ಅಂಬೇಡ್ಕರ್ ನಿಗಮದಲ್ಲಿ ಭ್ರಷ್ಟಾಚಾರ: ಸಾಲ ಯೋಜನೆಯಲ್ಲಿ ಮಹಿಳೆಯರಿಗೆ ವಂಚನೆ!

ಅಂಬೇಡ್ಕರ್ ನಿಗಮದಲ್ಲಿ ಭ್ರಷ್ಟಾಚಾರ: ಸಾಲ ಯೋಜನೆಯಲ್ಲಿ ಮಹಿಳೆಯರಿಗೆ ವಂಚನೆ!

ಬೀದರ್​: ದಲಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಟೊಂಕಕಟ್ಟಿ ನಿಂತಿದೆ. ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಗಳ ಮೂಲಕ ಸಹಾಯ ಧನ ನೀಡ್ತಿದೆ. ಅಷ್ಟೇ ಅಲ್ಲ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸೇರ ಸಾಲ ಯೋಜನೆ ಫಲಾನುಭವಿಗಳಿಗೆ ನೀಡ್ತಿದೆ. ಆದ್ರೆ ಇದ್ರಲ್ಲೂ ನುಂಗಣ್ಣರ ಕಣ್ಣು ಬಿದ್ದಿದ್ದು, ನೂರಾರು ಮಹಿಳೆಯರಿಗೆ ವಂಚನೆ ಮಾಡಲಾಗಿದೆ. ನೇರ ಸಾಲ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ! ಕೈಯಲ್ಲಿ ದಾಖಲೆ ಹಿಡಿದು ನಿಂತಿರೋ ಈ ಮಹಿಳೆಯರು ಸಾಲ ಪಡೆಯಲು ಅರ್ಜಿ ಸಲ್ಲಿಸಿ ಈಗ ಹಣ ಸಿಗದೆ […]

sadhu srinath

|

Jan 13, 2020 | 2:37 PM

ಬೀದರ್​: ದಲಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಟೊಂಕಕಟ್ಟಿ ನಿಂತಿದೆ. ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಗಳ ಮೂಲಕ ಸಹಾಯ ಧನ ನೀಡ್ತಿದೆ. ಅಷ್ಟೇ ಅಲ್ಲ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸೇರ ಸಾಲ ಯೋಜನೆ ಫಲಾನುಭವಿಗಳಿಗೆ ನೀಡ್ತಿದೆ. ಆದ್ರೆ ಇದ್ರಲ್ಲೂ ನುಂಗಣ್ಣರ ಕಣ್ಣು ಬಿದ್ದಿದ್ದು, ನೂರಾರು ಮಹಿಳೆಯರಿಗೆ ವಂಚನೆ ಮಾಡಲಾಗಿದೆ.

ನೇರ ಸಾಲ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ! ಕೈಯಲ್ಲಿ ದಾಖಲೆ ಹಿಡಿದು ನಿಂತಿರೋ ಈ ಮಹಿಳೆಯರು ಸಾಲ ಪಡೆಯಲು ಅರ್ಜಿ ಸಲ್ಲಿಸಿ ಈಗ ಹಣ ಸಿಗದೆ ಪರದಾಡ್ತಿದ್ದಾರೆ. ನೇರ ಸಾಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಲಿಗೆ ಹಸು, ಎಮ್ಮೆ, ಕುರಿಯನ್ನ ಕೊಡದೆ ಹಣ ನುಂಗಿದ್ದಾರೆ ಅಧಿಕಾರಿಗಳು. ಇಂಥಾದ್ದೊಂದು ವಂಚನೆ ನಡೆದಿರೋದು ಬೀದರ್‌ ಜಿಲ್ಲೆಯಲ್ಲಿ.

ಬೀದರ್‌ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್, ಚಿತ್ತಗುಪ್ಪಾ, ಹಿಲ್ಲಾಲಪುರ, ಶಂಕರಗಂಜ್ ವಾಡಿ, ದುಬಲಗುಂಡಿ, ಹಿಪ್ಪರಗಾಂವ್ ಸೇರಿ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ 1 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೋಸ ಮಾಡಲಾಗಿದೆ. ನೇರಸಾಲ ಯೋಜನೆಯಡಿ ಆಯ್ಕೆಯಾದ್ರೂ ಇವ್ರ ಮನೆಗಳಿಗೆ ಹೋದ ಅಧಿಕಾರಿಗಳು ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್‌ ಪಾಸ್‌ಬುಕ್‌ ತೆಗೆದುಕೊಂಡು ಎಮ್ಮೆ, ಕುರಿಗಳ ಮುಂದೆ ನಿಲ್ಲಿಸಿ ಫೋಟೋ ತೆಗೆಸಿ ಇನ್ನೊಂದು ವಾರದಲ್ಲಿ ನಿಮಗೆ ಎಮ್ಮೆ, ಹಸುಗಳನ್ನ ತಂದುಕೊಡೋದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ ಅಂತ ಫಲಾನುಭವಿಗಳು ಆರೋಪಿಸಿದ್ದಾರೆ.

ನೂರಾರು ಫಲಾನುಭವಿಗಳಿಗೆ ಹಣ ನೀಡದೆ ವಂಚನೆ! ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯವ್ರಿಗೆ ಎಮ್ಮೆ, ಕುರಿ, ಹಸು ಕೊಳ್ಳಲು ನೇರ ಸಾಲಯೋಜನೆ ಅಡಿಯಲ್ಲಿ 40 ಸಾವಿರ ಸಹಾಯಧನ ನೀಡಲಾಗುತ್ತೆ. ಈ ಹಣದಲ್ಲಿ ತಮಗೆ ಅನುಕೂಲವಾಗೋ ರೀತಿಯಲ್ಲಿ ಎಮ್ಮೆ, ಹಸು, ಕುರಿಗಳನ್ನ ಕೊಂಡುಕೊಂಡು ಅದ್ರಿಂದ ಬರೋ ಆದಾಯದಿಂದ ಜೀವನ ಸಾಗಿಸಬೇಕು ಅಂತ ಸರ್ಕಾರ ಸಾಲದ ರೂಪದಲ್ಲಿ ಹಣ ನೀಡುತ್ತೆ. ಶೇ.90ರಷ್ಟು ಸಬ್ಸಿಡಿ ರೂಪದಲ್ಲಿ ಇನ್ನುಳಿದ ಶೇಕಡಾ 10ರಷ್ಟು ಹಣವನ್ನ ಸಾಲದ ರೂಪದಲ್ಲಿ ಕೊಡುತ್ತೆ. ಆದ್ರೆ ದಾಖಲೆಗಳನ್ನ ಪಡೆದು ಫಲಾನುಭವಿಗಳ ಅಕೌಂಟ್‌ಗೆ ಹೋಗುವ ಹಣವನ್ನ ತಮ್ಮ ಜೇಬಿಗಿಳಿಸಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರನ್ನ ಕೇಳಿದ್ರೆ ಮೇಲಾಧಿಕಾರಿಗಳಿಗೂ ಈ ವಿಚಾರ ಗಮನಕ್ಕೆ ಬಂದಿದೆ ಅಂತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada