APMC ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? -HDK

ಬೆಂಗಳೂರು: ಎಪಿಎಂಸಿ ಕಾಯ್ದೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಎಪಿಎಂಸಿ ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭವಿದು. ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿ ಏಕೆ? ತರಾತುರಿಯಲ್ಲಿ ಕಾಯ್ದೆ ಜಾರಿ ಮಾಡುವ ಅಗತ್ಯವೇನಿದೆ? ಮೇ ನಲ್ಲಿ ಸುಗ್ರೀವಾಜ್ಞೆ ತಂದಿದ್ದಾರೆ. ಇದಾದ ಬಳಿಕ ಸಾಕಷ್ಟು ಸಮಯಾವಕಾಶ ಇತ್ತು. ಯಾವ ವಿರೋಧ ಪಕ್ಷದವರನ್ನ ಕರೆದು ಇವರು ಮಾತನಾಡಿದ್ದಾರೆ?ಸಾವಿರಾರು ರೈತರು ಬೆಂಗಳೂರಲ್ಲಿ ಧರಣಿ […]

APMC ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? -HDK
ಹೆಚ್​.ಡಿ ಕುಮಾರಸ್ವಾಮಿ
Edited By:

Updated on: Sep 23, 2020 | 11:31 AM

ಬೆಂಗಳೂರು: ಎಪಿಎಂಸಿ ಕಾಯ್ದೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಎಪಿಎಂಸಿ ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭವಿದು. ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿ ಏಕೆ? ತರಾತುರಿಯಲ್ಲಿ ಕಾಯ್ದೆ ಜಾರಿ ಮಾಡುವ ಅಗತ್ಯವೇನಿದೆ? ಮೇ ನಲ್ಲಿ ಸುಗ್ರೀವಾಜ್ಞೆ ತಂದಿದ್ದಾರೆ. ಇದಾದ ಬಳಿಕ ಸಾಕಷ್ಟು ಸಮಯಾವಕಾಶ ಇತ್ತು. ಯಾವ ವಿರೋಧ ಪಕ್ಷದವರನ್ನ ಕರೆದು ಇವರು ಮಾತನಾಡಿದ್ದಾರೆ?ಸಾವಿರಾರು ರೈತರು ಬೆಂಗಳೂರಲ್ಲಿ ಧರಣಿ ಮಾಡುತ್ತಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ದೈಹಿಕ ಅಂತರ ಪಾಲನೆಯಾಗುತ್ತಿಲ್ಲ. ಈ ಪರಿಸ್ಥಿತಿಗೆ ರೈತರನ್ನ ತಳ್ಳಿದವರು ಯಾರು? ಈ ವಿಚಾರದಲ್ಲಿ ಸಚಿವರು ಲಘುವಾಗಿ ಮಾತನಾಡ್ತಿದ್ದಾರೆ. ಮುಂದಾಗುವ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.