ಹಾವೇರಿ: ಗೃಹಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿ 30 ಜನ ಅಸ್ವಸ್ಥ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ನಿನ್ನೆ(ಆ.25) ಬಸವರಾಜ ಶೇಖಪ್ಪ ಎಂಬುವರ ಗೃಹಪ್ರವೇಶ ಕಾರ್ಯಕ್ರಮ ಇತ್ತು. ಈ ಹಿನ್ನಲೆ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಿಗ್ಗೆ ಊಟ ಸೇವಿಸಿದ 30 ಕ್ಕೂ ಹೆಚ್ಚು ಜನ ಆಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾವೇರಿ, ಆ.26: ಗೃಹಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿ 30 ಜನ ಅಸ್ವಸ್ಥರಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ನಡೆದಿದೆ. ನಿನ್ನೆ(ಆ.25) ಬಸವರಾಜ ಶೇಖಪ್ಪ ಎಂಬುವರ ಗೃಹಪ್ರವೇಶ ಕಾರ್ಯಕ್ರಮ ಇತ್ತು. ಈ ಹಿನ್ನಲೆ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಿಗ್ಗೆ ಊಟ ಸೇವಿಸಿದ 30 ಕ್ಕೂ ಹೆಚ್ಚು ಜನ ಆಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಡಲೇ ಅಸ್ವಸ್ಥರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ಸಿಕ್ಕಿದೆ. ಈ ಕುರಿತು ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮನೆ; ಭಯಭೀತರಾದ ಗ್ರಾಮಸ್ಥರು
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಜ್ಯೋತಿಪುರ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಮನೆಯೊಂದು ಹೊತ್ತಿ ಉರಿದ ಘಟನೆ ನಡೆದಿದ್ದು, ವಿದ್ಯುತ್ ಅವಘಡದ ಹೀಗಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಘಟನೆಯಿಂದ ಗ್ರಾಮಸ್ಥರೆಲ್ಲರೂ ಭಯಭೀತರಾಗಿದ್ದಾರೆ. ಅಗ್ನಿ ಶಾಮಕ ದಳ ಘಟನಾ ಸ್ಥಳಕ್ಕೆ ಬರುವ ಹೊತ್ತಿಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಗಂಗಮ್ಮ ಬಸವರಾಜಪ್ಪ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಕುಟುಂಬ ಸದಸ್ಯರೆಲ್ಲಾ ಜಮೀನಿಗೆ ಹೋದ ವೇಳೆ ಹೊತ್ತಿ ಉರಿದಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಪೈರಿಂಗ್; ಆರೋಪಿ ಬಂಧನ
ಕಲಬುರಗಿ: ನಮ್ಮ ಏರಿಯಾಕ್ಕೆ ಯಾಕೆ ಬಂದಿದಿಯಾ ಎಂದು ಕೇಳಿದ್ದಕ್ಕೆ ಪೈರಿಂಗ್ ಮಾಡಿದ ಘಟನೆ ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. ಉಮೇಶ್ ಯಳವಂತಿ ಎನ್ನುವ ವ್ಯಕ್ತಿಯ ಮೇಲೆ ಕಳೆದ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಆರೋಪಿ ಸುನೀಲ್ ಎನ್ನುವವರಿಂದ ಪೈರಿಂಗ್ ಮಾಡಲಾಗಿದೆ. ಅದೃಷ್ಟವಶಾತ್ ಗುಂಡಿನ ದಾಳಿಯಿಂದ ಉಮೇಶ್ ತಪ್ಪಿಸಿಕೊಂಡಿದ್ದಾರೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೈರಿಂಗ್ ಮಾಡಿರುವ ಸುನೀಲ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ