ಮೈಸೂರು, ಆಗಸ್ಟ್ 30: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಮುಡಾ (Muda) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರದ್ದೂ ಪಾತ್ರವಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಈ ನಡುವೆ, ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಮುಡಾ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಜಿ.ಟಿ (Dinesh Kumar GT) ಹಾವೇರಿ ವಿಶ್ವವಿದ್ಯಾಲಯದ (Haveri University) ಕುಲಸಚಿವರಾಗಿ ನೇಮಕಗೊಂಡಿದ್ದಾರೆ.
ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಅಕ್ರಮದಲ್ಲಿ ಅಂದಿನ ಮುಡಾ ಆಯಕ್ತ ದಿನೇಶ್ ಕುಮಾರ್ ಜಿ.ಟಿ ಅವರ ಪಾಲುಗಾರಿಕೆಯೂ ಇದೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಕೇಳಿಬಂದ ತಕ್ಷಣ ಮೈಸೂರಿಗೆ ಆಗಮಿಸಿದ್ದ ಸಚಿವ ಭೈರತಿ ಸುರೇಶ್ ಸಭೆ ನಡೆಸಿ ಅಂದಿನ ಮುಡಾ ಆಯುಕ್ತರನ್ನು ಜಿಟಿ ದಿನೇಶ್ ಅವರ ವರ್ಗಾವಣೆಗೆ ಸೂಚಿಸಿದರು. ಅದರಂತೆ, ಸರ್ಕಾರ ದಿನೇಶ್ ಕುಮಾರ್ ಜಿಟಿ ಅವರನ್ನು ಮಾಡಿತ್ತು. ಆದರೆ, ಜಿಟಿ ದಿನೇಶ್ ಅವರಿಗೆ ಸ್ಥಳ ನಿಯೋಜನೆಯಾಗಿರಲಿಲ್ಲ. ಇದೀಗ, ಜಿ.ಟಿ.ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವರಾಗಿ ಸರ್ಕಾರ ನೇಮಕ ಮಾಡಿದೆ.
ಇದನ್ನೂ ಓದಿ: ಮುಡಾ ಹಗರಣ: ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್, ಸಿಎಂಗೆ 2 ದಿನ ರಿಲೀಫ್
ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಜಿಟಿ ಸೇರಿದಂತೆ ಸರ್ಕಾರ ಒಟ್ಟು ಒಂಬತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Fri, 30 August 24