ಹಾನಗಲ್ ಉಪಚುನಾವಣೆ: ಬಿರುಸಿನಿಂದ ಸಾಗುತ್ತಿರುವ ಮತದಾನ

| Updated By: sandhya thejappa

Updated on: Oct 30, 2021 | 11:42 AM

ಬೆಳಿಗ್ಗೆ ಏಳು ಗಂಟಯಿಂದ 9 ಗಂಟೆವರೆಗೆ ಶೇಕಡಾ 10.1ರಷ್ಟು ಮತದಾನ ನಡೆದಿದೆ. ಹನ್ನೊಂದು ಗಂಟೆಯವರೆಗೆ ಶೇಕಡಾ 24.31ರಷ್ಟು ಮತದಾನ ನಡೆದಿದ್ದು, ಮತದಾರರು ಹುರುಪಿನಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ.

ಹಾನಗಲ್ ಉಪಚುನಾವಣೆ: ಬಿರುಸಿನಿಂದ ಸಾಗುತ್ತಿರುವ ಮತದಾನ
ಸಾಂದರ್ಭಿಕ ಚಿತ್ರ
Follow us on

ಹಾವೇರಿ: ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 1,05,525 ಪುರುಷರು, 98,953 ಮಹಿಳೆಯರು, 83 ಸೇವಾ ಮತದಾರರು, ಮೂವರು ಇತರೆ ಮತದಾರರು ಸೇರಿದಂತೆ ಒಟ್ಟು 2.04,564 ಮತದಾರರು ಹಕ್ಕು ಚಲಾಯಿಸುತ್ತಾರೆ. 239 ಮೂಲ ಮತಗಟ್ಟೆಗಳು ಮತ್ತು 24 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 263 ಮತಗಟ್ಟೆಗಳು ಸಿದ್ಧವಾಗಿವೆ. 263 ಮತಗಟ್ಟೆಗಳಲ್ಲಿ ಒಟ್ಟು 1,155 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಳಿಗ್ಗೆ ಏಳು ಗಂಟಯಿಂದ 9 ಗಂಟೆವರೆಗೆ ಶೇಕಡಾ 10.1ರಷ್ಟು ಮತದಾನ ನಡೆದಿದೆ. ಹನ್ನೊಂದು ಗಂಟೆಯವರೆಗೆ ಶೇಕಡಾ 24.31ರಷ್ಟು ಮತದಾನ ನಡೆದಿದ್ದು, ಮತದಾರರು ಹುರುಪಿನಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ.

ಸಂಸದ ಶಿವಕುಮಾರ್ ಉದಾಸಿ ಹಾನಗಲ್‌ ಪಟ್ಟದಲ್ಲಿ ಕುಟುಂಬ ಸಮೇತ ಬಂದು ಮತದಾನ ಮಾಡಿದ್ದಾರೆ. ಪತ್ನಿ ರೇವತಿ, ತಾಯಿ, ಪುತ್ರಿಯ ಜೊತೆ ಬಂದು ಮತ ಚಲಾವಣೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಉದಾಸಿ‌, ಅತ್ಯಧಿಕ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಅಪ್ಪುದು ಸಡನ್ ಡೆತ್, ನಟ ಪುನೀತ್‌ಗೆ ಈ ಹಿಂದೆ ಯಾವುದೇ ಸಮಸ್ಯೆ ಇರಲಿಲ್ಲ: ಕೊನೆಯ ಕ್ಷಣ ವಿವರಿಸಿದ ಕುಟುಂಬ ವೈದ್ಯ ಡಾ. ರಮಣ

Orange Signal : ‘ಗುಡ್ ನ್ಯೂಸ್ ಯಾವಾಗ?’ ಹೀಗೆ ಕೇಳುವುದನ್ನು ನಿಲ್ಲಿಸುವುದು ಸೂಕ್ತ