‘ಯೇಸು ಪ್ರತಿಮೆ ನಿರ್ಮಾಣಕ್ಕೆ ನನ್ನ ಬೆಂಬಲ ಇದೆ, ಬಿಜೆಪಿವ್ರು ಯಾಕೆ ವಿರೋಧ ಮಾಡಬೇಕು?’

|

Updated on: Jan 13, 2020 | 5:00 PM

ಬೆಂಗಳೂರು: ಡಿಕೆ ಶಿವಕುಮಾರ್ ಬೆಟ್ಟವೊಂದರ ಮೇಲೆ ಯೇಸು ಪ್ರತಿಮೆ ನಿಲ್ಲಿಸಬೇಕು ಅಂತಾ ತಿರ್ಮಾನ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನನ್ನ ಅಭ್ಯಂತರ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೆಗೌಡ ಹೇಳಿದ್ದಾರೆ. ಆದ್ರೆ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಬಗ್ಗೆ ಮಾಧ್ಯಮಗಳಿಗೆ ಭ್ರಮೆ ಇದೆ, ಅದು ನನಗೆ ಗೊತ್ತು. ಬಿಜೆಪಿಯವ್ರು 19 ಚರ್ಚ್​ಗಳನ್ನು ಒಡೆದರು, ಬೈಬಲ್​​ಗಳನ್ನು ಸುಟ್ಟರು, ಆಗ ಒರಿಸ್ಸಾದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ […]

‘ಯೇಸು ಪ್ರತಿಮೆ ನಿರ್ಮಾಣಕ್ಕೆ ನನ್ನ ಬೆಂಬಲ ಇದೆ, ಬಿಜೆಪಿವ್ರು ಯಾಕೆ ವಿರೋಧ ಮಾಡಬೇಕು?’
Follow us on

ಬೆಂಗಳೂರು: ಡಿಕೆ ಶಿವಕುಮಾರ್ ಬೆಟ್ಟವೊಂದರ ಮೇಲೆ ಯೇಸು ಪ್ರತಿಮೆ ನಿಲ್ಲಿಸಬೇಕು ಅಂತಾ ತಿರ್ಮಾನ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನನ್ನ ಅಭ್ಯಂತರ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೆಗೌಡ ಹೇಳಿದ್ದಾರೆ. ಆದ್ರೆ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಬಗ್ಗೆ ಮಾಧ್ಯಮಗಳಿಗೆ ಭ್ರಮೆ ಇದೆ, ಅದು ನನಗೆ ಗೊತ್ತು. ಬಿಜೆಪಿಯವ್ರು 19 ಚರ್ಚ್​ಗಳನ್ನು ಒಡೆದರು, ಬೈಬಲ್​​ಗಳನ್ನು ಸುಟ್ಟರು, ಆಗ ಒರಿಸ್ಸಾದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆ ಒಂದು ಸಂದರ್ಭದಲ್ಲಿ ಒಬ್ಬ ದೇವೆಗೌಡ ಎಲ್ಲಾ ಕಡೆ ಹೋಗಿದ್ದಾನೆ. ಇದು ಜ್ಯಾತ್ಯಾತೀತ ರಾಷ್ಟ್ರ, ಈಗ ಮುಸ್ಲಿಂ ಬಗ್ಗೆ ಹೇಳಿ ಹೋರಾಟ ಮಾಡುತ್ತಾರೆ ಅಂತ ಹೇಳಬೇಡಿ. ಈ ದೇಶದಲ್ಲಿ ಸರ್ವಧರ್ಮಗಳು ಇವೆ, ಎಲ್ಲಾ ಧರ್ಮಗಳಿಗೂ ರಕ್ಷಣೆ ಕೊಡಬೇಕು ಅಂತ ಅಂಬೇಡ್ಕರ್ ಕಾನೂನು ಬರೆದಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯಿಂದ ಯಾವ ನಿರೀಕ್ಷೆಯೂ ಮಾಡೋದು ಬೇಡ, ಇದು ರಾಜಕೀಯನಾ, ಇಲ್ಲ ತಮಾಷೆ ನಾ? ಅಷ್ಟಕ್ಕೂ ಇವರು ಬೆಂಗಳೂರಿನಿಂದ ಯಾಕೆ ಹೋಗಬೇಕು, ಮಂಗಳೂರಿನಿಂದ ಯಾಕೆ ಬರಬೇಕು? ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಪ್ರಧಾನಿ ದೇವೆಗೌಡ ಪರೋಕ್ಷವಾಗಿ ಕಿಡಿಕಾರಿದರು.