Haveri Politics: ಹಾವೇರಿ ಜಿಲ್ಲಾ ರಾಜಕೀಯ ಬಲಾಬಲ ಹೇಗಿದೆ? ಈ ಬಾರಿಯೂ ವಲಸಿಗ ಶಾಸಕರಿಗೆ ಅದೃಷ್ಟ ಕುದುರುತ್ತಾ?
ಸ್ಥಳೀಯರನ್ನು ಬಿಟ್ಟು ವಲಸಿಗರಿಗೆ ಓಲುವು ತೋರುವ ಜಿಲ್ಲೆ ಹಾವೇರಿ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಶಾಸಕರು ವಲಸಿಗರೇ ಇದ್ದಾರೆ. ಈ ಬಾರಿ ಇವರ ಅದೃಷ್ಟ ಹೇಗಿರಲಿದೆ? ಇಲ್ಲಿದೆ ರಾಜಕೀಯ ಲೆಕ್ಕಾಚಾರ
ಹಾವೇರಿ: ಸ್ಥಳೀಯರನ್ನು ಬಿಟ್ಟು ವಲಸಿಗರಿಗೆ ಓಲುವು ತೋರುವ ಜಿಲ್ಲೆ ಹಾವೇರಿ. ಇಲ್ಲಿ ಸ್ಥಳೀಯರಿಗಿಂತ ವಲಸಿಗರಿಗೆ ಜಾಸ್ತಿ ಡಿಮ್ಯಾಂಡ್. ಹಾವೇರಿ ಜಿಲ್ಲೆಯ ಜನ ಬುದ್ಧಿವಂತರು ದಡ್ಡರೆನಲ್ಲ, ಆದ್ರೆ ವಿಶಾಲ ಹೃದಯದವರು ಅಂದರೆ ತಪ್ಪಾಗಲಾರದು. ಕಾರಣ ಕನಕದಾಸ, ಸರ್ವಜ್ಣ ಹಾಗೂ ಶರೀಫರಂತಾಹ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದೂ, ಎರಡು ಕ್ಷೇತ್ರದಲ್ಲಿ ಮಾತ್ರ ಸ್ಥಳೀಯ ಶಾಸಕರಿದ್ದಾರೆ. ಇನ್ನೂಳಿದ ನಾಲ್ಕು ಶಾಸಕರು ವಲಸಿಗರೆ ಆಗಿದ್ದಾರೆ ಎಂಬುವುದು ವಿಶೇಷ.
ಹಾವೇರಿ, ಹಾನಗಲ್ಲ, ರಾಣೆಬೆನ್ನೂರು, ಹಿರೆಕೇರೂರ, ಬ್ಯಾಡಗಿ, ಶಿಗ್ಗಾಂವ ಹೀಗೆ ಆರು ಕ್ಷೇತ್ರಗಳ ಪೈಕಿ, ರಾಣೆಬೆನ್ನೂರು ಶಾಸಕ ಅರುಣ ಕುಮಾರ ಹಾಗೂ ಬ್ಯಾಡಗಿ ಕ್ಷೆತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಇವರಿಬ್ಬರು ಮಾತ್ರ ಸ್ಥಳೀಯರಿದ್ದವರು ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಶಿಗ್ಗಾಂವ: ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಮೂರು ಬಾರಿ ಆಯ್ಕೆ ಆಗಿರುವ ಕ್ಕ್ಷೇತ್ರ ಶಿಗ್ಗಾಂವ. ಆದ್ರೆ ಬಸವರಾಜ್ ಬೊಮ್ಮಾಯಿ ಮೂಲತಃ ಶಿಗ್ಗಾಂವ ಕ್ಕ್ಷೇತ್ರದವರಲ್ಲ, ಈ ಹಿಂದೆ ಇವರ ತಂದೆ ಶಾಸಕರಾಗಿದ್ದೂ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಿಂದ, ಇವರ ವಿದ್ಯಾಭ್ಯಾಸ ಆಗಿದ್ದು ಹುಬ್ಬಳ್ಳಿಯಲ್ಲಿ. ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಇಲ್ಲಿನ ಜನರ ಜೊತೆ ಉತ್ತಮ ಭಾಂದವ್ಯ ಬೆಳೆಸಿಕೊಂಡು ಮೊದಲ ಬಾರಿ ಆಯ್ಕೆ ಆಗಿ, ಜಲಸಂಪನ್ಮೂಲ ಸಚಿವರಾಗ್ತಾರೆ. ಎರಡನೆ ಬಾರಿ ಕೆಜೆಪಿ ಪ್ರಭಾವ ಇದ್ರೂ ಗೆಲುವು ಸಾಧಿಸ್ತಾರೆ. ಮೂರನೆ ಬಾರಿ ಆಯ್ಕೆ ಆಗಿ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಸಿಗುತ್ತೆ.
ಇದನ್ನೂ ಓದಿ: Assembly Polls: ಹೆಚ್ ಡಿ ರೇವಣ್ಣರ ಮನೆಗೆ ಭೇಟಿ ನೀಡಿ ಹಾಸನ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅಚ್ಚರಿಯ ಭೇಟಿ!
ಹಾವೇರಿ : ಮೂಲತಃ ಬ್ಯಾಡಗಿ ಕ್ಷೆತ್ರದವರಾಗಿದ್ದ ನೇಹರು ಓಲೇಕಾರ, ಕ್ಷೇತ್ರ ಮರುವಿಂಗಡಣೆ ಆದ ಬಳಿಕ ಹಾವೇರಿ (ಎಸ್ ಸಿ) ಮಿಸಲು ಕ್ಷೇತ್ರವಾಗಿ ಘೋಷಣೆ ಆಗುತ್ತಿದ್ದಂತೆ ಮಾಜಿ ಸಿಎಂ ಬಿಎಸ್ ವೈ ಪ್ರಭಾವ ಬಳಸಿ ಹಾವೇರಿಯಿಂದ ಮೂರು ಬಾರಿ ಟಿಕೆಟ್ ಪಡೆದು ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಹಿರೆಕೆರೂರ : ಪೊಲೀಸ್, ಸಿನಿಮಾ ರಂಗ ಬಳಿಕ ರಾಜಕೀಯ ಪ್ರವೇಶಿಸಿದ ಬಿಸಿ ಪಾಟೀಲ್, ಮೂಲತಃ ಶಿವಮೊಗ್ಗ ಜಿಲ್ಲೆಯವರು. ರಾಜಕೀಯ ಪ್ರವೇಶ ಮಾಡಿದ ಮೊದಲ ಬಾರಿಗೆ ಜೆಡಿಎಸ್ ಟಿಕೆಟ್ ಪಡೆದು ಹಿರೆಕೆರೂರ ಶಾಸಕರಾಗಿ ಆಯ್ಕೆ ಆಗ್ತಾರೆ. ಬಳಿಕ ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಸ್ಪರ್ದಿಸಿ, ಎರಡು ಬಾರಿ ಗೆಲ್ತಾರೆ. ಈಗ ಬಿಜೆಪಿ ಶಾಸಕರಾಗಿ ಕೃಷಿ ಸಚಿವರಾಗಿದ್ದಾರೆ.
ಹಾನಗಲ್ಲ : ಶ್ರೀ ನಿವಾಸ್ ಮಾನೆ ಮೂಲತಃ ಹುಬ್ಬಳ್ಳಿಯವರು ಇವರು ಕೂಡ ಬೋಮ್ಮಾಯಿಯವರ ರೀತಿ ಪರಿಷತ್ ಸದಸ್ಯರಾಗಿದ್ದಾಗ ಹಾನಗಲ್ಲ ಕ್ಷೆತ್ರದ ಜನರ ಜೊತೆ ಉತ್ತಮ ಭಾಂಧವ್ಯ ಹೊಂದಿದ ಪರಿಣಾಮ ಕಾಂಗ್ರೆಸ್ ಪಕ್ಷ ಎರಡು ಬಾರಿ ಟಿಕೆಟ್ ಕೊಟ್ಟಿತ್ತು. 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಇನ್ನೂ ಈ ಎಲ್ಲ ವಲಸಿಗ ಶಾಸಕರು ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲು ತಯಾರಿ ನಡೆಸಿದ್ದೂ ಮತದಾರ ಈ ವರ್ಷ ಮತ್ತೆ ಹಿಸ್ಟ್ರೀ ರಿಪೀಟ್ ಮಾಡ್ತಾನಾ ಎಂಬುವುದನ್ನ ಕಾದು ನೋಡಬೇಕಿದೆ.
ವರದಿ: ಸೂರಜ್ ಉತ್ತೂರೆ, ಟಿವಿ9 ಹಾವೇರಿ
ಹಾವೇರಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ