Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ ಡಿ ಕುಮಾರಸ್ವಾಮಿ ಮತ್ತೇ ವಿದೇಶ ಪಯಣ, ಪತ್ನಿಯೊಂದಿಗೆ ದುಬೈಗೆ ಹಾರಿದ ಜೆಡಿಎಸ್ ರಾಜ್ಯಾಧ್ಯಕ್ಷ

ಹೆಚ್ ಡಿ ಕುಮಾರಸ್ವಾಮಿ ಮತ್ತೇ ವಿದೇಶ ಪಯಣ, ಪತ್ನಿಯೊಂದಿಗೆ ದುಬೈಗೆ ಹಾರಿದ ಜೆಡಿಎಸ್ ರಾಜ್ಯಾಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 28, 2023 | 12:58 PM

ಏರ್ಪೋಟ್ ನಲ್ಲಿ ಕೆಲ ಮಾಧ್ಯಮದವರು ಬೈಟ್ ಕೇಳಿದಾಗ, ಪದೇಪದೆ ಬೈಟ್ ಕೊಡುವಂಥದ್ದೇನಿರುತ್ತದೆ ಅಂತ ಸಿಡುಕಿದರು. ಸರ್, ದುಬೈ ಪ್ರವಾಸದ ಬಗ್ಗೆ ಅಂತ ಕೇಳಿದಾಗ; ಅಲ್ಲಿನ ಕೆಂಪೇಗೌಡ ಸಂಘದವರು ಚಿಕ್ಕದೊಂದು ಕಾರ್ಯಕ್ರಮ ಇಟ್ಕೊಂಡಿದ್ದಾರೆ, ಅದರಲ್ಲಿ ಭಾಗವಹಿಸಲು ಹೋಗುತ್ತಿರುವುದಾಗಿ ಹೇಳಿದರು. ಅದೇ ಸಂಘದವರು ಒಕ್ಕಲಿಗರಲ್ಲದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಆಮಂತ್ರಣ ನೀಡಿದ್ದಾರೆಯೇ? ಗೊತ್ತಿಲ್ಲ ಸ್ವಾಮಿ!

ಬೆಂಗಳೂರು: ರಾಜ್ಯದ ರಾಜಕೀಯ ನಾಯಕರ ಪೈಕಿ ಅತಿಹೆಚ್ಚು ವಿದೇಶ ಪ್ರವಾಸ ಮಾಡೋರು ಅಂದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯೇ (HD Kumaraswamy) ಇರಬೇಕು. ಕುಮಾರಸ್ವಾಮಿ ಮನೆ ಮತ್ತು ಕಚೇರಿಯಲ್ಲಿ ಸಿಗದಿದ್ದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಸಿಗುತ್ತಾರೆ ಅಂತ ಮುಂದೊಮ್ಮೆ ಮಾಧ್ಯಮದವರು ಮಾತಾಡಿಕೊಂಡರೆ ಆಶ್ಚರ್ಯವಿಲ್ಲ ಮಾರಾಯ್ರೇ. ಇವತ್ತು ಅವರು ಪತ್ನಿ ಅನಿತಾ (Anita Kumaraswamy) ಅವರೊಂದಿಗೆ ದುಬೈಗೆ ತೆರಳಿದರು. ನೀಲಿ ಟಿ ಶರ್ಟ್ ಧರಿಸಿರುವ ಕುಮಾರಸ್ವಾಮಿ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ಏರ್ಪೋಟ್ ನಲ್ಲಿ ಕೆಲ ಮಾಧ್ಯಮದವರು ಬೈಟ್ ಕೇಳಿದಾಗ, ಪದೇಪದೆ ಬೈಟ್ ಕೊಡುವಂಥದ್ದೇನಿರುತ್ತದೆ ಅಂತ ಸಿಡುಕಿದರು. ಸರ್, ದುಬೈ ಪ್ರವಾಸದ ಬಗ್ಗೆ ಅಂತ ಕೇಳಿದಾಗ; ಅಲ್ಲಿನ ಕೆಂಪೇಗೌಡ ಸಂಘದವರು ಚಿಕ್ಕದೊಂದು ಕಾರ್ಯಕ್ರಮ ಇಟ್ಕೊಂಡಿದ್ದಾರೆ, ಅದರಲ್ಲಿ ಭಾಗವಹಿಸಲು ಹೋಗುತ್ತಿರುವುದಾಗಿ ಹೇಳಿದರು. ಅದೇ ಸಂಘದವರು ಒಕ್ಕಲಿಗರಲ್ಲದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಆಮಂತ್ರಣ ನೀಡಿದ್ದಾರೆಯೇ? ಗೊತ್ತಿಲ್ಲ ಸ್ವಾಮಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ