ಪಾತ್ರ ಚೆನ್ನಾಗಿ ಮೂಡಿಬರಲಿ ಎಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ ಸಿನಿಮಾ ಕಲಾವಿದರು. ಆದರೆ ಕೆಲವರಿಗೆ ಕೆಲವು ನಿರ್ದಿಷ್ಟ ದೃಶ್ಯಗಳ ಬಗ್ಗೆ ಹಿಂಜರಿಕೆ ಇರುತ್ತದೆ. ಕೆಲವರು ಕಿಸ್ಸಿಂಗ್ ದೃಶ್ಯಕ್ಕೆ ನೋ ಎನ್ನುತ್ತಾರೆ. ಬೆಡ್ ರೂಂ ಸೀನ್ ಇದ್ದರೆ ಕೆಲವು ನಟಿಯರು ಖಂಡಿತಾ ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ ಗ್ಲಾಮರಸ್ ಬೆಡಗಿ ನಿಧಿ ಅಗರ್ವಾಲ್ ಅವರು ಕೆಲವೊಂದು ಇತಿಮಿತಿಗಳನ್ನು ಹಾಕಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಮಳೆಯಲ್ಲಿ ನೆನೆಯುವ ಸಾಂಗ್ನಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಳೆ ಸಾಂಗ್ಗಳು ಚಿತ್ರರಂಗದಲ್ಲಿ ತುಂಬಾ ಫೇಮಸ್. ತುಂಬ ಹಿಂದಿನ ಕಾಲದಿಂದಲೂ ಅಂಥ ಕೆಲವು ಸಾಂಗ್ಗಳು ಸೂಪರ್ ಹಿಟ್ ಆಗಿವೆ. ಈಗಲೂ ಕೂಡ ನಿರ್ದೇಶಕರು ಕೆಲವು ಸಿನಿಮಾಗಳಲ್ಲಿ ಮಳೆ ಸಾಂಗ್ಗೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಟಿ ನಿಧಿ ಅಗರ್ವಾಲ್ ಅವರಿಗೆ ಆ ರೀತಿ ಹಾಡಿನಲ್ಲಿ ನರ್ತಿಸುವುದು ಎಂದರೆ ಅಲರ್ಜಿ. ತಮ್ಮ ಈ ನಿಲುವಿಗೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿಧಿ ಅಗರ್ವಾಲ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಮಳೆ ಹಾಡಿನಲ್ಲಿ ನರ್ತಿಸುವುದು ಅಷ್ಟು ಸುಲಭವಲ್ಲ. ಮಳೆಯಲ್ಲಿ ನೆನೆಯಬೇಕು. ಶಾಟ್ಸ್ ನಡುವಿನ ಬ್ರೇಕ್ನಲ್ಲಿ ಮೈ ಒಣಗಿಸಿಕೊಳ್ಳಬೇಕು. ಮತ್ತೆ ನೆನೆಯಬೇಕು. ಅದರಲ್ಲೂ ಮಳೆ ಸುರಿಯುತ್ತಿರುವಾಗ ಕಣ್ಣು ಬಿಟ್ಟುಕೊಂಡು ನಟಿಸುವುದು, ಡ್ಯಾನ್ಸ್ ಮಾಡುವುದು ತುಂಬ ಕಷ್ಟ. ಅದೇ ಕಾರಣಕ್ಕಾಗಿ ನಾನು ಸದ್ಯಕ್ಕೆ ಮಳೆ ಸಾಂಗ್ಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಮಾಡಿರುವುದು ಕೆಲವೇ ಸಿನಿಮಾಗಳಾದರೂ ನಿಧಿ ಅಗರ್ವಾಲ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. 2019ರಲ್ಲಿ ತೆರೆಕಂಡ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ಅವರಿಗೆ ಭರ್ಜರಿ ಹಿಟ್ ಸಿಕ್ಕಿದೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಅವರು ಸಿನಿಪ್ರಿಯರಿಗೆ ಇಷ್ಟ ಆಗಿದ್ದಾರೆ. ಮಾಡೆಲ್ ಕೂಡ ಆಗಿರುವ ಅವರು ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ಅವರು ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದಾರೆ. ಮಹೇಶ್ ಬಾಬು ಸಂಬಂಧಿ ಅಶೋಕ್ ಗಲ್ಲಾ ಅವರ ಚೊಚ್ಚಲ ಚಿತ್ರಕ್ಕೂ ನಿಧಿ ಹೀರೋಯಿನ್. ಕೆಲವು ಬಾಲಿವುಡ್ ಚಿತ್ರತಂಡಗಳ ಜೊತೆಗೂ ಅವರು ಮಾತುಕತೆ ಮಾಡುತ್ತಿದ್ದಾರೆ.
ಇದನ್ನೂ ಓದಿ:
ಶಾರುಖ್ ಪುತ್ರಿ ಸುಹಾನಾ ಖಾನ್ ಹಾಟ್ ಫೋಟೋಶೂಟ್ ವೈರಲ್; ಅಪ್ಪನ ಕಮೆಂಟ್ ಏನು?
ದಕ್ಷಿಣ ಭಾರತದ ಈ ಖ್ಯಾತ ನಟಿಯರ ವಿದ್ಯಾರ್ಹತೆ ಏನು? ಇಲ್ಲಿದೆ ಮಾಹಿತಿ