ಅಮಿತ್ ಶಾ ಅವರನ್ನು ಗೂಂಡಾ ಎನ್ನುವ ಯತೀಂದ್ರ ಸಿದ್ದರಾಮಯ್ಯ ತಾನೇನಂತೆ? ಹೆಚ್ ಡಿ ಕುಮಾರಸ್ವಾಮಿ

ಅಮಿತ್ ಶಾ ಅವರನ್ನು ಗೂಂಡಾ ಎನ್ನುವ ಯತೀಂದ್ರ ಸಿದ್ದರಾಮಯ್ಯ ತಾನೇನಂತೆ? ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2024 | 2:04 PM

ಕುಮಾರಸ್ವಾಮಿಯರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಪತ್ರಕರ್ತರೊಬ್ಬರು ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾರನ್ನು ಗೂಂಡಾ ಎಂದು ಕರೆದಿರುವ ಬಗ್ಗೆ ಹೇಳಿದಾಗ ಕುಮಾರಸ್ವಾಮಿ, ‘ಯತೀಂದ್ರ ಏನಂತೆ?’ ಎಂದು ಮಾರ್ಮಿಕವಾಗಿ ಕೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಗ್ಗೆ ಅವಹೇಳನಕಾರಿ ಶಬ್ದ ಬಳಸಿದ್ದನ್ನು ರಾಜ್ಯದ ಪ್ರಮುಖ ನಾಯಕರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇಂದು ನಗರದ ಹೋಟೆಲೊಂದರಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ನಾಯಕರು ಯತೀಂದ್ರ ಬಳಸಿರುವ ಭಾಷೆಯ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಸಂಸದ ಡಿವಿ ಸದಾನಂದ ಗೌಡ ಯತೀಂದ್ರರನ್ನು ಖಂಡಿಸಿದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪರೋಕ್ಷವಾಗಿ ಯತೀಂದ್ರರನ್ನು ಗೂಂಡಾ ಎಂದರು. ಕುಮಾರಸ್ವಾಮಿಯರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಪತ್ರಕರ್ತರೊಬ್ಬರು ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾರನ್ನು ಗೂಂಡಾ ಎಂದು ಕರೆದಿರುವ ಬಗ್ಗೆ ಹೇಳಿದಾಗ ಕುಮಾರಸ್ವಾಮಿ, ‘ಯತೀಂದ್ರ ಏನಂತೆ?’ ಎಂದು ಮಾರ್ಮಿಕವಾಗಿ ಕೇಳಿದರು.

ಅದಕ್ಕೂ ಮೊದಲು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ತಯಾರಿಯ ಬಗ್ಗೆ ಮಾತಾಡಿದ ಕುಮಾರಸ್ವಾಮಿ ಎರಡೂ ಪಕ್ಷಗಳ ನಾಯಕರು ಜೊತೆಗೂಡಿ ಈಗಾಗಲೇ ಪ್ರಚಾರ ಆರಂಭಿಸಲಾಗಿದೆ, ನಿನ್ನೆ ಮೈಸೂರು ಮತ್ತು ಮಂಡ್ಯದಲ್ಲಿ ವಿಜಯೇಂದ್ರ, ಡಾ ಸಿಎನ್ ಅಶ್ವಥ್ ನಾರಾಯಣ, ಜಿಟಿ ದೇವೇಗೌಡ, ತಾವು ಮತ್ತು ಇತರ ಹಲವಾರು ನಾಯಕರ ನೇತೃತ್ವದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆ ನಡೆಸಲಾಗಿದೆ ಮತ್ತು ಬೆಂಗಳೂರಲ್ಲ್ಲಿ ಆರ್ ಅಶೋಕ ಅವರ ಜೊತೆ ಚಿಕ್ಕಪೇಟೆ ಶಾಸಕರ ಮನೆಯಲ್ಲಿ ಸಭೆ ಸೇರಿ ಬೆಂಗಳೂರಿನ 4 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರದ ರೂಪುರೇಷೆಗಳನ್ನು ಚರ್ಚಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನನ್ನ ಸೋಲಿನ ಬಗ್ಗೆ ಹೇಳಲು ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರು: ಕುಮಾರಸ್ವಾಮಿ ಪ್ರಶ್ನೆ