಬ ಮಾತಿತ್ತು, ಆದರೆ 8 ಜಿಲ್ಲೆಗಳ ಗ್ರಾಹಕರು ನಿರೀಕ್ಷೆಗೂ ಮೀರಿ ಕಡಿಮೆ ವಿದ್ಯುತ್ ಬಳಸಿದ್ದಾರೆ! ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

ಇತ್ತಿಚೆಗೆ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ ತಿಂಗಳಿನಲ್ಲಿ ಯಾವುದೆ ಬ್ಯಾಂಕ್ ನೊಟೀಸ್ ನೀಡುವಂತಿಲ್ಲ. ಜಪ್ತಿ ಮಾಡುವಂತಿಲ್ಲ ಅಂತಾ ಆದೇಶ ಮಾಡಿದ್ದರು. ಜುಲೈ 13 ರಂದು ಬ್ಯಾಂಕ್ ಸಿಬ್ಬಂದಿ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಹೋಗಿ ಹರಾಜ್ ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಈಗ ಆರೋಪಿಸಲಾಗಿದೆ. ಜೊತೆಗೆ ಇನ್ನೂ ಉಳಿದಿರುವ ಬಡ್ಡಿ ಹಣವನ್ನೂ ಕಟ್ಟಬೇಕು ಎಂದು ಕೋರ್ಟ್ ನಲ್ಲಿ ಕೇಸ್ ಕೂಡಾ ಹಾಕಿದ್ದಾರೆ.

ಹಾಗಾದರೆ ಸರ್ಕಾರದ ಹಾಗೂ ಜಿಲ್ಲಾಡಳಿತ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಹ ಬ್ಯಾಂಕ್ ಸಿಬ್ಬಂದಿ ನೀಡುತ್ತಿಲ್ಲ. ಸತತ ಪ್ರವಾಹ ಸಮಯದಲ್ಲಿ ಸಹ ಲೋನ್ ಕಟ್ಟಿದ್ದೇನೆ. ಕಾಲಾವಕಾಶ ಕೊಟ್ಟರೆ ನಾನು ಸಾಲ ಕಟ್ಟುತ್ತೇನೆ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಬ್ಯಾಂಕಿನಿಂದ ಟ್ರ್ಯಾಕ್ಟರ್ ವಾಪಸ್​​ ಕೊಡಿಸುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ ಅನ್ನೊ ಹಾಗಾಗಿದೆ ರೈತರ ಸದ್ಯದ ಪಾಡು. ಭೀಕರ ಬರ ಇದ್ದರು ಸರಕಾರವೆ ರೈತರಿಗೆ ಸಾಲದ ನೊಟೀಸ್ ನೀಡಬಾರದು, ಕಿರುಕುಳ ಕೊಡಬಾರದು ಅಂತಾ ಆದೇಶ ಮಾಡಿದ್ದರೂ, ಈ ಬ್ಯಾಂಕುಗಳು ಮಾತ್ರ ಯಾವುದಕ್ಕೂ ಕ್ಯಾರೆ ಅನ್ನುತ್ತಿಲ್ಲ. ಮೊದಲೆ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದು ರೈತರ ಆಕ್ರೋಶದ ಕಟ್ಟೆ ಒಡೆಯದಿರಲಿ.

ವರದಿ: ರವಿ ಹೂಗಾರ, ಟಿವಿ9, ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ