ಬಿಟ್ಕಾಯಿನ್ ಅಂದ್ರೆ ಏನು ಅಂತಾನೆ ನನಗೂ ಗೊತ್ತಿಲ್ಲ, ನನ್ನ ಮಗ ದರ್ಶನನಿಗೂ ಗೊತ್ತಿಲ್ಲ: ರುದ್ರಪ್ಪ ಲಮಾಣಿ
2020ರಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ ಕೇಸ್ ಆಗಿತ್ತು. ಆಗ ಯಾರೋ ಒಬ್ಬರು ನಮ್ಮ ಮಗ ದರ್ಶನನ ಹತ್ತಿರ ಬಂದು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಆಗ ನಮ್ಮ ಮಗ ಅರೆಸ್ಟ್ ಆಗಿದ್ದ. ನಂತರ ಬೇಲ್ ಮೇಲೆ ಹೊರಗೆ ಬಂದಿದ್ದ - ಮಾಜಿ ಸಚಿವ ರುದ್ರಪ್ಪ ಲಮಾಣಿ
ಹಾವೇರಿ: ಪೊಲೀಸರು ನಮ್ಮನ್ನೇನು ಸಂಪರ್ಕಿಸಿಲ್ಲ; ನಾವು ಕಾನೂನು ಗೌರವಿಸ್ತೇವೆ. ಸ್ನೇಹಿತ ಅಂದ ಮಾತ್ರಕ್ಕೆ ಆರೋಪಿಗಳಲ್ಲ. ದಾರಿಯಲ್ಲಿ ಹೋಗೋರು ಯಾರೋ ಬಂದು ಫೋಟೋ ತೆಗೆಸಿಕೊಳ್ತಾರೆ. ಅಂದ ಮಾತ್ರಕ್ಕೆ ಅವರ ಜೊಎ ಸಂಬಂಧ ಕಲ್ಪಿಸುವುದು ತರವಲ್ಲ ಎಂದು ತಮ್ಮ ಪುತ್ರನ ಮಾದಕ ದ್ರವ್ಯ ಪ್ರಕರಣದ ಸಂಬಂಧ ಮಾಜಿ ಸಚಿವ ರುದ್ರಪ್ಪ ಲಮಾಣಿ ರಾಣೆಬೆನ್ನೂರು ನಗರದ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ್ದಾರೆ. 2020ರಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ ಕೇಸ್ ಆಗಿತ್ತು. ಆಗ ಯಾರೋ ಒಬ್ಬರು ನಮ್ಮ ಮಗ ದರ್ಶನನ ಹತ್ತಿರ ಬಂದು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಆಗ ನಮ್ಮ ಮಗ ಅರೆಸ್ಟ್ ಆಗಿದ್ದ. ನಂತರ ಬೇಲ್ ಮೇಲೆ ಹೊರಗೆ ಬಂದಿದ್ದ. ಇದನ್ನ ಬಿಟ್ಟು ಮಾಧ್ಯಮಗಳಲ್ಲಿ ಹೆಸರು ಬಂದಿದ್ದು ಬಿಟ್ರೆ ಬೇರೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಅಂದ್ರೆ ಏನೂ ಅಂತಾನೆ ನಮಗೆ ಗೊತ್ತಿಲ್ಲ. ಬಿಟ್ ಕಾಯಿನ್ ಅಂದ್ರೆ ನನಗೂ ಗೊತ್ತಿಲ್ಲ, ನನ್ನ ಮಗ ದರ್ಶನನಿಗೂ ಗೊತ್ತಿಲ್ಲ. ಯಾವನೋ ಒಬ್ಬ ದರೋಡೆಕೋರ ಬಂದು ನಮ್ಮ ಜೊತೆ ಫೋಟೋ ತೆಗೆಸಿಕೊಳ್ತಾನೆ. ಅದು ನಮಗೆ ಗೊತ್ತಿರೋದಿಲ್ಲ. ನಂತರ ಲಮಾಣಿಯವರ ಆಪ್ತ ಅಂತಾರೆ. ನನ್ನ ಪುತ್ರ ದರ್ಶನ ಲಮಾಣಿ ಈಗ ರಾಣೆಬೆನ್ನೂರಲ್ಲಿ ಕ್ರಷರ್, ಮೈನ್ಸ್, ತೋಟ ನೋಡಿಕೊಳ್ತಿದ್ದಾರೆ ಎಂದು ರುದ್ರಪ್ಪ ಲಮಾಣಿ ಹೇಳಿದ್ದಾರೆ.
(i dont know what is bitcoin and my son also doesnt know about it says ex minister rudrappa lamani in ranebennur haveri)