ಮಸ್ಕಿ ಕ್ಷೇತ್ರದ ಪ್ರಗತಿಗೆ ಉಪಚುನಾವಣೆಯೇ ಮುಹೂರ್ತವಾಗಿತ್ತೇ? ಬಿಎಸ್​ವೈಗೆ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು

ಮಸ್ಕಿ ಕ್ಷೇತ್ರ ಸಮಗ್ರ ಅಭಿವೃದ್ಧಿಯ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮಾತನಾಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ಮಸ್ಕಿ ಕ್ಷೇತ್ರದ ಪ್ರಗತಿಗೆ ಉಪಚುನಾವಣೆಯೇ ಮುಹೂರ್ತವಾಗಿತ್ತೇ? ಬಿಎಸ್​ವೈಗೆ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
Updated By: ಸಾಧು ಶ್ರೀನಾಥ್​

Updated on: Mar 22, 2021 | 12:12 PM

ಬೆಂಗಳೂರು: ಮಸ್ಕಿ ಕ್ಷೇತ್ರ ಸಮಗ್ರ ಅಭಿವೃದ್ಧಿಯ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪ್ರಸ್ತಾಪಿಸುವ ಹೊತ್ತಿನಲ್ಲೇ ಟ್ವೀಟ್​ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮಸ್ಕಿ ಶಾಸಕರ ಮಹಾತ್ಯಾಗದಿಂದ ಬಿಎಸ್‌ವೈಗೆ ಅಧಿಕಾರ ಸಿಕ್ಕಿರುವುದು. ಬಿಎಸ್‌ವೈ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂತು. ಆದರೂ ಈವರೆಗೆ ಮಸ್ಕಿ ಕ್ಷೇತ್ರ ಏಕೆ ಅಭಿವೃದ್ಧಿಯಾಗಿಲ್ಲ. ಪ್ರಗತಿಗೆ ಉಪಚುನಾವಣೆಯೇ ಮುಹೂರ್ತವಾಗಿತ್ತೇ? ಎಂದು ಟ್ವೀಟ್​ ಮೂಲಕ ಹೆಚ್​.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಮುಹೂರ್ತ ನೋಡಿದ್ದಾರೆ. ಆದರೆ ವರ್ಷದ ಹಿಂದೆಯೇ ಉಪಚುನಾವಣೆಗಳು ನಡೆದವು. ಬಾಂಬೆ ತಂಡದ ಸದಸ್ಯರ ಕ್ಷೇತ್ರಗಳಿಗೆ ಚುನಾವಣೆ ಆಗಿದೆ. ಆದರೆ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ? ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆ. ಇದು ಬುಟಾಟಿಕೆತನದ್ದು ಎಂದು ನಿಮಗಾದರೂ ಅನಿಸಲ್ವೇ? ಎಂದು ಬರೆದುಕೊಂಡಿದ್ದಾರೆ.

ಜೊತೆ ಜೊತೆಗೆ ಇನ್ನೊಂದು ಪೋಸ್ಟ್​ ಹಂಚಿಕೊಂಡ ಹೆಚ್​.ಡಿ.ಕುಮಾರಸ್ವಾಮಿ ಮಸ್ಕಿ ಕ್ಷೇತ್ರವಾಗಿರಲಿ ಅಥವಾ ಬೇರೆ ಯಾವ ಕ್ಷೇತ್ರವಾದರೂ ಆಗಲಿ ಅಭಿವೃದ್ಧಿ ಮಾಡುವುದಕ್ಕೆ ಸರ್ಕಾರದಲ್ಲಿ ಹಣವಿದೆಯಾ? ರಾಜ್ಯದ ತೆರಿಗೆ ಹಣ, ಜನರ ಬೆವರಿನ ಋಣ. ನಿಮ್ಮ ಸರ್ಕಾರದಲ್ಲಿರುವ ಏಕಗವಾಕ್ಷಿಗೆ ಆಪೋಷನವಾಗ್ತಿಲ್ವೇ? ಚುನಾವಣಾ ಕಾಲದಲ್ಲಿ ಮುಖ್ಯಮಂತ್ರಿ B.S.ಯಡಿಯೂರಪ್ಪ ಅವರ ಸರ್ಕಾರದ ಏಕಗವಾಕ್ಷಿ ಮಾತುಗಳನ್ನು ಹೇಳುತ್ತಾರೆ. ರಾಜ್ಯದ ಜನರು ಇಂತಹ ಮಾತುಗಳಿಗೆ ಮನ್ನಣೆ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರದ ವಿಚಾರ; ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್

ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಟೀಕೆ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​ಗೆ ವಿಎಚ್​ಪಿ ಖಂಡನೆ