HD Deve Gowda Birthday: ಇಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ ಹುಟ್ಟುಹಬ್ಬ; ಟ್ವೀಟ್​ ಮೂಲಕ ಶುಭ ಹಾರೈಸಿದ ಬಿ.ಎಸ್​ ಯಡಿಯೂರಪ್ಪ

| Updated By: Digi Tech Desk

Updated on: May 18, 2021 | 12:59 PM

Happy Birthday HD Devegowda: ಮಾಜಿ ಪ್ರಧಾನಿ ಹೆಚ್​.ಡಿ.ದೇವೆಗೌಡ ಅವರಿಗೆ ಇಂದು (ಮೇ 18) ಹುಟ್ಟು ಹಬ್ಬದ ಸಂಭ್ರಮ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

HD Deve Gowda Birthday: ಇಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ ಹುಟ್ಟುಹಬ್ಬ; ಟ್ವೀಟ್​ ಮೂಲಕ ಶುಭ ಹಾರೈಸಿದ ಬಿ.ಎಸ್​ ಯಡಿಯೂರಪ್ಪ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Follow us on

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​.ಡಿ.ದೇವೆಗೌಡ ಅವರಿಗೆ ಇಂದು (ಮೇ 18) ಹುಟ್ಟು ಹಬ್ಬದ ಸಂಭ್ರಮ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.ಮೇ 18ರಂದು ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡ ಅವರು 89ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದೇವೇಗೌಡರ ಹುಟ್ಟುಹಬ್ಬಕ್ಕೆ ಅನೇಕ ರಾಜಕೀಯ ಮುಖಂಡರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ಹಿರಿಯ ಮತ್ತು ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಹೆಚ್​.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ ಸದಾ ನಿಮಗಿರಲಿ ಎಂದು ಮುಂಖ್ಯಮಮತ್ರಿ ಬಿ.ಎಸ್​ ಯಡಿಯೂರಪ್ಪನವರು ಟ್ವೀಟ್​ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮೂಲಕ ದೇವೇಗೌಡರಿಗೆ ಶುಭ ಹಾರೈಸಿದ್ದು, ಮಾಜಿ ಪ್ರಧಾನಿ ಮತ್ತು ಜೆಡಿಎಸ್​ ಪಕ್ಷದ ಹಿರಿಯ ನಾಯಕ ಎಚ್​.ಡಿ.ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು. ರಾಜ್ಯ ಮತ್ತು ದೇಶಕ್ಕೆ ನಿಮ್ಮ ಅನುಭವದ ಮಾರ್ಗದರ್ಶನ ಸದಾ ದಿಗಲಿ ಎಂದು ಹಾರೈಸಿದ್ದಾರೆ.

ಕೊವಿಡ್ ಸೋಂಕಿತರಿಗೆ ನೆರವಾಗುವಂತೆ ಮನವಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸದೇ ತಮ್ಮ ಹತ್ತಿರದ ಕೊವಿಡ್ ಸೋಂಕಿತರ ಆರೈಕೆ ಮತ್ತು ನೆರವಿಗೆ ಸಹಾಯ ಮಾಡಬೇಕೆಂದು ಅಭಿಮಾನಿಗಳು ಮತ್ತು ಜೆಡಿಎಸ್​ ಕಾರ್ಯಕರ್ತರಲ್ಲಿ ಎರಡು ದಿನಗಳ ಹಿಂದೆಯೇ ಕೋರಿದ್ದರು. ಸದ್ಯ ಕೊವಿಡ್​ನಿಂದಾಗಿ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಡಗರ- ಸಂಭ್ರಮದ ಹುಟ್ಟುಹಬ್ಬದ ಆಚರಣೆ ಸಲ್ಲದು. ಸಂಭ್ರಮವನ್ನು ವಿವಿಧ ರೂಪಗಳಲ್ಲಿ ಆಚರಿಸುವ ಬದಲಿಗೆ ಅದೇ ಹಣವನ್ನು ಹತ್ತಿರದ ಕೊವಿಡ್ ಸೋಂಕಿತರ ಆರೈಕೆಗೆ ವಿನಿಯೋಗಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದರು.

ಇದನ್ನೂ ಓದಿ: ತಮ್ಮ ಹುಟ್ಟುಹಬ್ಬದಂದು ಕೊವಿಡ್ ಸೋಂಕಿತರಿಗೆ ನೆರವಾಗುವಂತೆ ಮನವಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ

Published On - 11:16 am, Tue, 18 May 21