ದಕ್ಷಿಣ ಭಾರತದ ಈ ಖ್ಯಾತ ನಟಿಯರ ವಿದ್ಯಾರ್ಹತೆ ಏನು? ಇಲ್ಲಿದೆ ಮಾಹಿತಿ
ಎಲ್ಲಾ ಅಭಿಮಾನಿಗಳಿಗೂ ಹೀರೋಯಿನ್ಗಳ ಎಜ್ಯುಕೇಷನ್ ಕ್ವಾಲಿಫಿಕೇಷನ್ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ, ದಕ್ಷಿಣ ಭಾರತದ ಈ ಹೀರೋಯಿನ್ಗಳ ಶಿಕ್ಷಣದ ಬಗ್ಗೆ ನೀವು ತಿಳಿದುಕೊಳ್ಳಿ.

ದಕ್ಷಿಣ ಭಾರತದ ಸಾಕಷ್ಟು ಹೀರೋಯಿನ್ಗಳು ಈಗ ಬಾಲಿವುಡ್ಗೂ ಕಾಲಿಡುತ್ತಿದ್ದಾರೆ. ಹಿಂದಿ ಚಿತ್ರರಂಗಕ್ಕೆ ಸರಿಯಾಗಿ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಬೆಳೆದು ನಿಂತಿದೆ. ರಶ್ಮಿಕಾ ಮಂದಣ್ಣ, ಪ್ರಿಯಾಮಣಿ, ಸಮಂತಾ ಅಕ್ಕಿನೇನಿ ಸೇರಿ ಸಾಕಷ್ಟು ಹೀರೋಯಿನ್ಗಳು ಬಾಲಿವುಡ್ಗೆ ಕಾಲಿಟ್ಟು ಹೆಸರು ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳಿಗೂ ಹೀರೋಯಿನ್ಗಳ ಎಜ್ಯುಕೇಷನ್ ಕ್ವಾಲಿಫಿಕೇಷನ್ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ, ದಕ್ಷಿಣ ಭಾರತದ ಈ ಹೀರೋಯಿನ್ಗಳ ಶಿಕ್ಷಣದ ಬಗ್ಗೆ ನೀವು ತಿಳಿದುಕೊಳ್ಳಿ.
ನಯನತಾರಾ
ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ನಯನತಾರಾ. ಸಾಕಷ್ಟು ಸ್ಟಾರ್ ಹೀರೋಗಳ ಜತೆ ನಟಿಸಿದ ಅನುಭವ ಅವರಿಗಿದೆ. ನಯನತಾರಾ ಕೇರಳದ ತಿರುವಲ್ಲದ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ ಪದವಿ ಪಡೆದುಕೊಂಡಿದ್ದಾರೆ.
ಸಾಯಿ ಪಲ್ಲವಿ
ಸಾಯಿ ಪಲ್ಲವಿ ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ವಿಶೇಷ ಎಂದರೆ ಅವರು ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದಾರೆ. ವೈದ್ಯೆ ಆಗಬೇಕು ಎನ್ನುವುದು ಅವರ ಕನಸಾಗಿತ್ತು. ನಂತರ ಅವರು ಬಂದಿದ್ದು ಚಿತ್ರರಂಗಕ್ಕೆ.
ಸಮಂತಾ ಅಕ್ಕಿನೇನಿ
ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಅತ್ಯದ್ಭುತ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವರು ಚೆನ್ನೈನ ಸ್ಟಲ್ಲಾ ಮ್ಯಾರಿಸ್ ಕಾಲೇಜ್ನಲ್ಲಿ ಬಿಕಾಮ್ ಪದವಿ ಪೂರ್ಣಗೊಳಿಸಿದ್ದಾರೆ.
ರಶ್ಮಿಕಾ ಮಂದಣ್ಣ
‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ನಂತರ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇವರು ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ.
ತ್ರಿಶಾ ಕೃಷ್ಣ
ತ್ರಿಶಾ ಅವರು ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಇಟ್ಟುಕೊಂಡಿದ್ದಾರೆ. ಇವರು ಓದಿರೋದು ಬಿಬಿಎ. ಚೆನ್ನೈನ ಎಥಿರಾಜ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ಅನುಷ್ಕಾ ಶೆಟ್ಟಿ
ಬಾಹುಬಲಿಯಂಥ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಅನುಷ್ಕಾ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದಿದ್ದಾರೆ.
ಕಾಜಲ್ ಅಗರ್ವಾಲ್
ಕಾಜಲ್ ಅಗರ್ವಾಲ್ ಕೆಲ ತಿಂಗಳ ಹಿಂದೆ ಮದುವೆ ಆಗಿದ್ದರು. ಸದ್ಯ, ಕುಟುಂಬ ಹಾಗೂ ಸಿನಿಮಾ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಅವರು. ಮುಂಬೈನ ಕಾಲೇಜೊಂದರಲ್ಲಿ ಮಾಸ್ ಮೀಡಿಯಾದಲ್ಲಿ ಡಿಗ್ರೀ ಪಡೆದುಕೊಂಡಿದ್ದಾರೆ ಕಾಜಲ್.
ತಮನ್ನಾ ಭಾಟಿಯಾ
ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡವರು ತಮನ್ನಾ. ಇವರು ಮುಂಬೈನ ನ್ಯಾಷನಲ್ ಕಾಲೇಜಿನಲ್ಲಿ ಬಿಎ ಪದವಿ ಹೊಂದಿದ್ದಾರೆ.
ಶ್ರುತಿ ಹಾಸನ್
ಸಿನಿಮಾ ಹಿನ್ನೆಲೆಯಿಂದ ಬಂದವರು ಶ್ರುತಿ ಹಾಸನ್. ಇವರು ಓದಿದ್ದು ಮುಂಬೈನ ಸೇಂಟ್ ಆ್ಯಂಡ್ರೀವ್ ಕಾಲೇಜಿನಲ್ಲಿ. ಮನಃಶಾಸ್ತ್ರದಲ್ಲಿ ಶ್ರುತಿ ಪದವೀಧರರಾಗಿದ್ದಾರೆ.
ಪ್ರಿಯಾಮಣಿ
ಪ್ರಿಯಾಮಣಿ ಬೆಂಗಳೂರಿನ ಬಿಶಪ್ ಕಾಟನ್ ವುಮನ್ ಕಾಲೇಜಿನಲ್ಲಿ ಮನಃಶಾಸ್ತ್ರದ ಮೇಲೆ ಬಿಎ ಪದವಿ ಪಡೆದುಕೊಂಡಿದ್ದಾರೆ.
ನಿತ್ಯಾ ಮೆನನ್
ದಕ್ಷಿಣ ಭಾರತದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಿತ್ಯಾ ಮೆನ್ ನಟಿಸಿದ್ದಾರೆ. ಇವರು ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಮೇಲೆ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಶಮಂತ್ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ
ರಶ್ಮಿಕಾ ಸಿನಿಮಾದಲ್ಲಿ ಸನ್ನಿ ಲಿಯೋನ್ಗೆ 50 ಲಕ್ಷ ಸಂಬಳ; ಮಾಜಿ ನೀಲಿ ತಾರೆಗೆ ಏನು ಕೆಲಸ?




