ಭಾರತಕ್ಕೆ ನಾಳೆ ಬರಲಿದೆ ನವೀನ್ ಮೃತದೇಹ: ಉಕ್ರೇನ್​ನಲ್ಲಿ ಮೃತಪಟ್ಟಿದ್ದ ಚಳಗೇರಿ ವಿದ್ಯಾರ್ಥಿ

ನಸುಕಿನ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಶರೀರ ಬರಲಿದೆ. ಒಂಬತ್ತು ಗಂಟೆಯ ವೇಳೆ ಸ್ವಗ್ರಾಮಕ್ಕೆ ತಲುಪುವ ಸಾಧ್ಯತೆಯಿದೆ.

ಭಾರತಕ್ಕೆ ನಾಳೆ ಬರಲಿದೆ ನವೀನ್ ಮೃತದೇಹ: ಉಕ್ರೇನ್​ನಲ್ಲಿ ಮೃತಪಟ್ಟಿದ್ದ ಚಳಗೇರಿ ವಿದ್ಯಾರ್ಥಿ
ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್‌
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 20, 2022 | 8:11 AM

ಹಾವೇರಿ: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಮೃತಪಟ್ಟಿದ್ದ ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಸೋಮವಾರ (ಮಾರ್ಚ್ 21) ಸ್ವಗ್ರಾಮಕ್ಕೆ ತಲುಪಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಸುಕಿನ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಶರೀರ ಬರಲಿದೆ. ಒಂಬತ್ತು ಗಂಟೆಯ ವೇಳೆ ಸ್ವಗ್ರಾಮಕ್ಕೆ ತಲುಪುವ ಸಾಧ್ಯತೆಯಿದೆ. ಉಕ್ರೇನ್​ನ ಖಾರ್ಕಿವ್​ನಲ್ಲಿ ಮಾರ್ಚ್ 1ರಂದು ರಷ್ಯಾ ಪಡೆಗಳು ನಡೆಸಿದ್ದ ನಡೆದಿದ್ದ ಶೆಲ್ ದಾಳಿಯಲ್ಲಿ ನವೀನ್ ಮೃತಪಟ್ಟಿದ್ದರು. ಅಲ್ಲಿ ನವೀನ್ ಎಂಬಿಬಿಎಸ್ ಓದುತ್ತಿದ್ದರು.

ಮೆಡಿಕಲ್ ಕಾಲೇಜಿಗೆ ಪಾರ್ಥಿವ ಶರೀರ ದಾನ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಖಾರ್ಕೀವ್ ನಲ್ಲಿ ನಾಲ್ಕನೆ ವರ್ಷದ ಎಂಬಿಬಿಎಸ್ ಓದುತ್ತಿದ್ದ. ಮಗನ ಪಾರ್ಥಿವ ಶರೀರ ಬರುವುದು ತಡವಾದಾಗ ನಿರಾಶೆ ಆಗಿತ್ತು. ಮಗನ ಪಾರ್ಥಿವ ಶರೀರ ಬರುವ ವಿಚಾರ ಕೇಳಿದ ನಂತರ ನಿರಾಶೆ ದೂರವಾಗಿದೆ. ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಲಾಗಿದೆ. ಸೋಮವಾರ ಬೆಳಗ್ಗೆ (March 21) ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರೆತಿದೆ.

21 ದಿನಗಳಿಗೆ ಮಗನ ಪಾರ್ಥಿವ ಶರೀರ ಬರಲಿದೆ. ಮಗನ ಪಾರ್ಥಿವ ಶರೀರ ಮನೆಗೆ ಬರುವಂತೆ ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು. ಮಗನ ಪಾರ್ಥಿವ ಶರೀರ ಮನೆಗೆ ಬಂದ ನಂತರ, ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಮಗನ ಪಾರ್ಥಿವ ಶರೀರ ಡೊನೇಟ್ ಮಾಡಲಾಗುವುದು. ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲೆಂದು ಮಗನ ಮೃತದೇಹ ಡೊನೇಟ್ ಮಾಡಲು ನಿರ್ಧರಿಸಲಾಗಿದೆ ಎಂದು ನವೀನ್ ತಂದೆ ಶೇಖರಗೌಡ ಟಿವಿ9ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಅತ್ತ ರಷ್ಯಾ ಮತ್ತು ಉಕ್ರೇನ್ ಯುದ್ಧಭೂಮಿಯಿಂದ ಶಿವರಾತ್ರಿಯ ದಿನ ಕರ್ನಾಟಕಕ್ಕೆ ಬರಸಿಡಿಲಿನಂತೆ ಕೆಟ್ಟ ಸುದ್ದಿಯೊಂದು ಅಪ್ಪಳಿಸಿತ್ತು. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿ ವಾಸವಿದ್ದ ಹಾವೇರಿ ಜಿಲ್ಲೆ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದ.(Death of Haveri medical student Naveen janagoudar). ಉಕ್ರೇನ್​ನ ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿತ್ತು.

ಇದನ್ನೂ ಓದಿ: ನಾನು ಸಾಯುವರೆಗೆ ಅವನು ನನ್ನಲ್ಲಿ ಬದುಕಿರುತ್ತಾನೆ ಎಂದರು ನವೀನ್ ಶೇಖರಪ್ಪ ಗ್ಯಾನಗೌಡರ್ ತಾಯಿ

ಇದನ್ನೂ ಓದಿ: Russia Ukraine War: ನಾನು ನವೀನ್ ಒಳ್ಳೆಯ ಸ್ನೇಹಿತರಾಗಿದ್ದೇವು; ವಿದ್ಯಾರ್ಥಿನಿ ವರ್ಷಿತಾ ಹೇಳಿಕೆ