ಡಿಜೆಗೆ ಅನುಮತಿ ಕೊಡುವವರೆಗೂ ಗಣಪತಿ ವಿಸರ್ಜನೆ ಇಲ್ಲ: ಪೊಲೀಸ್ರಿಗೆ ಸಡ್ಡು ಹೊಡೆದ ಹಿಂದೂ ಮಹಾಸಭಾ
ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ 43 ದಿನ ಕಳೆದರೂ ಮಾಡಿಲ್ಲ. ಡಿಜೆ ಬಳಕೆಗೆ ಅನುಮತಿ ನಿರಾಕರಿಸಿದ್ದರಿಂದ ಗಣೇಶ ಸಮಿತಿ ಆಕ್ರೋಶಗೊಂಡಿದೆ. 42 ವರ್ಷಗಳ ಸಂಪ್ರದಾಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಉಂಟಾಗಿದೆ. ಡಿಜೆ ಅನುಮತಿ ಸಿಗುವವರೆಗೂ ವಿಸರ್ಜನೆ ಮಾಡುವುದಿಲ್ಲ ಎಂದು ಸಮಿತಿ ಪಟ್ಟು ಹಿಡಿದಿದೆ.

ಹಾವೇರಿ, ಅಕ್ಟೋಬರ್ 09: ರಾಜ್ಯಾದ್ಯಂತ ಎಲ್ಲೆಡೆಗಳಲ್ಲಿ ಈಗ ಗಣೇಶ ವಿಸರ್ಜನೆ ಮುಕ್ತಾಯಗೊಂಡಿವೆ. ಅದರೆ ಹಾವೇರಿ ಜಿಲ್ಲೆಯ ಬಂಕಾಪುರ ಹಿಂದೂ ಮಹಾಸಭಾ ಗಣಪತಿ (Hindu Mahasabha Ganapathi) ಡಿಜೆ ಅವಕಾಶ ನೀಡದ ಹಿನ್ನಲೆ, 43 ದಿನಗಳು ಕಳೆದರೂ ವಿಸರ್ಜನೆ (visarjan) ಮಾಡಿಲ್ಲ. ಇದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಗಣೇಶ ಕಮೀಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು.. ರಾಜ್ಯಾದ್ಯಂತ ಎಲ್ಲೆಡೆ ಇದೀಗ ಗಣೇಶ ವಿಸರ್ಜನೆ ಮುಕ್ತಾಯಗೊಂಡಿವೆ. ಆದರೆ ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ ಡಿಜೆಗೆ ಅವಕಾಶ ನೀಡದ ಹಿನ್ನಲೆ, 43 ದಿನಗಳು ಕಳೆದರೂ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಿಲ್ಲ. ಪೊಲೀಸ್ ಇಲಾಖೆಗೆ ನಮಗೆ ಅನುಮತಿ ನೀಡಬೇಕು. ಇಲ್ಲಾದರೆ ಗಣಪತಿ ವಿಸರ್ಜನೆ ಮಾಡುವುದಿಲ್ಲ. 42 ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದೇವೆ. ಯಾವುದೇ ಗದ್ದಲ, ಗಲಾಟೆ ಆಗಿಲ್ಲ. ಈ ವರ್ಷ ಮಾತ್ರ ಹಿಂದೂ ಮಹಾಸಭಾ ಗಣಪತಿ ಅಂದರೆ ಎಲ್ಲಾ ಕಾನೂನು ಬರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾಳೆ ಶಿವಮೊಗ್ಗ ಹಿಂದೂ ಮಹಾಗಣತಿ ವಿಸರ್ಜನೆ ಮೆರಣಿಗೆ: ಎಲ್ಲೆಡೆ ಹೈಅಲರ್ಟ್, ಶಾಲಾ-ಕಾಲೇಜುಗಳಿಗೆ ರಜೆ
ಜಿಲ್ಲೆಯ ಪ್ರಸಿದ್ದ ಮೂರ್ತಿಗಳಲ್ಲಿ ಒಂದಾದ, ಬಂಕಾಪುರದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ವಿಸರ್ಜನೆ ಸಂದರ್ಭದಲ್ಲಿ ಡಿ.ಜೆ. ವಿಚಾರವಾಗಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಪೊಲೀಸರು ಡಿ.ಜೆ.ಗೆ ಅವಕಾಶವಿಲ್ಲವೆಂದು ಹೇಳುತ್ತಿದ್ದಾರೆ.
ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಸಹ ಭೇಟಿ ನೀಡಿದ್ದರು. ಈ ವೇಳೆ ನಮಗೆ ಡಿ.ಜೆಗೆ ಅನುಮತಿ ಕೊಡಿಸಿ ಎಂದು ಒತ್ತಾಯಿಸಿದ್ದರು. ಆದರೆ, ಯಾರೊಬ್ಬರೂ ಡಿ.ಜೆ.ಗೆ ಅನುಮತಿ ಕೊಡಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಪೆಂಡಾಲ್ ಹಾಕಿದ ವ್ಯಕ್ತಿಗೆ ಪೆಂಡಾಲ್ ತೆಗೆಯುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಅಬ್ಬಬ್ಬಾ..! ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಏನ್ ಜನ ಗುರು
ಒಟ್ಟಿನಲ್ಲಿ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಿ, 43 ದಿನ ಕಳೆದರೂ ವಿಸರ್ಜನೆಗೆ ಮುಂದಾಗಿಲ್ಲ. ಈಗ ಡಿಜೆಗಾಗಿ ಗಣೇಶ್ ಉತ್ಸವ ಸಮಿತಿ ಬಿಗಿಪಟ್ಟು ಹಿಡಿದು ಕುಳಿತಿದೆ. ಗಣಪತಿ ವಿಸರ್ಜನೆ ಯಾವಾಗ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:29 pm, Thu, 9 October 25




