AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಟು ಕೇರಳ ಬಳಿಕ ಪುಣೆ: ಸ್ಯಾಂಟ್ರೋ ರವಿಯನ್ನು ಪುಣೆಯಿಂದ ಗುಜರಾತ್​ಗೆ ಕರೆದುಕೊಂಡು ಹೋಗಿದ್ಯಾರು? ಹೆಚ್​ಡಿಕೆ ಹೊಸ ಬಾಂಬ್

ಸ್ಯಾಂಟ್ರೋ ರವಿ ಒಂದೊಂದೇ ಅಂಶಗಳನ್ನು ಬಯಲಿಗೆಳೆದ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಇದೀಗ ಮತ್ತೊಂದಿಷ್ಟು ಸ್ಫೋಟ ಮಾಹಿತಗಳನ್ನು ಬಿಚ್ಚಿಟ್ಟಿದ್ದಾರೆ.

ಉಡುಪಿ ಟು ಕೇರಳ ಬಳಿಕ ಪುಣೆ: ಸ್ಯಾಂಟ್ರೋ ರವಿಯನ್ನು ಪುಣೆಯಿಂದ ಗುಜರಾತ್​ಗೆ ಕರೆದುಕೊಂಡು ಹೋಗಿದ್ಯಾರು? ಹೆಚ್​ಡಿಕೆ ಹೊಸ ಬಾಂಬ್
ಕುಮಾರಸ್ವಾಮಿ, ಸ್ಯಾಂಟ್ರೋ ರವಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 14, 2023 | 3:21 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಕುತ್ಯಾತಿ ಕ್ರಿಮಿನಲ್ ಸ್ಯಾಂಟ್ರೋ ರವಿ(Santro Ravi) ಕೊನೆಗೂ ಗುಜರಾತ್‌ನಲ್ಲಿ (Gujarat) ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಇನ್ನು ಸ್ಯಾಂಟ್ರೋ ರವಿ ಬಂಧನ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದು, ಸ್ಯಾಂಟ್ರೋ‌ ರವಿ ಬಂಧನ ವೇಳೆ ಗೃಹ ಸಚಿವರ ಗುಜರಾತ್ ಪ್ರವಾಸದ ಬಗ್ಗೆ ಸ್ಪೋಟಹ ಹೇಳಿಕೆಯನ್ನು ಕೊಟ್ಟಿದ್ದಾರೆ. ಅಲ್ಲದೇ ಸ್ಯಾಂಟ್ರೋ ರವಿಯ ಟ್ರಾವೆಲ್ ಹಿಸ್ಟರಿಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Santro Ravi Arrested: ಮಂತ್ರಾಲಯ ರಾಯರ ದರ್ಶನಕ್ಕೆ ಬಂದಿದ್ದ ಆಪ್ತನಿಂದಲೇ ಗುಜರಾತ್​ನಲ್ಲಿ ಸಿಕ್ಕ ಸ್ಯಾಂಟ್ರೋ ರವಿ!

ಇಂದು(ಜನವರಿ 14) ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕುಮಾರಸ್ವಾಮಿ, ಗೃಹ ಸಚಿವರು ಸಬರಮತಿ ಆಶ್ರಮಕ್ಕೆ ಹೋಗಿದ್ದ ಫೊಟೋ ಬಿಡುಗಡೆ ಮಾಡಿದ್ರು. ಮತ್ತೇನೂ ಹೆಚ್ಚು ಕಮ್ಮಿ ಆಗಬಾರದು ಎಂದು ಫೊಟೋ ಬಿಟ್ಟಿದ್ದಾರೆ. ಅಂತಹ ದುಷ್ಪರಿಣಾಮಗಳನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ನಾನು ಸರ್ಕಾರಕ್ಕೆ ಸಲಹೆ ಎಚ್ಚರಿಕೆ‌ ಕೊಡುತ್ತಾ ಬಂದಿದ್ದೇನೆ. ಸ್ಯಾಂಟ್ರೋ ರವಿಯಂತವರು ಬೇಕಾದಷ್ಟು ಮಂದಿ ಇದ್ದಾರೆ. ಅದರಲ್ಲಿ ಇವನ್ನೊಬ್ಬ ಅಷ್ಟೇ. ರಾಜಕಾರಣಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮತ್ತೊಂದು ಹೊಸ ಬಾಂಬ್ ಸಿಡಿಸಿದರು.

ನನಗೆ ಬಂದ ವರದಿ ಪ್ರಕಾರ ಅವನು ಮೊದಲು ಉಡುಪಿ ಹಾಗೂ ಕೇರಳದಲ್ಲಿದ್ದ. ಅಲ್ಲಿಂದ ಅಲ್ಲಿಂದ ಪುಣೆಗೆ ಹೋದ. ಬಳಿಕ ಪುಣೆದಿಂದ ಅವನನ್ನ ಗುಜರಾತಿಗೆ ಯಾರು ಕರೆದುಕೊಂಡು ಹೋದರು. ಸರ್ಕಾರ ಪ್ರಾಮಾಣಿಕ ತನಿಖೆ ನಡೆಸಿ ಸತ್ಯ ಹೇಳಲಿ. ಪುಣೆನಲ್ಲಿದ್ದವನನ್ನು ಅವರೇ ಏಕೆ ಕರೆದುಕೊಂಡು ಹೋದರು? ಪುಣೆಯಲ್ಲಿ ಅವನಿಗೆ ಹೇಳಿದ್ದೇನು..? ಗುಜರಾತಿನಿಂದ ಹೇಗೆ ವಿಮಾನ ಹತ್ತಿಸಿದ್ರು ಅದೆಲ್ಲ ಹೇಳಲಿ ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಲು ನಾನು ಕೆಲವೊಂದು ವಿಚಾರ ಪ್ರಸ್ತಾಪ ಮಾಡುತ್ತೇನೆ. ದಾಖಲೆ ಇಟ್ಟುಕೊಂಡಿರಲು ಆಗೊಲ್ಲ, ಕೆಲವು ವೈಯುಕ್ತಿಕ ವಿಚಾರ ಇರುತ್ತೆ. ಅದನ್ನ ತರುವುದು ಶೋಭೆಯಲ್ಲ. ಇಂತಹ ವ್ಯಕ್ತಿಗಳಿಂದ ಸರ್ಕಾರದ ಮೇಲೆ ದುಷ್ಪರಿಣಾಮ ಬೀರತ್ತಲ್ಲ ಅದು ನನ್ನ ಕಾಳಜಿ. ನಾನು ಹೇಳದಿದ್ದರೆ ಇಷ್ಟರವರೆಗೂ ಈ ಪ್ರಕರಣ ಬರುತ್ತಿರಲಿಲ್ಲ ಎಂದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:21 pm, Sat, 14 January 23