AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಅವತಾರ್​ 2 ಮಧ್ಯೆ ಅಧಿಕಾರಿಗಳ ನಿರ್ಲಕ್ಷ್ಯ: ವಿದೇಶದಿಂದ ಬರೋರಿಗೆ ಹಾಕ್ತಿಲ್ಲ ಸೀಲ್!

ಅಧಿಕಾರಿಗಳು ವಿದೇಶದಿಂದ ಬರುವ ಪ್ರಯಾಣಿಕರಿಗೆ ಯಾವುದೇ ಸೀಲ್ ಹಾಕ್ತಿಲ್ಲ. ಕೇವಲ ಪ್ರಯಾಣಿಕರ ವಿಳಾಸ ಬರೆದುಕೊಂಡು ಸಿಬ್ಬಂದಿ ಕಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಪ್ರಯಾಣಿಕರು ಹೋ‌ಂ ಕ್ವಾರಂಟೈನ್ ಆಗದೆ ಬೇಕಾ ಬಿಟ್ಟಿಯಾಗಿ ಓಡಾಡಿದ್ರೂ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಹಲವರ ಅಭಿಪ್ರಾಯ.

ಕೊರೊನಾ ಅವತಾರ್​ 2 ಮಧ್ಯೆ ಅಧಿಕಾರಿಗಳ ನಿರ್ಲಕ್ಷ್ಯ: ವಿದೇಶದಿಂದ ಬರೋರಿಗೆ ಹಾಕ್ತಿಲ್ಲ ಸೀಲ್!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
KUSHAL V
| Edited By: |

Updated on: Dec 24, 2020 | 3:39 PM

Share

ಬೆಂಗಳೂರು: ಬ್ರಿಟನ್​ನಲ್ಲಿ ಪತ್ತೆಯಾದ ಕೊರೊನಾದ ಹೊಸ ಪ್ರಭೇದ ವಿಶ್ವದ ಎಲ್ಲೆಡೆ ತಲ್ಲಣ ಮೂಡಿಸಿದೆ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದೇಶದಿಂದ ಅದರಲ್ಲೂ ಬ್ರಿಟನ್​ನಿಂದ ಆಗಮಿಸುತ್ತಿರೋರ ಮೇಲೆ ವಿಶೇಷ ನಿಗಾ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ, ಇವೆಲ್ಲದರ ನಡುವೆ ಅಧಿಕಾರಿಗಳು ಒಂದು ಮಹತ್ತರ ಕ್ರಮಕ್ಕೆ ಮುಂದಾಗಿಲ್ಲ.

ಹೌದು, ಅಧಿಕಾರಿಗಳು ವಿದೇಶದಿಂದ ಬರುವ ಪ್ರಯಾಣಿಕರಿಗೆ ಯಾವುದೇ ಸೀಲ್ ಹಾಕ್ತಿಲ್ಲ. ಕೇವಲ ಪ್ರಯಾಣಿಕರ ವಿಳಾಸ ಬರೆದುಕೊಂಡು ಸಿಬ್ಬಂದಿ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಪ್ರಯಾಣಿಕರು ಹೋ‌ಂ ಕ್ವಾರಂಟೈನ್ ಆಗದೆ ಬೇಕಾ ಬಿಟ್ಟಿಯಾಗಿ ಓಡಾಡಿದ್ರೂ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಹಲವರ ಅಭಿಪ್ರಾಯ.

ಅಂದ ಹಾಗೆ, ಈ‌ ಹಿಂದೆ, ವಿದೇಶದಿಂದ ಬರುತ್ತಿದ್ದವರಿಗೆ ಅಧಿಕಾರಿಗಳು ಹೊಂ ಕ್ವಾರಂಟೈನ್ ಆಗಲು ಏರ್​ಪೋರ್ಟ್​ನಲ್ಲಿ ಸೀಲ್ ಹಾಕಿ ಕಳುಹಿಸುತ್ತಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಯಾಣಿಕರ ಕೈ ಮೇಲೆ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸುತ್ತಿದ್ದರು. ಹಾಗಾಗಿ, ಒಂದು ವೇಳೆ ಈ ಸೀಲ್ ಇದ್ರೆ ಸಾರ್ವಜನಿಕರು ಅಂಥವರನ್ನು ಗುರುತಿಸಿ ಕೂಡಲೇ ಮನೆಗೆ ಕಳುಹಿಸುವುದು ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು.

ಆದ್ರೆ, ಇದೀಗ ವಿದೇಶದಲ್ಲಿ ಮಾಡಿಸಿರೋ ರಿಪೋರ್ಟ್ ಇದೆ ಅಂತಾ ಅಧಿಕಾರಿಗಳು ಪ್ರಯಾಣಿಕರಿಗೆ ಯಾವುದೇ ಸೀಲ್ ಹಾಕದೆ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಜೊತೆಗೆ ಪ್ರಯಾಣಿಕರು, ಮೂರು ದಿನಗಳ ಹಿಂದೆ ಮಾಡಿಸಿರೋ ಟೆಸ್ಟ್ ರಿಪೋರ್ಟ್​ನ ತೋರಿಸಿ ಬರುತ್ತಿದ್ದಾರೆ ಎಂದು ಹೇಳಿಲಾಗಿದೆ.

ಹಾಗಾಗಿ, ವಿದೇಶದಿಂದ ಬಂದವರಲ್ಲಿ ನಂತರ ವೈರಸ್ ಲಕ್ಷಣ ಕಾಣಿಸಿಕೊಂಡ್ರೆ ಯಾರು ಹೊಣೆ ಅಂತಾ ಸಾರ್ವಜನಿಕರು ಪ್ರಶ್ನೆ ಹಾಕಿದ್ದಾರೆ. ವಿದೇಶದಿಂದ ಬಂದು ಹೊಂ ಕ್ವಾರಂಟೈನ್ ಆಗದೆ ಓಡಾಡಿದ್ರೆ ಅವರನ್ನು ಗುರುತಿಸೋದು ಅಸಾಧ್ಯ ಎಂದೂ ಸಹ ಪ್ರಶ್ನಿಸಿದ್ದಾರೆ.

ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ, ಇದು ಕಾಮಿಡಿ ಕರ್ಫ್ಯೂ: ವಾಟಾಳ್ ನಾಗರಾಜ್

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು