Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತ್ಯಸಂಸ್ಕಾರಕ್ಕೆ ಹೋದ 128 ಜನರಿಗೆ ಕೊರೊನಾ ಪಾಸಿಟಿವಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಸಂಜೀವ್ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದಾಗ ಕೊರೊನಾ ಪಾಸಿಟಿವ್ ರಿಪೋರ್ಟ್​ ಬಂದಿದೆ. ಆ ಬಳಿಕ 200ಕ್ಕೂ ಹೆಚ್ಚು ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದರಲ್ಲಿ 128 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಅಂತ್ಯಸಂಸ್ಕಾರಕ್ಕೆ ಹೋದ 128 ಜನರಿಗೆ ಕೊರೊನಾ ಪಾಸಿಟಿವಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
ಕೊರೊನಾ ವೈರಸ್
Follow us
preethi shettigar
|

Updated on: May 18, 2021 | 11:29 AM

ಚಿಕ್ಕಮಗಳೂರು: ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾವು-ನೋವಿನ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಹೀಗಿರುವಾಗ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಯಾವುದೇ ಸಭೆ-ಸಮಾರಂಭಗಳಿಗೂ ಭಾಗಿಯಾಗದಂತೆ ರಾಜ್ಯ ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಆದರೆ ಸಾವು ಸಂಭವಿಸಿದಾಗ ನಾಲ್ಕು ಜನ ಹೋಗಿ ಸಮಾಧಾನದ ಮಾತನಾಡಿ ಅಂತ್ಯಸಂಸ್ಕಾರ ಮಾಡಿ ಬರುವುದು ವಾಡಿಕೆ. ಸದ್ಯ ಇದಕ್ಕೂ ಕೂಡ ಅವಕಾಶ ಇಲ್ಲ. ಕೊರೊನಾದಿಂದ ಮೃತಪಟ್ಟರೆ 5 ಮಂದಿ ಮಾತ್ರ ಭಾಗವಹಿಸಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೂ ಕೂಡ ಜನರು ಈ ಬಗ್ಗೆ ಗಮನಹರಿಸದೆ ಹೆಚ್ಚಿ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ರೀತಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಚಿಕ್ಕಮಗಳೂರು ಜನರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಇಂದಿರಾನಗರದ ಬರೋಬ್ಬರಿ 128 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಬರೀ ಈ ಊರಿನವರು ಮಾತ್ರವಲ್ಲ ಇಡೀ ಜಿಲ್ಲಾಡಳಿತವೇ ದಂಗಾಗಿದೆ. ಇದೇ ಗ್ರಾಮದ 60 ವರ್ಷದ ಸಂಜೀವ್ ಎನ್ನುವವರು ಮೇ 14 ರಂದು ಸಾವನ್ನಪ್ಪಿದ್ದರು. ಮೇ 11ರಂದು ಸ್ವಾಬ್ ಟೆಸ್ಟ್​ಗೆ ಕೊಟ್ಟಿದ್ದ ಸಂಜೀವ್​ ಅವರ ಕೊವಿಡ್ ರಿಪೋರ್ಟ್ ಬಂದಿದ್ದು ಮೇ 14ರಂದು. ಅಷ್ಟರಾಗಲೇ ಆ ವ್ಯಕ್ತಿ ಕೊನೆಯುಸಿರೆಳೆದಿದ್ದರು. ಖಾಸಗಿ ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ ಸಂಜೀವ್ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದಾಗ ಕೊರೊನಾ ಪಾಸಿಟಿವ್ ರಿಪೋರ್ಟ್​ ಬಂದಿದೆ. ಆ ಬಳಿಕ 200ಕ್ಕೂ ಹೆಚ್ಚು ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದರಲ್ಲಿ 128 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಹೀಗೆ ಊರಿನ ಹೆಚ್ಚಿನವರು ಕೊರೊನಾ ಸೋಂಕಿಗೆ ಒಳಗಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಕೇವಲ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರಿಗೆ ಮಾತ್ರ ಸೋಂಕು ತಗುಲಿದ್ಯಾ ಅಥವಾ ಬೇರೆ ಕಡೆಯಿಂದಲೂ ಸೋಂಕು ತಗುಲಿರುವ ಸಾಧ್ಯತೆ ಇದೆಯಾ ಎನ್ನುವುದರ ಕುರಿತು ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಎಸಿ ನಾಗರಾಜ್, ತಹಶೀಲ್ದಾರ್ ಕಾಂತರಾಜ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಈ ಊರಿನ ಸುತ್ತಮುತ್ತ ಹೋಮ್ ಸ್ಟೇಗಳು, ರೆಸಾರ್ಟ್​ಗಳು ಕೂಡ ಇರುವುದರಿಂದ ಸೋಂಕು ಬೇರೆ ಕಡೆಯಿಂದಲೂ ತಗುಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಗ್ರಾಮದಲ್ಲಿ 150 ಕುಟುಂಬಗಳಿದ್ದು, 660 ಜನರು ವಾಸವಾಗಿದ್ದಾರೆ. ಸದ್ಯ 128 ಮಂದಿಯ ವರದಿಯಷ್ಟೇ ಜಿಲ್ಲಾಡಳಿತದ ಕೈ ತಲುಪಿದ್ದು, ಉಳಿದವರ ವರದಿ ಬರಬೇಕಷ್ಟೇ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದು ತಹಶೀಲ್ದಾರ್ ಕಾಂತರಾಜ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸುಖಕ್ಕೆ ಆಗದಿದ್ದರೂ ಕಷ್ಟಕ್ಕೆ ಆಗಬೇಕು ಎಂದು ಸರ್ಕಾರದ ಆದೇಶವನ್ನೂ ಧಿಕ್ಕರಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರಿಗೆ ಇದೀಗ ಕೊರೊನಾ ಸೋಂಕಿನ ಆತಂಕ ಎದುರಾಗಿರುವುದು ಮಾತ್ರ ಸತ್ಯ.

ಇದನ್ನೂ ಓದಿ:

ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ

ಈ ಪ್ರದೇಶದಲ್ಲಿ ಇಷ್ಟು ದಿನಗಳಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ದಾಖಲು; ಅಧಿಕಾರಿಗಳಲ್ಲಿ ಆತಂಕ

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್