ದಿನಸಿ ಪದಾರ್ಥಗಳ ಬೆಲೆ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆ; ದೀಪಾವಳಿಗೆ ಮತ್ತಷ್ಟು ದರ ಏರಿಕೆ ಬಾಂಬ್!
Dharwad: ದಸರಾ ಬಳಿಕ ದೀಪಾವಳಿ ಹಬ್ಬ ಬರಲಿದೆ. ಈ ವೇಳೆ ಅಕ್ಕಿ, ಬೇಳೆ ಸೇರಿದಂತೆ ಧಾನ್ಯಗಳ ಖರೀದಿಯೂ ಹೆಚ್ಚಾಗಿರುತ್ತದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆಯಾಗಿದೆ. ಎರಡು ತಿಂಗಳ ಹಿಂದೆ 135 ರೂ ಇದ್ದ ತೊಗರಿಬೇಳೆ ಈಗ 200 ರೂ ಗಡಿ ದಾಟಿದೆ.
ಮುಂಗಾರು ಮಳೆ ಕೊರತೆಯಿಂದ (Drought) ರಾಜ್ಯದಲ್ಲಿ ನಾನಾ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದು, ದಿನದಿಂದ ದಿನಕ್ಕೆ ಧಾನ್ಯಗಳ (foodgrains commodity) ದರ ಗಗನಕ್ಕೇರುತ್ತಿದೆ. ಅದರಲ್ಲೂ ಇದೀಗ ಹಬ್ಬಗಳು ಕೂಡ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಧಾನ್ಯಗಳ ದರದಲ್ಲಿಯೂ (Price Hike) ತೀವ್ರ ಹೆಚ್ಚಳವಾಗಿದೆ. ಇದರಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ.
ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ವ್ಯಾಪಿಸಿದೆ. ಇದಕ್ಕೆ ಧಾರವಾಡ ಜಿಲ್ಲೆ ಹೊರತಾಗಿಲ್ಲ. ಇದೇ ವೇಳೆ ದಸರಾ ಬಳಿಕ ದೀಪಾವಳಿ ಹಬ್ಬ ಬರಲಿದೆ. ಈ ವೇಳೆ ಅಕ್ಕಿ, ಬೇಳೆ ಸೇರಿದಂತೆ ಧಾನ್ಯಗಳ ಖರೀದಿಯೂ ಹೆಚ್ಚಾಗಿರುತ್ತದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆಯಾಗಿದೆ. ನಾಡಹಬ್ಬ ದಸರಾಗೆ ಧಾನ್ಯಗಳ ದರ ಏರಿಕೆಯ ಬಿಸಿ ತಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೆಳೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಕಿರಾಣಿ ವ್ಯಾಪಾರಿ ಉದಯ ಯಂಡಿಗೇರಿ.
ಇನ್ನು ಕೆ.ಜಿ. ತೊಗರಿಬೇಳೆ ಸಗಟು ದರದಲ್ಲಿ 160- 170 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ 200 ರೂ. ಹಾಗೂ ಮೇಲ್ಪಟ್ಟು ಮಾರಾಟವಾಗುತ್ತಿದೆ, ಎರಡು ತಿಂಗಳ ಹಿಂದೆ 130-135 ರೂ ಇದ್ದ ತೊಗರಿಬೇಳೆ ಈಗ 200 ರೂ ಗಡಿ ದಾಟಿದೆ. ಹಂತಹಂತವಾಗಿ ಏರಿಕೆಯಾಗುತ್ತಾ ಬಂದಿದ್ದು, ಮಿತಿಮೀರಿದೆ. ಹೆಸರುಕಾಳು ಸಗಟು ದರದಲ್ಲಿ ಒಂದೇ ತಿಂಗಳಲ್ಲಿ ಕೆ.ಜಿ.ಗೆ 30-40 ರೂ, ಏರಿಕೆಯಾಗಿದೆ. 100 – 120 ರೂ. ಇದ್ದುದು ಈಗ 150- 160 ರೂ.ವರೆಗೆ ಮುಟ್ಟಿದೆ.
ಅಕ್ಕಿ, ಗೋಧಿ ಹಾಗೂ ಬೇಳೆ ಕಾಳುಗಳ ದರ ತಲಾ ಶೇ.25-30ರಷ್ಟು ಏರಿಕೆಯಾಗಿವೆ. ಮಳೆ ಕೊರತೆಯಿಂದಾಗಿ ಬೆಳೆ ಇಲ್ಲ. ಹೀಗಾಗಿ, ಬೇಡಿಕೆಗೆ ತಕ್ಕಂತೆ ಸರಕು ಇಲ್ಲದೆ ಇರುವುದರಿಂದ ಬೆಲೆ ಗಗನಕ್ಕೇರಿದೆ, ಅಕ್ಕಿ ಕೆ.ಜಿ.ಗೆ ಸಗಟು ದರದಲ್ಲಿ 2 ರೂ. ಏರಿಕೆಯಾಗಿದೆ. ದ್ವಿದಳ ಕಾಳುಗಳು ಕೆ.ಜಿ.ಗೆ 20-30 ರೂ.ವರೆಗೆ ಏರಿಕೆಯಾಗಿವೆ. ಧಾನ್ಯಗಳ ಉತ್ಪಾದನೆ ಇಳಿಕೆ ಹಾದಿಯಲ್ಲಿರುವ ಕಾರಣ ಬೆಲೆ ದುಬಾರಿಯಾಗುವುದು ನಿಶ್ಚಿತ ಎನ್ನುತ್ತಾರೆ ಸ್ಥಳೀಯರಾದ ತಿರುಕಪ್ಪ.
ರಾಜ್ಯದಲ್ಲಿ ವಾರ್ಷಿಕ 65 ಲಕ್ಷ ಟನ್ ಭಕ್ತ ಉತ್ಪಾದನೆಯಾಗುತ್ತದೆ. ಮಳೆ ಕೊರತೆಯಿಂದ ಈ ಬಾರಿ 45 ಲಕ್ಷ ಟನ್‌ಗೆ ಕುಸಿಯುವ ಅಂದಾಜಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಿ ರಫ್ತು ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ಸಾಮಾನ್ಯ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟೋದು ಗ್ಯಾರಂಟಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.