ಅನ್ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳ ಕೀಟಲೆ; ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿರುವ ಮೈಸೂರು ಮಹಾಜನ ಕಾಲೇಜು ಮಂಡಳಿ
ಲಾಕ್ಡೌನ್ ಕಾರಣ ಕಾಲೇಜು ಮಂಡಳಿ ಆನ್ಲೈನ್ ಕ್ಲಾಸ್ ಮೊರೆ ಹೋಗಿದೆ. ಸಾಧ್ಯವಾಗುವಷ್ಟು ಮಟ್ಟಿಗೆ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠವನ್ನು ಮಾಡುವ ಪ್ರಯತ್ನದಲ್ಲಿ ಉಪನ್ಯಾಸಕರಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾಲೇಜು ಮಂಡಳಿ ಕೆಲಸ ನಿರ್ವಹಿಸುತ್ತಿದೆ.
ಮೈಸೂರು: ಕೊರೊನಾ ಎರಡನೇ ಅಲೆ ದೇಶದಾದ್ಯಂತ ಬಂದು ಅಪ್ಪಳಿಸಿದೆ. ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಕೂಡಾ ಜಾರಿಯಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶ ನೀಡಿದೆ. ಶಾಲೆ, ಕಾಲೇಜುಗಳು ಎಲ್ಲವೂ ಬಂದ್ ಆಗಿವೆ. ಹೀಗಾಗಿ ಆನ್ಲೈನ್ ತರಗತಿಗಳನ್ನು ಮಾಡುವ ಪರಿಸ್ಥಿತಿ ಬಂದೊದಗಿದೆ. ಆದರೆ ಆನ್ಲೈನ್ ತರಗತಿಯಲ್ಲೂ ವಿದ್ಯಾರ್ಥಿಗಳು ಪಾಠ ಮಾಡದಂತೆ ಕಿರಿಕಿರಿ ಮಾಡುತ್ತಿದ್ದಾರಂತೆ. ಮೈಸೂರಿನ ಮಹಾಜನ ಕಾಲೇಜಿನ ವಿದ್ಯಾರ್ಥಿಗಳು ಕ್ಲಾಸ್ ಮಧ್ಯೆ ಕೀಟಲೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಲಾಕ್ಡೌನ್ ಕಾರಣ ಕಾಲೇಜು ಮಂಡಳಿ ಆನ್ಲೈನ್ ಕ್ಲಾಸ್ ಮೊರೆ ಹೋಗಿದೆ. ಸಾಧ್ಯವಾಗುವಷ್ಟು ಮಟ್ಟಿಗೆ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠವನ್ನು ಮಾಡುವ ಪ್ರಯತ್ನದಲ್ಲಿ ಉಪನ್ಯಾಸಕರಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾಲೇಜು ಮಂಡಳಿ ಕೆಲಸ ನಿರ್ವಹಿಸುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಈ ಬಗ್ಗೆ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮೈಸೂರಿನ ಮಹಾಜನ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ತರಗತಿ ಮಾಡಲು ಬಿಡದಂತೆ ಕೀಟಲೆ ಮಾಡಿದ್ದಾರೆ. ವಿದ್ಯಾರ್ಥಿಗಳು ಉಪನ್ಯಾಸದ ಮಧ್ಯ ಹಾಡುಗಳನ್ನು ಹಾಕಿ ತೊಂದರೆ ಕೊಡುತ್ತಿದ್ದಾರೆ.
ಉಪನ್ಯಾಸ ಮಾಡುವ ಮಧ್ಯ ಬೇರೆ ಬೇರೆ ಶಬ್ದ ಮಾಡುವುದರಿಂದ ವಿದ್ಯಾರ್ಥಿಗಳ ಕೀಟಲೆಯನ್ನು ನಿಯಂತ್ರಿಸುವುದು ಉಪನ್ಯಾಸಕರಿಗೆ ದೊಡ್ಡ ತಲೆ ನೋವಾಗಿದೆ. ಒಬ್ಬರನ್ನು ಕೇಳುವಾಗ ಇನ್ನೊಬ್ಬರು ಕೀಟಲೆ ಮಾಡುತ್ತಿದ್ದಾರೆ. ಬೇಕಂತಲೆ ವಿದ್ಯಾರ್ಥಿಗಳು ತೊಂದರೆ ಕೊಡುತ್ತಿದ್ದಾರಂತೆ. ಹಾಡುಗಳನ್ನು ಹಾಕುವುದರಿಂದ ಬೇರೆ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಈ ರೀತಿ ಮಾಡಬೇಡಿ ಎಂದು ಮೈಸೂರಿನ ಮಹಾಜನ ಕಾಲೇಜು ಮಂಡಳಿ ಮನವಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿ, ಉಪನ್ಯಾಸಕರಿಗೆ ತೊಂದರೆ ಕೊಟ್ಟಿರುವ ವಿಡಿಯೋವನ್ನು ಕಾಲೇಜು ಆಡಳಿತ ಮಂಡಳಿ ಹಂಚಿಕೊಂಡಿದೆ.
ಇದನ್ನೂ ಓದಿ
ದೇಹದಲ್ಲಿ ಆಮ್ಲಜನಕದ ಕೊರತೆ ಹೇಗಾಗುತ್ತದೆ? ಕೊರೊನಾ ವೈರಾಣುವಿಗೂ ಇದಕ್ಕೂ ಏನು ಸಂಬಂಧ?
ದೇಹದಲ್ಲಿ ಆಮ್ಲಜನಕದ ಕೊರತೆ ಹೇಗಾಗುತ್ತದೆ? ಕೊರೊನಾ ವೈರಾಣುವಿಗೂ ಇದಕ್ಕೂ ಏನು ಸಂಬಂಧ?
(mahajana college students disturbing in online class and Mysore Mahajan College Board appeals not to tease)