ಸಮಾಜ ಸೇವಕನಂತೆ ಬಿಲ್ಡಪ್: ಬೀದಿ ಬದಿ ವ್ಯಾಪಾರಿಗಳಿಗೆ ವಂಚಿಸಿದ್ದ ಆರೋಪಿ ಅಂದರ್

ಕೊಡಗು: ಆತ ಅಪ್ಪಟ ಸಮಾಜ ಸೇವಕನ ಥರ ಪೋಸ್​ ಕೊಡ್ತಿದ್ದ. ಮಾಡಿದ್ದೆಲ್ಲವನ್ನೂ ಫೋಟೋ ತೆಗೆಸಿಕೊಂಡು ಪೋಸ್​ ಕೊಡ್ತಿದ್ದ. ಆದ್ರೆ, ಆತನ ಅಸಲಿ ಬಣ್ಣ ಬೇರೆಯದೆ ಇತ್ತು. ಯಾಕಂದ್ರೆ, ಬೀದಿ ಬದಿಯ ವ್ಯಾಪಾರಿಗಳನ್ನೂ ಬಿಡದೆ, ಕಾಟ ಕೊಡ್ತಿದ್ದ. ಸಂಘಟನೆ ಹೆಸರಲ್ಲಿ ವ್ಯಾಪಾರಿಗಳಿಗೆ ವಂಚನೆ: ಒಬ್ಬೊಬ್ಬರ ಹತ್ರ ಹದಿನೈದು, ಹದಿನೈದು ಸಾವಿರ. ಆದ್ರೆ, ಲೋನೂ ಇಲ್ಲ, ಕೊಟ್ಟ ಕಾಸು ವಾಪಸ್​​​ ಬರಲಿಲ್ಲ. ಸಮಾಜ ಸೇವಕನ ಥರ ಬಿಲ್ಡಪ್​​​​​​​ ಕೊಡೋ ಬಾಬು ವಿರುದ್ಧ ಮಹಿಳೆಯರು ಮಾಡ್ತಿರೋ ಆರೋಪ ಇದು. ಬೆಂಗಳೂರು ಮೂಲದ […]

ಸಮಾಜ ಸೇವಕನಂತೆ ಬಿಲ್ಡಪ್: ಬೀದಿ ಬದಿ ವ್ಯಾಪಾರಿಗಳಿಗೆ ವಂಚಿಸಿದ್ದ ಆರೋಪಿ ಅಂದರ್
Follow us
ಸಾಧು ಶ್ರೀನಾಥ್​
|

Updated on:Jan 14, 2020 | 7:57 AM

ಕೊಡಗು: ಆತ ಅಪ್ಪಟ ಸಮಾಜ ಸೇವಕನ ಥರ ಪೋಸ್​ ಕೊಡ್ತಿದ್ದ. ಮಾಡಿದ್ದೆಲ್ಲವನ್ನೂ ಫೋಟೋ ತೆಗೆಸಿಕೊಂಡು ಪೋಸ್​ ಕೊಡ್ತಿದ್ದ. ಆದ್ರೆ, ಆತನ ಅಸಲಿ ಬಣ್ಣ ಬೇರೆಯದೆ ಇತ್ತು. ಯಾಕಂದ್ರೆ, ಬೀದಿ ಬದಿಯ ವ್ಯಾಪಾರಿಗಳನ್ನೂ ಬಿಡದೆ, ಕಾಟ ಕೊಡ್ತಿದ್ದ.

ಸಂಘಟನೆ ಹೆಸರಲ್ಲಿ ವ್ಯಾಪಾರಿಗಳಿಗೆ ವಂಚನೆ: ಒಬ್ಬೊಬ್ಬರ ಹತ್ರ ಹದಿನೈದು, ಹದಿನೈದು ಸಾವಿರ. ಆದ್ರೆ, ಲೋನೂ ಇಲ್ಲ, ಕೊಟ್ಟ ಕಾಸು ವಾಪಸ್​​​ ಬರಲಿಲ್ಲ. ಸಮಾಜ ಸೇವಕನ ಥರ ಬಿಲ್ಡಪ್​​​​​​​ ಕೊಡೋ ಬಾಬು ವಿರುದ್ಧ ಮಹಿಳೆಯರು ಮಾಡ್ತಿರೋ ಆರೋಪ ಇದು. ಬೆಂಗಳೂರು ಮೂಲದ ಈ ಬಾಬು, ಭಾರತ ಮಾನವ ಹಕ್ಕುಗಳ ಸಂಘದ ರಾಜ್ಯಾಧ್ಯಕ್ಷ. ಸಂಘಟನೆ ಹೆಸ್ರಲ್ಲಿ, ಸರ್ಕಾರಿ ಕಚೇರಿಗಳಿಗೆ ಅಲೆದಾಡ್ತಿದ್ದ. ಆದ್ರೆ, ಬೀದಿ ಬದಿ ವ್ಯಾಪಾರಿಗಳಿಗೆ, ಸಾಲ ಕೊಡಿಸ್ತೀನಿ ಅಂತ ವಂಚಿಸಿದ್ದಾನೆ. ಎಂಟತ್ತು ಮಹಿಳೆಯರಿಂದ 15 ಸಾವಿರ ರೂಪಾಯಿ ಹಣ ಪೀಕಿದ್ದಾನೆ.

ಆರೋಪಿ ಜೈಲು ಪಾಲು: ಅಂದಹಾಗೇ, ಈ ಬುಕಾಳಿ ಬಾಬು, ಮಡಿಕೇರಿಯ ಬೀದಿ ಬದಿ ವ್ಯಾಪಾರ ಮಾಡ್ತಿದ್ದ ಮಹಿಳೆಯರಿಗೆ ಬಿಟ್ಟಿರೋ ಪುಂಗಿ ಅಷ್ಟಿಷ್ಟಲ್ಲ. ದೊಡ್ಡದೊಂದು ಕಾರ್ಯಕ್ರಮ ಮಾಡಿ ನನ್ನನ್ನು ಮತ್ತಷ್ಟು ಜನ್ರಿಗೆ ಪರಿಚಯ ಮಾಡಿ. ನಿಮಗೆಲ್ಲ, ಲಕ್ಷ ಲಕ್ಷ ಲೋನ್​​ ಕೊಡಿಸ್ತೀನಿ ಅಂತೆಲ್ಲ ಕಥೆ ಕಟ್ಟಿದ್ದ. ಅದ್ರಂತೆ, ಮಡಿಕೇರಿ ನಗರದಲ್ಲಿ ಕಾರ್ಯಕ್ರಮ ಮಾಡಿ ಈ ಬಾಬುಗೆ ಮಹಿಳೆಯರೆಲ್ಲ ಸನ್ಮಾನ ಮಾಡಿದ್ರು. ನಂತರ, ಎಲ್ಲರ ಹತ್ರ 15 ಸಾವಿರ ತಕ್ಕೊಂಡು, ಆಮೇಲೆ ಈ ಬಾಬು ವರಸೆ ಬದಲಿಸಿದ್ನಂತೆ. ಹೀಗಾಗಿ, ಮಹಿಳೆಯರೆಲ್ಲ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದು, ಆರೋಪಿಯನ್ನ ಜೈಲಿಗಟ್ಟಿದ್ದಾರಂತೆ.

Published On - 7:55 am, Tue, 14 January 20

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ