ಈ ಪ್ರದೇಶದಲ್ಲಿ ಇಷ್ಟು ದಿನಗಳಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ದಾಖಲು; ಅಧಿಕಾರಿಗಳಲ್ಲಿ ಆತಂಕ

ಒಡಿಶಾದಲ್ಲಿ ಹಿಂದುಳಿದ, ಬುಡಕಟ್ಟು ಜನಾಂಗದವರು ವಾಸವಾಗಿರುವ ಹಳ್ಳಿ, ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಹೋಗಿ ಸರ್ವೇ ಮಾಡಲಾಗುತ್ತಿದೆ. ಕೊರೊನಾ ಟೆಸ್ಟ್​ಗಳನ್ನು ಮಾಡಲಾಗುತ್ತಿದೆ.

ಈ ಪ್ರದೇಶದಲ್ಲಿ ಇಷ್ಟು ದಿನಗಳಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ದಾಖಲು; ಅಧಿಕಾರಿಗಳಲ್ಲಿ ಆತಂಕ
ನಿಯಮಗಿರಿ ಗುಡ್ಡದ ಚಿತ್ರಣ
Follow us
Lakshmi Hegde
|

Updated on:May 15, 2021 | 5:49 PM

ಕೊರೊನಾ ಸೋಂಕಿನ ಮೊದಲ ಅಲೆಯಿಂದ ಪಾರಾಗಿದ್ದ, ಇದುವರೆಗೂ ಕೊವಿಡ್​ನ ಒಂದೂ ಪ್ರಕರಣಗಳು ದಾಖಲಾಗದೆ ಇದ್ದ ಒಡಿಶಾದ ನಿಯಮ​ಗಿರಿ ಗುಡ್ಡದಲ್ಲಿ ಇದೀಗ ಎರಡನೇ ಅಲೆಯ ಸೋಂಕು ದಾಳಿಯಿಟ್ಟಿದೆ. ಇಲ್ಲಿ ಪೂರ್ತಿಯಾಗಿ ಡೊಂಗ್ರಿಯಾ ಕೊಂಡ್​ ಬುಡಕಟ್ಟು ಜನಾಂಗದವರೇ ವಾಸವಾಗಿದ್ದು, ಕೊವಿಡ್ ಪ್ರಾರಂಭದಿಂದ ಇಲ್ಲಿಯವರೆಗೂ ಸುರಕ್ಷಿತವಾಗಿಯೇ ಇದ್ದರು. ಆದರೆ ಈ ಎರಡನೇ ಅಲೆಯ ಸೋಂಕು ನಿಯಮ್​ಗಿರಿ ಗುಡ್ಡವನ್ನೂ ತಲುಪಿದ್ದು, ಅಲ್ಲೀಗ ಮೊದಲ ಪ್ರಕರಣ ಪತ್ತೆಯಾಗಿದ್ದು, ಸ್ಥಳೀಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಭಾರತದಲ್ಲಿ ಅತ್ಯಂತ ದುರ್ಬಲ ಬುಡಕಟ್ಟು ಜನಾಂಗದ ಪೈಕಿ ಈ ಡೊಂಗ್ರಿಯಾ ಕೊಂಡ್​ ಕೂಡ ಒಂದು. ಇವರು ದೈಹಿಕವಾಗಿ ಕೂಡ ದುರ್ಬಲರು.. ಸರಿಯಾದ ಪೋಷಕಾಂಶ ಆಹಾರ ಸೇವನೆ ಮಾಡದ ಕಾರಣ ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ. ಹಾಗಾಗಿ ಸೋಂಕಿನ ವರದಿಯಾಗುತ್ತಿದ್ದಂತೆ ಸಹಜವಾಗಿಯೇ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ, ಬುಡಕಟ್ಟು ಜನಾಂಗದವರು ವಾಸವಾಗಿರುವ ಹಳ್ಳಿ, ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಹೋಗಿ ಸರ್ವೇ ಮಾಡಲಾಗುತ್ತಿದೆ. ಕೊರೊನಾ ಟೆಸ್ಟ್​ಗಳನ್ನು ಮಾಡಲಾಗುತ್ತಿದೆ. ಈ ವೇಳೆ ನಿಯಮಗಿರಿ ಗುಡ್ಡದಲ್ಲಿ ವಾಸವಾಗಿರುವ ಡೊಂಗ್ರಿಯಾ ಬುಡಕಟ್ಟು ಜನಾಂಗದ ನಾಲ್ವರಲ್ಲಿ ಕೊರೊನಾ ಸೌಮ್ಯ ಲಕ್ಷಣಗಳು ಕಂಡುಬಂದಿತ್ತು. ತಪಾಸಣೆ ಮಾಡಿದ ನಂತರ ವರದಿ ಪಾಸಿಟಿವ್ ಬಂದಿದೆ. ನಾಲ್ವರನ್ನೂ ಐಸೋಲೇಶನ್​ಗೆ ಒಳಪಡಿಸಲಾಗಿದೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಾಯಗಡ ಜಿಲ್ಲಾಧಿಕಾರಿ ಸರೋಜ್​ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಈ ನಾಲ್ವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ನಿಯಮಗಿರಿಯಿಂದ ಕೊವಿಡ್​ ಆಸ್ಪತ್ರೆ 45 ಕಿಮೀ ದೂರದಲ್ಲಿದೆ. ಇನ್ನು ಈ ನಾಲ್ವರಿಗೆ ಕೊರೊನಾ ಸೋಂಕು ಬಂದಿದ್ದು ಹೇಗೆಂಬ ಬಗ್ಗೆ ಅಧಿಕಾರಿಗಳು ಟ್ರ್ಯಾಕಿಂಗ್ ಕೆಲಸ ಮಾಡುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ನಿಯಮಗಿರಿ ಗುಡ್ಡದಲ್ಲಿ 102 ಗ್ರಾಮಗಳಿವೆ. ಅದರಲ್ಲಿ 2461 ಡೊಂಗ್ರಿಯಾ ಕುಟುಂಬಗಳಿದ್ದು, ಒಟ್ಟು 9,597 ಜನರಿದ್ದಾರೆ. ಇನ್ನು ಇವರು ಸಮೀಪದ ಮಾರುಕಟ್ಟೆಗಳಿಗೆ ಆಗಾಗ ಹೋಗುತ್ತಿರುತ್ತಾರೆ. ಅದೇ ಸಂದರ್ಭದಲ್ಲಿಯೇ ಕೊರೊನಾ ಸೋಂಕು ಬಂದಿರಬಹುದು ಎಂದು ಕೂಡ ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸೂಕ್ತ ಬೆಲೆ ಸಿಗದೇ ಲೋಡ್‌ಗಟ್ಟಲೆ ಟೊಮ್ಯಾಟೊವನ್ನು ರಸ್ತೆ ಬದಿ ಸುರಿದ ರೈತರು

ಗೋವಿಂದರಾಜು ಎಂ. ಕಲ್ಲೂರು ಅವರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ

Published On - 5:45 pm, Sat, 15 May 21