ಮುಡಾ ಹಗರಣ: ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್‌, ಸಿಎಂಗೆ 2 ದಿನ ರಿಲೀಫ್​

ಮುಡಾ ಹಗರಣ ಪ್ರಕರಣಕ್ಕೆ ಸಂಬಮಧಿಸಿದಂತೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್​ ಮತ್ತೆ ಮುಂದೂಡಿದೆ. ಅಲ್ಲದೇ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ. ಇದರೊಂದಿಗೆ ಸಿದ್ದರಾಮಯ್ಯ ಮತ್ತೆ ತಾತ್ಕಾಲಿಕ ರಿಲೀಫ್​ ಸಿಕ್ಕಂತಾಗಿದೆ. ಇನ್ನು ಸಿಎಂ ಪರ ವಕೀಲರ ವಾದ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಮುಡಾ ಹಗರಣ: ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್‌, ಸಿಎಂಗೆ 2 ದಿನ ರಿಲೀಫ್​
ಹೈಕೋರ್ಟ್ & ಸಿದ್ದರಾಮಯ್ಯ
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on:Aug 29, 2024 | 4:44 PM

ಬೆಂಗಳೂರು, (ಆಗಸ್ಟ್ 29): ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಇಂದು (ಆಗಸ್ಟ್ 29) ಹೈಕೋರ್ಟ್​ ವಿಚಾರಣೆ ನಡೆಸಿದ್ದು, ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸುದೀರ್ಘವಾಗಿ ವಾದ ಮಂಡಿಸಿದರು. ಇನ್ನು ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ ಅವರು ಶನಿವಾರ ವಾದ ಮಂಡಿಸುವುದಾಗಿ ಕೋರ್ಟ್​ಗೆ ತಿಳಿಸಿದರು. ಇದಕ್ಕೆ ಕೋರ್ಟ್​ ಸಹ ಒಪ್ಪಿಗೆ ನೀಡಿದೆ. ಇದರೊಂದಿಗೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೋರ್ಟ್, ಆಗಸ್ಟ್ 31 ಬೆಳಗ್ಗೆ 10:30ಕ್ಕೆ ಮುಂದೂಡಿತು.

ಅಲ್ಲದೇ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ. ಇನ್ನು ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೂ ಸಹ ಸೂಚನೆ ನೀಡಿದೆ.

ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ವಾದ: ಕೆಲ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಆಕ್ಷೇಪಣೆ ಗೆ ನಮ್ಮ ಪ್ರತಿಕ್ರಿಯೆ ಸಲ್ಲಿಸಬೇಕಿದೆ. ರಾಜ್ಯಪಾಲರು ಈಗಲೂ ತಮ್ಮ ಆಕ್ಷೇಪಣೆ ಸಲ್ಲಿಸಿಲ್ಲ. ದೂರುದಾರ ಪ್ರದೀಪ್ ಕುಮಾರ್ ಕೂಡಾ ಆಕ್ಷೇಪಣೆ ಸಲ್ಲಿಸಿಲ್ಲ.

ರಾಜ್ಯಪಾಲರ ಪರ ವಕೀಲ: ರಾಜ್ಯಪಾಲರು ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ. ಅವಶ್ಯವಿದ್ದರೆ ರಾಜ್ಯಪಾಲರು ತಮ್ಮ ಕಡತ ಸಲ್ಲಿಸಲು ಸಿದ್ದರಿದ್ದಾರೆ. ಸಾಲಿಸಿಟರ್ ಜನರಲ್ ಪರ ವಕೀಲರಿಂದ ಹೈಕೋರ್ಟ್ ಗೆ ಮಾಹಿತಿ ನೀಡಿದರು.

ಸಿಎಂ ಪರ ವಕೀಲ: ಇಬ್ಬರು ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸುವುದಿಲ್ಲವೆಂದು ದಾಖಲಿಸಿ ಎಂದು‌ ಹೈಕೋರ್ಟ್ ಗೆ ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದರು.

ರಾಜ್ಯಪಾಲರ ಪರ ವಕೀಲ: ಕಾನೂನಿನ ಪ್ರಶ್ನೆಯಿರುವುದರಿಂದ ಆಕ್ಷೇಪಣೆ ಸಲ್ಲಿಸುವುದಿಲ್ಲ. ರಾಜ್ಯಪಾಲರು, ಪ್ರದೀಪ್ ಪರ ವಕೀಲರ ಹೇಳಿಕೆ ದಾಖಲಿಸಿದ ಹೈಕೋರ್ಟ್ ರಾಜ್ಯಪಾಲರ ಆಕ್ಷೇಪಣೆಗೆ ಕಾಯದೇ ವಿಚಾರಣೆ ಮುಂದುವರಿಸಲು ರಾಜ್ಯಪಾಲರ ಪರ ವಕೀಲರಿಂದ ಹೈಕೋರ್ಟ್ ಗೆ ಮನವಿ.

ಸಿಎಂ ಪರ ವಕೀಲ: ಸಿಎಂ ಪರ ವಕೀಲ: ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಬಗ್ಗೆ ನಾನು ವಾದಿಸಿದ್ದೆ. ಇದೊಂದೋ ಪಾಯಿಂಟ್ ಆಧಾರದಲ್ಲಿ ರಾಜ್ಯಪಾಲರ ಆದೇಶ ರದ್ದುಪಡಿಸಬೇಕು. ಪಿ.ಸಿ.ಕಾಯ್ದೆ 17 ಎ ಅಡಿ ಪೂರ್ವಾನುಮತಿ ಬೇಕು. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು…. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನ ಆದೇಶಗಳಿವೆ. ಈ ಕುರಿತೂ ನಾನು ವಾದ ಮಂಡಿಸಲಿದ್ದೇನೆ. ಪ್ರತಿವಾದಿ ಟಿಜೆ ಅಬ್ರಹಾಂ ಸಲ್ಲಿಸಿರುವ ಆಕ್ಷೇಪಣೆ ಗಮನಿಸಬೇಕು. 17 ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೇ ಎಂದಿದ್ದಾರೆ. ಹೀಗಾಗಿ ರಾಜ್ಯಪಾಲರು ಅಬ್ರಹಾಂ ಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು ಎಂದರು.

ಸಿಎಂ ಪರ ವಕೀಲ: ಪಿ.ಸಿ.ಕಾಯ್ದೆ 17 ಎ ಅಡಿ ಪೂರ್ವಾನುಮತಿ ಬೇಕು. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ.

ಸಿಎಂ ಪರ ವಕೀಲ: ರಾಜ್ಯಪಾಲರು 17 ಎ ಅಡಿ ಅನುಮತಿ ನೀಡಿದ್ದಾರೆ. ಆದರೆ ದೂರುದಾರ ಈಗ ಪೂರ್ವಾನುಮತಿ ಬೇಕಿಲ್ಲವೆನ್ನುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸಬೇಕು.‌ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನೇ ಹಿಂಪಡೆಯಬೇಕು. ರಾಜ್ಯಪಾಲರ ಮುಂದೆ ಒಂದು, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಅನುಮತಿ ನೀಡಿಲ್ಲವೆಂದು ಕೋರ್ಟ್ ಭಾವಿಸಬೇಕು.

ಸಿಎಂ ಪರ ವಕೀಲ: ಸ್ನೇಹಮಯಿ ಕೃಷ್ಣ ರಾಜ್ಯೊಪಾಲರಿಗೆ ದೂರು ನೀಡಿದ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿಲ್ಲ.

ಜಡ್ಜ್ ಎಂ ನಾಗಪ್ರಸನ್ನ: ಇದೇ ಆರೋಪಗಳುಳ್ಳ ಎರಡು ದೂರುಗಳಿವೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಸಿಎಂ ಪರ ವಕೀಲ: ಆದರೆ ಉಳಿದ ಇಬ್ಬರ ದೂರುಗಳಿಗೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಆದ್ರೆ, ಉಳಿದ ಇಬ್ಬರ ದೂರುಗಳಿಗೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ದೂರುದಾರರು ತಮ್ಮ ಪ್ರಮಾಣಪತ್ರದಲ್ಲಿ 17 ಎ ಬೇಕಿಲ್ಲವೆಂಬುದಕ್ಕೆ ಕಾರಣ ನೀಡಿದ್ದಾರೆ. ಸಿಎಂ ಆದೇಶ ಅಥವಾ ಶಿಫಾರಸು ಪ್ರಶ್ನಿಸಿಲ್ಲವಾದ್ದರಿಂದ 17 ಎ ಬೇಕಿಲ್ಲವೆಂದಿದ್ದಾರೆ .

ಸಿಎಂ ಪರ ವಕೀಲ: 10-15 ವರ್ಷ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್.ಡಿ.ಕುಮಾರಸ್ವಾಮಿ ಇವರುಗಳ ಆರೋಪಪಟ್ಟಿ ಸಿದ್ಧವಾಗಿದ್ದರೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ‌

ಸಿಎಂ ಪರ ವಕೀಲ: ರಾಜ್ಯಪಾಲರು ಯಾವುದೇ ಒಂದು ಅಂಶದ ಬಗ್ಗೆಯೂ ವಿವೇಚನೆ ಬಳಸಿಲ್ಲ. ಕ್ಯಾಬಿನೆಟ್ ಸಲಹೆಯನ್ನೂ ರಾಜ್ಯಪಾಲರು ಪಾಲಿಸಿಲ್ಲ. ಈ ರೀತಿಯ ವಿಚಾರಗಳಿಗೆ ಕ್ಯಾಬಿನೆಟ್ ಸೂಚನೆ ಪರಿಗಣಿಸಬೇಕು.

ಜಡ್ಜ್ ಎಂ ನಾಗಪ್ರಸನ್ನ​: ಆದರೆ ಸಿಎಂ ವಿರುದ್ಧದ ದೂರಿಗೆ ಕ್ಯಾಬಿನೆಟ್ ಸೂಚನೆ ಪರಿಗಣಿಸಬೇಕೇ ?

ಸಿಎಂ ಪರ ವಕೀಲ: ರಾಜ್ಯಪಾಲರು ಕ್ಯಾಬಿನೆಟ್ ಸೂಚನೆ ಪರಿಗಣಿಸಬೇಕು ಎಂದು ರಾಮೇಶ್ವರ್ ಪ್ರಸಾದ್ ಮತ್ತಿತರ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಸಿಂಘ್ವಿ, ರಾಜ್ಯಪಾಲರ ಕ್ರಮಗಳನ್ನು ಪರಾಮರ್ಶೆಗೆ ಒಳಪಡಿಸಬಹುದು ಎಂದರು.

ಜಡ್ಜ್ ಎಂ ನಾಗಪ್ರಸನ್ನ​: ಈ ಅಂಶದ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ.

ಸಿಎಂ ಪರ ವಕೀಲ: ಹಲವು ವೈವಿಧ್ಯಮಯ ವಿಚಾರಗಳನ್ನು ಕ್ಯಾಬಿನೆಟ್ ಪ್ರಸ್ತಾಪಿಸಿತ್ತು. ಅವುಗಳಲ್ಲಿ ಒಂದಕ್ಕೂ ರಾಜ್ಯಪಾಲರು ಉತ್ತರಿಸಿಲ್ಲ.ಜನ ಆಯ್ಕೆ ಮಾಡಿದ ಸರ್ಕಾರವನ್ನು ರಾಜ್ಯಪಾಲರು ಇಂಥ ಕ್ರಮಗಳಿಂದ ಬದಲಿಸಲಾಗದು. ಹೀಗಾಗಿಯೇ ರಾಜ್ಯಪಾಲರ ಅಧಿಕಾರಗಳಿಗೆ ನಿರ್ಬಂಧಗಳಿವೆ. ಹೀಗಾಗಿ ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.

ಸಿಎಂ ಪರ ವಕೀಲ: ಡಿನೋಟಿಫಿಕೇಷನ್ ಗಾಗಿ ಸಿದ್ದರಾಮಯ್ಯ ಯಾವುದೇ ಪ್ರತಿಫಲ ಪಡೆದಿಲ್ಲ. 2004 ರಲ್ಲಿ ಸಿಎಂ ಮೈದುನನಿಗೆ ಜಮೀನು ವರ್ಗಾವಣೆಯಾಯಿತು.. 2005 ರಲ್ಲಿ ಭೂಮಿಯನ್ನು ಕೃಷಿಯೇತರ ಪರಿವರ್ತನೆ ಮಾಡಲಾಯಿತು. 2010 ರಲ್ಲಿ ಸಿಎಂ ಪತ್ನಿ ಭೂಮಿಯನ್ನು ಖರೀದಿ ಮಾಡಿದರು. ಜಮೀನಿಗೆ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಇದನ್ನು ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ.

ಸಿಎಂ ಪರ ವಕೀಲ: ರಾಜ್ಯಪಾಲರು ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ನೀಡಿಲ್ಲ. ಕೇವಲ 4 ಪುಟಗಳ ಅನುಮತಿಯನ್ನಷ್ಟೇ ನೀಡಿದ್ದಾರೆ. ಡಿನೋಟಿಫಿಕೇಷನ್ ಆದೇಶವನ್ನು ಈ ಹಿಂದೆಯೂ ಹಲವರು ಮಾಡಿದ್ದಾರೆ. ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ತಿಳಿಯುತ್ತಿಲ್ಲ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ನಬಮ್ ರೇಬಿಯಾ, ಎಂ.ಪಿ.ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕೇಸ್ ಉಲ್ಲೇಖಿಸಿ ತಮ್ಮ ವಾದ ಅಂತ್ಯಗೊಳಿಸಿದರು.

ರಾಜ್ಯಪಾಲರ ವಕೀಲ: ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಅಂತ್ಯಗೊಳಿಸಿದ ಬಳಿಕ ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ ಮಾತನಾಡಿ, ಶನಿವಾರ ವಾದ ಮಂಡಿಸುವುದಾಗಿ ಕೋರ್ಟ್​ ಗೆ ಹೇಳಿದರು. ಇದಕ್ಕೆ ಹೈಕೋರ್ಟ್ ಸಹ ಸಮ್ಮತಿಸಿದ್ದು, ಆಗಸ್ಟ್ 31 ರಂದು ಬೆಳಗ್ಗೆ 10.30 ಕ್ಕೆ ವಿಚಾರಣೆ ಆರಂಭಿಸಲು ಒಪ್ಪಿಗೆ ನೀಡಿದೆ.

Published On - 4:24 pm, Thu, 29 August 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್