ಸವಣೂರು: ಇತ್ತೀಚೆಗೆ ಧರೆಗುರುಳಿದ್ದ ದೊಡ್ಡ ಹುಣಸೆ ಮರಕ್ಕೆ ಮತ್ತೆ ಕಳೆ ಬಂದಿದೆ, ಮಠ ಮತ್ತು ಜಿಲ್ಲಾಡಳಿತದ ಪ್ರಯತ್ನಕ್ಕೆ ಫಲ ಸಿಕ್ಕಿದೆ!
ಎರಡು ಸಾವಿರ ವರ್ಷ ಇತಿಹಾಸ ಇರುವ ಮರಕ್ಕೆ ಮತ್ತೆ ಕಳೆ ಬಂದಿದೆ. ಮಠದ ಶ್ರೀಗಳು, ಧಾರವಾಡ ಕೃಷಿ ವಿವಿಯ ವಿಜ್ಞಾನಿಗಳು, ಜಿಲ್ಲಾಡಳಿತ ದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಮಠದ ಭಕ್ತರಲ್ಲಿ ಮತ್ತೆ ಮರಗಳಿಗೆ ದೈವಿ ಶಕ್ತಿಯ ಭಗ್ಗೆ ನಂಬಿಕೆ ಬಂದಿದೆ.
ಅದು 2,000 ವರ್ಷ ಇತಿಹಾಸ ಹೊಂದಿರುವ ಮರ. ಆದರೆ ಅದು ಕಳೆದ ಜುಲೈ 7 ರಂದು ಮಳೆ ಗಾಳಿಗೆ ಧರೆಗುರುಳಿತ್ತು. ಮಠದ ಶ್ರೀಗಳು ಮತ್ತು ಅರಣ್ಯ ಇಲಾಖೆ ಶ್ರಮದಿಂದ ಮರಳಿ ನೆಡಲಾಗಿತ್ತು. ಬೃಹದಾಕಾರದ ಮರ, ಮರವನ್ನು ಆಶ್ಚರ್ಯದಿಂದ ನೊಡುತ್ತಿರುವ ಜನ, ಶಾಲಾ ಕಾಲೇಜ ಮಕ್ಕಳು, ಮಠದ ಭಕ್ತರು. 2,000 ವರ್ಷದ ಇತಿಹಾಸ ಹೊಂದಿರುವ ಮರಗಳನ್ನು ಘೋರಕನಾಥ ತಪಸ್ವಿಗಳು ನೆಟ್ಟಿದ್ದರು ಎಂದು ಹೇಳಲಾಗುತ್ತದೆ. ಹೌದು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರದಲ್ಲಿರುವ ಎರಡು ಸಾವಿರ ವರ್ಷ ಇತಿಹಾಸ ಇರುವ ಮೂರು ದೊಡ್ಡ ಹುಣಸೆ (ಬಾಂಬುಕೇಶಯಾ) ಮರಗಳಲ್ಲಿ ಒಂದು ಮರ ಕಳೆದ ಜುಲೈ 7 ರಂದು ಧರೆಗುರುಳಿತ್ತು.
ಮಠದ ಶ್ರೀ ಗಳಾದ ಚನ್ನಬಸವ ಶ್ರೀಗಳು ಧಾರವಾಡದ ಕೃಷಿ ವಿ ವಿ, ಅರಣ್ಯ ಇಲಾಖೆ, ಜಿಲ್ಲಾಡಳಿತದ ಸಹಕಾರದಲ್ಲಿ ಮರದ ಬುಡವನ್ನು ಸ್ವಚ್ಚಗೊಳಿಸಿ ಟರ್ಮಿನಲ್ ಚೀಕಿತ್ಸೆ ನೀಡಿದ್ದರು 18 ಮೀಟರ್ ಎತ್ತರ 12 ಮೀಟರ್ ಅಗಲವಾಗಿದ್ದ ಈ ಮರ ಧರೆಗುರುಳಿದ್ದರಿಂದ ಮಠದ ಭಕ್ತರು ಬೇಸರ ವ್ಯಕ್ತಪಡಿಸಿದ್ದರು. ಜುಲೈ11 ರಂದು ಮರವನ್ನು ಅದೆ ಸ್ಥಳದಲ್ಲಿ ಹದಿನೈದು ಅಡಿ ಗುಂಡಿಯಲ್ಲಿ ಪುನಃ ನೆಡಲಾಗಿತ್ತು. ಆ ಮರ ಇದೀಗ ಚಿಗುರು ಬಂದಿದ್ದು ಶ್ರೀಗಳು,ಭಕ್ತ ಸಮೂಹದಕ್ಕೆ ಸಂತಸ ತಂದಿದೆ.
ಮರದ ಬುಡಕ್ಕೆ ಫಂಗಸ್ ಆಗಿ ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿತ್ತು ಮರದ ಕೋಳೆತ ಭಾಗವನ್ನು ಸ್ವಚ್ಚ ಮಾಡಿ ರಾಸಾಯನಿಗಳನ್ನು ಸಿಂಪಡಿಸಿ ಮರದ ಟೊಂಗೆಗಳನ್ನು ಕತ್ತರಿಸಿ ಬೃಹತ್ ಕ್ರೇನ್, ಜೆಸಿಬಿ ಬಳಸಿ ಮರವನ್ನು ಅದೆ ಸ್ಥಳದಲ್ಲಿ 15 ಅಡಿ ಗುಂಡಿ ತೋಡಿ ನೆಡಲಾಗಿತ್ತು. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಮರದ ತುಂಬ ಇದೀಗ ಚಿಗುರು ಬಂದಿದೆ. ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳು ಮರವನ್ನು ನೋಡಲು ಬರುತ್ತಿದ್ದಾರೆ.
ವರದಿ: ರವಿ ಹೂಗಾರ, ಟಿವಿ 9, ಹಾವೇರಿ
Published On - 5:37 pm, Tue, 28 November 23