ಹಾವೇರಿ: ಮಾವಿನಮರ ಜಲಾವೃತ; ಆಹಾರ ಸಿಗದೆ ಮರದಲ್ಲಿ ಮಂಗಗಳ ಪರದಾಟ

ತಿನ್ನಲು ಏನೂ ಇಲ್ಲದೆ ಹತ್ತು ಹದಿನೈದು ಮಂಗಗಳು ಪರದಾಡುತ್ತಿವೆ. ಮಾವಿನ ಎಲೆ ತಿಂದು ಹಸಿವು ನೀಗಿಸಿಕೊಳ್ಳುತ್ತಿದೆ. ಗ್ರಾಮಸ್ಥರು ಕೂಡ ಹಣ್ಣುಹಂಪಲು ವಿತರಿಸಲು ಆಗದೆ ಅಸಹಾಯಕರಾಗಿ ನಿಂತಿದ್ದಾರೆ.

ಹಾವೇರಿ: ಮಾವಿನಮರ ಜಲಾವೃತ; ಆಹಾರ ಸಿಗದೆ ಮರದಲ್ಲಿ ಮಂಗಗಳ ಪರದಾಟ
ಮರದಲ್ಲಿ ಸಿಕ್ಕಿಬಿದ್ದು ಮಂಗಗಳ ಪರದಾಟ
Follow us
TV9 Web
| Updated By: Digi Tech Desk

Updated on:Jul 26, 2021 | 10:51 AM

ಹಾವೇರಿ: ಮಳೆ, ನೆರೆ, ಪ್ರವಾಹ, ಆಸ್ತಿ ಪಾಸ್ತಿ, ಜೀವಹಾನಿ. ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಎನ್ನದೆ ಬಹುತೇಕ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಸೃಷ್ಟಿಯಾದ ಅನಾಹುತಗಳು ಒಂದೆರಡಲ್ಲ. ಈ ಸಮಸ್ಯೆಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ. ಮೂಕಪ್ರಾಣಿಗಳು ಕೂಡ ಪ್ರವಾಹ ಪರಿಸ್ಥಿತಿಯ ಸಂಕಷ್ಟಕ್ಕೆ ಸಿಲುಕಿವೆ. ಹಸು, ಎಮ್ಮೆ, ಕುರಿ, ನಾಯಿ ಎನ್ನದೇ ಪ್ರಾಣಿಗಳು ಕೂಡ ಕಷ್ಟ ಅನುಭವಿಸಿವೆ. ಅಂತಹುದೇ ಒಂದು ಘಟನೆ ಹಾವೇರಿಯಲ್ಲಿ ಸಂಭವಿಸಿದೆ.

ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮ ಬಳಿ ವರದಾ ನದಿಯಲ್ಲಿ ಸಿಲುಕಿ ವಾನರಸೇನೆ ಪರದಾಡುತ್ತಿರುವ ಘಟನೆ ಕಂಡುಬಂದಿದೆ. ಪ್ರವಾಹ ಹಿನ್ನೆಲೆ ಮಂಗಗಳು ಮಾವಿನಮರದಲ್ಲಿ ಸಿಲುಕಿಕೊಂಡಿವೆ. ಮರದ ಸುತ್ತ ನೀರು ಆವರಿಸಿರುವ ಹಿನ್ನೆಲೆಯಲ್ಲಿ ಮಂಗಗಳು ಪರದಾಟ ಅನುಭವಿಸುವಂತಾಗಿದೆ. ಮರವು ಜಲಾವೃತವಾಗಿದೆ. ಈ ಕಷ್ಟದಿಂದ ಮಂಗಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದರೂ ರಕ್ಷಿಸಲು ಆಗಿಲ್ಲ.

ತಿನ್ನಲು ಏನೂ ಇಲ್ಲದೆ ಹತ್ತು ಹದಿನೈದು ಮಂಗಗಳು ಪರದಾಡುತ್ತಿವೆ. ಮಾವಿನ ಎಲೆ ತಿಂದು ಹಸಿವು ನೀಗಿಸಿಕೊಳ್ಳುತ್ತಿದೆ. ಗ್ರಾಮಸ್ಥರು ಕೂಡ ಹಣ್ಣುಹಂಪಲು ವಿತರಿಸಲು ಆಗದೆ ಅಸಹಾಯಕರಾಗಿ ನಿಂತಿದ್ದಾರೆ.

ಜಮೀನುಗಳು ಜಲಾವೃತ; ರೈತರು ಕಂಗಾಲು ವರದಾ ನದಿಗೆ ಭರಪೂರ ನೀರು ಬಂದ ಕಾರಣದಿಂದ ಹಾವೇರಿ ತಾಲೂಕಿನ ಕೊರಡೂರು, ಮಣ್ಣೂರು, ಹೊಸರಿತ್ತಿ, ಮೇಲ್ಮುರಿ, ಹಂದಿಗನೂರು ಗ್ರಾಮದ ರೈತರ ಜಮೀನುಗಳು ಜಲಾವೃತವಾಗಿದೆ. ಜಮೀನಿನಲ್ಲಿ ನಿಂತಿರುವ ನೀರಿನಲ್ಲೇ ಮೆಣಸಿನಕಾಯಿ ಕೊಯ್ದುಕೊಳ್ಳುತ್ತಿದ್ದಾರೆ. ಮಾಡಿದ ಖರ್ಚಾದರೂ ಬರಲಿ ಅಂತಾ ನೀರಲ್ಲೇ ನಿಂತು ಮೆಣಸಿನಕಾಯಿ ಪಡೆಯುತ್ತಿದ್ದಾರೆ.

ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವುದರ ಒಳಗಾಗಿ ಮೆಣಸಿನಕಾಯಿ ಹರಿದುಕೊಳ್ಳಬೇಕು ಎಂದು ನೀರಿನಲ್ಲಿ ನಿಂತು ಮೆಣಸಿನಕಾಯಿ ಕೊಯ್ದುಕೊಳ್ಳುತ್ತಿದ್ದಾರೆ. ಹತ್ತಾರು ಆಳುಗಳ ಜೊತೆಗೆ ಕುಟುಂಬದವರೆಲ್ಲ ಸೇರಿಕೊಂಡು ಮೆಣಸಿನಕಾಯಿ ಕೊಯ್ಯುತ್ತಿದ್ದಾರೆ. ಜಮೀನುಗಳು ಜಲಾವೃತ ಆಗಿದ್ದಕ್ಕೆ ಮೆಣಸಿನಕಾಯಿ, ಬೆಂಡೆಕಾಯಿ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಬೆಳೆದ ರೈತರು ಕಂಗಾಲಾಗಿದ್ದಾರೆ.

 ಇದನ್ನೂ ಓದಿ: ನೆರೆಯ ನಡುವೆ ಬದುಕು: ಕೊಚ್ಚಿಹೋಗುತ್ತಿದ್ದ ಎಮ್ಮೆ ರಕ್ಷಿಸಿದ ಯುವಕ; ಹೊಳೆ ದಾಟಿಕೊಂಡು ಶವ ಸಾಗಿಸಿ ಅಂತ್ಯಸಂಸ್ಕಾರ

‘ಮಳೆಯಲ್ಲಿ ನೆನೆಯುತ್ತ ಡ್ಯಾನ್ಸ್​ ಮಾಡಲ್ಲ’ ಎಂದು ಅಸಲಿ ಕಾರಣ ವಿವರಿಸಿದ ನಟಿ ನಿಧಿ

(Monkeys in Mango Tree suffered by Flood Situation in Haveri Farmers also face many Problems)

Published On - 6:48 pm, Sun, 25 July 21