ವರ್ಷದ ಹಿಂದೆ ಅನಾಥ ಶವವೆಂದು ಆ ವ್ಯಕ್ತಿಯ ಅಂತ್ಯಕ್ರಿಯೆಯಾಗಿತ್ತು, ಆದರೆ ಮಗ ಕೇಳಿದಂತೆ ಡಿಎನ್​​ಎ ರಿಪೋರ್ಟ್ ಹೇಳಿತು ಬೇರೆಯದ್ದೇ ಕತೆ!

ದೇವದುರ್ಗ ಪೊಲೀಸರು ದೂರುದಾರ ವಿಠಲ್ ಹಾಗೂ ಮೃತ ಅಪರಿಚಿತ ವ್ಯಕ್ತಿಯ ಡಿಎನ್​ಎ ಟೆಸ್ಟ್ ನಡೆಸೋಕೆ ಮುಂದಾಗಿದ್ದರು. ಅದರಂತೆ ಅಂತ್ಯಕ್ರಿಯೆ ಮಾಡಲಾಗಿದ್ದ ಅಪರಿಚಿತ ವ್ಯಕ್ತಿಯ ಶವ ಹೊರತೆಗೆದು ಡಿಎನ್​ಎ ಟೆಸ್ಟ್​​ಗಾಗಿ ಸ್ಯಾಂಪಲ್​​ ಪಡೆಯಲಾಗಿತ್ತು.

ವರ್ಷದ ಹಿಂದೆ ಅನಾಥ ಶವವೆಂದು ಆ ವ್ಯಕ್ತಿಯ ಅಂತ್ಯಕ್ರಿಯೆಯಾಗಿತ್ತು, ಆದರೆ ಮಗ ಕೇಳಿದಂತೆ ಡಿಎನ್​​ಎ ರಿಪೋರ್ಟ್ ಹೇಳಿತು ಬೇರೆಯದ್ದೇ ಕತೆ!
ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿ ಅನಾಥ ಶವವೆಂದು ಅಂತ್ಯಕ್ರಿಯೆಯಾಗಿತ್ತು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 14, 2023 | 3:32 PM

ಅದು ಒಂದು ವರ್ಷದ ಹಿಂದಿನ ಹಳೆಯ ಕೇಸ್.. ಅಲ್ಲಿ ಅನಾಥ ಶವವೆಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಆದ್ರೀಗ ಡಿಎನ್​ಎ ಟೆಸ್ಟ್ ನಲ್ಲಿ ವಾರಸುದಾರರು ಪತ್ತೆಯಾಗಿದ್ದು, ಅದು ಆಕಸ್ಮಿಕ ಸಾವಲ್ಲ ಅದು ವ್ಯವಸ್ಥಿತ ಕೊಲೆ ಎಂದು ದೂರು ನೀಡಲಾಗಿದೆ. ಹೌದು… ಕಳೆದ 2022ರಲ್ಲಿ ನಡೆದಿದ್ದ ಅದೊಂದು ಘಟನೆ ಇಡೀ ರಾಯಚೂರು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ನಿವಾಸಿ ಚನ್ನಬಸವ ಅನ್ನೋ ವೃದ್ಧ ಮನೆಯಿಂದ ಹೊರ ಹೋದವ ಮತ್ತೆ ಮನೆಗೆ ಬಂದಿರಲಿಲ್ಲ. ಈ ಮಧ್ಯೆ ಆತನ ಕುಟುಂಬಸ್ಥರು ಚನ್ನಬಸವನಿಗಾಗಿ ಹುಡುಕಾಟ ನಡೆಸ್ತಿದ್ದರು. ಮತ್ತೊಂದು ಕಡೆ, ದೇವದುರ್ಗ ಪಟ್ಟಣದ ಚರಂಡಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿತ್ತು. ಮೂರ್ನಾಲ್ಕು ದಿನ ಆ ಬಗ್ಗೆ ಪರಿಶೀಲಿಸಿದ ಪೊಲೀಸರು ಕೊನೆಗೆ ವಾರಸುದಾರರು ಇಲ್ಲದ ಕಾರಣಕ್ಕೆ ಅಂತ್ಯಕ್ರಿಯೆ ಮಾಡಿದ್ದರು. ಇದಾದ ಕೆಲ ದಿನಗಳ ಬಳಿಕ ಕೊತ್ತದೊಡ್ಡಿಯ ವೃದ್ಧ ಚನ್ನಬಸವ ಅನ್ನೋರು ಕಾಣೆಯಾಗಿರೊ ಬಗ್ಗೆ ಅವರ ಮಗ ವಿಠಲ್ ಅನ್ನೋರು ದೇವದುರ್ಗ ಠಾಣೆಯಲ್ಲಿ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ನಂತರ ಅಂತ್ಯಕ್ರಿಯೆ ಮಾಡಲಾದ ವ್ಯಕ್ತಿಯ ಫೋಟೊಗಳನ್ನ ದೂರುದಾರ ವಿಠಲ್​ಗೆ ತೋರಿಸಲಾಗಿತ್ತು. ಆಗ ಆ ಫೋಟೊಗಳನ್ನ ನೋಡಿ ಆತ ತನ್ನ ತಂದೆ ಚನ್ನಬಸವ ಅನ್ನೋದನ್ನ ಖಚಿಪಡಿಸಿದ್ದ ವಿಠಲ್, ಮೃತ ಚನ್ನಬಸವನ ಮಗ.

ಇದಾದ ಬಳಿಕ ದೇವದುರ್ಗ ಪೊಲೀಸರು ದೂರುದಾರ ವಿಠಲ್ ಹಾಗೂ ಮೃತ ಅಪರಿಚಿತ ವ್ಯಕ್ತಿಯ ಡಿಎನ್​ಎ ಟೆಸ್ಟ್ ನಡೆಸೋಕೆ ಮುಂದಾಗಿದ್ದರು. ಅದರಂತೆ ಅಂತ್ಯಕ್ರಿಯೆ ಮಾಡಲಾಗಿದ್ದ ಅಪರಿಚಿತ ವ್ಯಕ್ತಿಯ ಶವ ಹೊರತೆಗೆದು ಡಿಎನ್​ಎ ಟೆಸ್ಟ್​​ಗಾಗಿ ಸ್ಯಾಂಪಲ್​​ ಪಡೆಯಲಾಗಿತ್ತು. ನಂತರ ದೂರುದಾರ ವಿಠಲ್​ನ ರಕ್ತದ ಮಾದರಿ ಸೇರಿ ವಿವಿಧ ಸ್ಯಾಂಪಲ್​ ಸಂಗ್ರಹಿಸಿ ಎಫ್​ಎಸ್​​ಎಲ್​​ಗೆ ಕಳುಹಿಸಲಾಗಿತ್ತು.

ಇದಾದ ಏಳೆಂಟು ತಿಂಗಳುಗಳ ಬಳಿಕ ಡಿಎನ್​​ಎ ರಿಪೋರ್ಟ್ ಬಂದಿದೆ. ದೂರುದಾರ ವಿಠಲ್ ಹಾಗೂ ಮೃತ ವ್ಯಕ್ತಿ ಇಬ್ಬರೂ ತಂದೆ-ಮಗ ಅನ್ನೊದನ್ನ ಎಫ್​ಎಸ್​ಎಲ್​ ಅಧಿಕೃತಗೊಳಿಸಿತ್ತು. ನಂತರ ಮೃತನ ಕುಟುಂಬಸ್ಥರು ಇದು ಆಕಸ್ಮಿಕ ಸಾವಲ್ಲ.. ತಮ್ಮೂರು ಕೊತ್ತದೊಡ್ಡಿಯಲ್ಲಿ ಜಮೀನು ವಿವಾದವಿದೆ.. ಎರಡು ವರ್ಷಗಳಿಂದ ಆ ಜಮೀನು ಬಿತ್ತನೆ ಮಾಡದೇ ಹಾಗೇ ಉಳಿದಿದೆ.. ಇದೇ ಕಾರಣಕ್ಕೆ ತಮ್ಮ ತಂದೆಯನ್ನ, ನಾಗಪ್ಪ ಅನ್ನೋ ವ್ಯಕ್ತಿ ಕೊಲೆ ಮಾಡಿಸಿದ್ದಾನೆ ಅಂತ ಮೃತ ಚನ್ನಬಸವನ ಕುಟುಂಬಸ್ಥರು ಆರೋಪಿಸಿದ್ದಾರೆ.

ಆದ್ರೆ ಈ ಕೊಲೆ ಪ್ರಕರಣ ದಾಖಲಿಸಿಕೊಳ್ಳಲು ದೇವದುರ್ಗ ಪೊಲೀಸರು ಹಿಂದೇಟು ಹಾಕಿದ್ರಂತೆ.. ಆಗ ಮೃತನ ಕುಟುಂಬಸ್ಥರು ಕೋರ್ಟ್​​ನಲ್ಲಿ ಖಾಸಗಿ ದೂರು ದಾಖಲಿಸಿದ್ರು.. ನಂತರ ದೇವದುರ್ಗ ಪೊಲೀಸರು ಕೋರ್ಟ್​ ನಿರ್ದೇಶನದ ಮೇರೆಗೆ ದೂರುದಾರರು ಉಲ್ಲೇಖಿಸಿದಂತೆ ಶಂಕಿತ ವ್ಯಕ್ತಿ ನಾಗಪ್ಪ ಸೇರಿ 15 ಜನರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಈ ಬಗ್ಗೆ ದೂರು ದಾಖಲಾದ ಬಳಿಕ ಮೃತನ ಕುಟುಂಬಸ್ಥರಿಗೆ ಜೀವ ಬೆದರಿಕೆ ಕರೆಗಳು ಬರ್ತಿವೆ ಅಂತ ಮೃತನ ಮಗ ರಮೇಶ್ ಆರೋಪಿಸಿದ್ದಾರೆ.

ಇತ್ತ ಸಂತ್ರಸ್ತ ಕುಟುಂಬಸ್ಥರು ತೀರಾ ಬಡತನದಲ್ಲಿದ್ದು, ನ್ಯಾಯಕ್ಕಾಗಿ ಸಾಲಸೋಲ ಮಾಡಿ ಕಾನೂನು ಹೋರಾಟ ನಡೆಸಿದ್ದಾರೆ. ಹೀಗಾಗಿ ಕೂಡಲೇ ದೇವದುರ್ಗ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9, ರಾಯಚೂರು 

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು