ಪರಿತಪಿಸುತ್ತಿರುವ ಎಣ್ಣೆ ಪ್ರಿಯರು! ಹಾವೇರಿ ಹೃದಯ ಭಾಗದಲ್ಲಿ ಏನು ಮಾಡಿದ್ದಾರೆ ನೋಡಿ!

ಹಾವೇರಿ: ಎಣ್ಣೆ ಪ್ರಿಯರನ್ನು ಕೊರೊನಾ ಸೋಂಕು ಪರಿ ಪರಿಯಾಗಿ ಕಾಡತೊಡಗಿದೆ. ಹಾವೇರಿ ನಗರದ ಹೃದಯ ಭಾಗದಲ್ಲಿ ಪಿ.ಬಿ. ರಸ್ತೆಯಲ್ಲಿ ಮೇಲ್ಛಾವಣಿ ಕೊರೆದು ವೈನ್ ಶಾಪ್ ಗೆ ಕನ್ನ ಹಾಕಿದ್ದಾರೆ. ಮುತ್ತುರಾಜ ಎಂಬುವರಿಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ವೈನ್ ಸೆಂಟರ್ ನಲ್ಲಿ ಕಳ್ಳತನ ವರದಿಯಾಗಿದೆ. ಎಷ್ಟು ಪ್ರಮಾಣದ ಮದ್ಯ ಕಳ್ಳತನ ಆಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಲಾಕ್ ಡೌನ್ ನಿಂದಾಗಿ ಅಂಗಡಿಯನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಲಾಕ್ ಮಾಡಿ, ಸೀಲ್ ಹಾಕಿದ್ದರು. ಆದರೂ ಮೇಲ್ಛಾವಣಿ ಮೂಲಕ ಕಳ್ಳತನ ನಡೆದಿದೆ. […]

ಪರಿತಪಿಸುತ್ತಿರುವ ಎಣ್ಣೆ ಪ್ರಿಯರು! ಹಾವೇರಿ ಹೃದಯ ಭಾಗದಲ್ಲಿ ಏನು ಮಾಡಿದ್ದಾರೆ ನೋಡಿ!
ಸಾಧು ಶ್ರೀನಾಥ್​

Updated on: Apr 16, 2020 | 4:11 PM

ಹಾವೇರಿ: ಎಣ್ಣೆ ಪ್ರಿಯರನ್ನು ಕೊರೊನಾ ಸೋಂಕು ಪರಿ ಪರಿಯಾಗಿ ಕಾಡತೊಡಗಿದೆ. ಹಾವೇರಿ ನಗರದ ಹೃದಯ ಭಾಗದಲ್ಲಿ ಪಿ.ಬಿ. ರಸ್ತೆಯಲ್ಲಿ ಮೇಲ್ಛಾವಣಿ ಕೊರೆದು ವೈನ್ ಶಾಪ್ ಗೆ ಕನ್ನ ಹಾಕಿದ್ದಾರೆ.

ಮುತ್ತುರಾಜ ಎಂಬುವರಿಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ವೈನ್ ಸೆಂಟರ್ ನಲ್ಲಿ ಕಳ್ಳತನ ವರದಿಯಾಗಿದೆ. ಎಷ್ಟು ಪ್ರಮಾಣದ ಮದ್ಯ ಕಳ್ಳತನ ಆಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಲಾಕ್ ಡೌನ್ ನಿಂದಾಗಿ ಅಂಗಡಿಯನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಲಾಕ್ ಮಾಡಿ, ಸೀಲ್ ಹಾಕಿದ್ದರು. ಆದರೂ ಮೇಲ್ಛಾವಣಿ ಮೂಲಕ ಕಳ್ಳತನ ನಡೆದಿದೆ. ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Published On - 4:04 pm, Thu, 16 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us