ನಾನಿಲ್ಲದಿದ್ದರೆ ಆಗ ಏನಾಗುತ್ತಿತ್ತು ಎಂದು ಗೊತ್ತಿದೆ: ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ
ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ. ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ. ವಿಷ್ಣುವರ್ಧನ್ ಸ್ಮಾರಕ ಏನಾಯಿತು ಎಲ್ಲರಿಗೂ ಗೊತ್ತಿರೋದೆ. ಬಿಜೆಪಿ ಸರ್ಕಾರದವರು ಈವರೆಗೆ ಏನಾದರೂ ಮಾಡಿದರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮಂಡ್ಯ: ಅಂಬರೀಶ್ ವಿಚಾರ ಚರ್ಚಿಸಿದರೆ ಮಣ್ಣಾಗುತ್ತಾರೆ ಎಂದು ಕೆಲವರು ಹೇಳಿರುವುದು ನನಗೆ ತಿಳಿದಿದೆ. ನಾನಲ್ಲ ಮಣ್ಣಾಗುವುದು, ಅವರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನಿಲ್ಲದಿದ್ದರೆ ಆಗ ಏನಾಗುತ್ತಿತ್ತು ಎಂದು ಎಲ್ಲವೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ. ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ. ವಿಷ್ಣುವರ್ಧನ್ ಸ್ಮಾರಕ ಏನಾಯಿತು ಎಲ್ಲರಿಗೂ ಗೊತ್ತಿರೋದೆ. ಬಿಜೆಪಿ ಸರ್ಕಾರದವರು ಈವರೆಗೆ ಏನಾದರೂ ಮಾಡಿದರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹಿರಿಯರಾದ ಜಿ.ಮಾದೇಗೌಡ ಆರೋಗ್ಯ ವಿಚಾರಿಸಲು ಮಂಡ್ಯಕ್ಕೆ ಬಂದಿದ್ದೇನೆ. ಈ ಸಂದರ್ಭದಲ್ಲಿ ಬೇರೆಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಅವರ ಬಗ್ಗೆ ಏಕೆ ಮಾತಾಡಲಿ, ಸುಮಲತಾ ಹೇಳಿಕೆ ಬಗ್ಗೆ ಮೈಸೂರು ಸಂಸದ ಪ್ರತಾಪ್ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ಗಣಿ ಸಚಿವ ನಿರಾಣಿ ಸ್ಪಷ್ಟನೆ ನೀಡಿದ್ದಾರೆ ಎಂದರು.
ಅಕ್ರಮ ಗಣಿಗಾರಿಕೆ ನಿಷೇಧಿಸಿದ್ದೇವೆಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗಿ ಅಕ್ರಮ ಗಣಿಗಾರಿಕೆ ಬಂದ್ ಮಾಡಿಸಿದ್ದೆ. ನನ್ನನ್ನು ಫಿನಿಶ್ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದರೆ ಅದು ಆಗಲ್ಲ. ಇನ್ನು 100 ವರ್ಷ ಆದರೂ ಕೆಆರ್ಎಸ್ ಡ್ಯಾಂಗೆ ಏನೂ ಆಗಲ್ಲ. ನನ್ನ ಅವಧಿಯಲ್ಲಿ ಕೆಆರ್ಎಸ್ ಸುತ್ತಮುತ್ತಲ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದ್ದೆ. ಮನ್ಮುಲ್, ಮೈಶುಗರ್ ವಿಚಾರದಲ್ಲಿ ಅನ್ಯಾಯ ಆಗಲು ಬಿಡಲ್ಲ ಎಂದು ಘೋಷಿಸಿದರು.
ಇದನ್ನೂ ಓದಿ: Kumaraswamy vs Sumalatha: ಕುಮಾರಸ್ವಾಮಿ vs ಸುಮಲತಾ ಪೋಸ್ಟರ್ ವಾರ್; ಫೋಟೋಗೆ ಫೋಟೋದಲ್ಲೇ ಟಾಂಗ್
(HD Kumaraswamy Speaks About Sumalatha in Mandya)