AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮಳೆಯ ಅಬ್ಬರ; ತುಂಬಿ ಹರಿದ ಹಳ್ಳ-ಕೊಳ್ಳ, ಜನಜೀವನ ಅಸ್ತವ್ಯಸ್ತ

ನಿರಂತರವಾಗಿ ಸುರಿದ ಮಳೆಗೆ ರೈಲ್ವೆ ಅಂಡರ್‌ಪಾಸ್ ತುಂಬಿ ಹೋಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ರೈಲ್ವೆ ಅಂಡರ್‌ಪಾಸ್ ಮಳೆ ನೀರಿನಿಂದ ತುಂಬಿ ಹೋಗಿದೆ.

ಕರ್ನಾಟಕದಲ್ಲಿ ಮಳೆಯ ಅಬ್ಬರ; ತುಂಬಿ ಹರಿದ ಹಳ್ಳ-ಕೊಳ್ಳ, ಜನಜೀವನ ಅಸ್ತವ್ಯಸ್ತ
ಮಳೆ
TV9 Web
| Edited By: |

Updated on: Jul 19, 2021 | 9:20 AM

Share

ಕಳೆದ ವಾರದಿಂದ ಸುರಿಯುತ್ತಿರೋ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜನ ಮನೆಯಿಂದ ಹೊರ ಬರೋಕೆ ಆಗದೆ ಪರದಾಡ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ಇನ್ನೆರಡು- ಮೂರು ದಿನ ಇದೇ ರೀತಿ ಮಳೆಯಾಗುವ ಸಾಧ್ಯವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಗೆ ಮುಳುಗಿದ ರೈಲ್ವೆ ಅಂಡರ್‌ಪಾಸ್ ನಿರಂತರವಾಗಿ ಸುರಿದ ಮಳೆಗೆ ರೈಲ್ವೆ ಅಂಡರ್‌ಪಾಸ್ ತುಂಬಿ ಹೋಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ರೈಲ್ವೆ ಅಂಡರ್‌ಪಾಸ್ ಮಳೆ ನೀರಿನಿಂದ ತುಂಬಿ ಹೋಗಿದೆ. ರಸ್ತೆ ಸಂಪರ್ಕ ಕಳೆದುಕೊಂಡ ಇರಿಗೇನಹಳ್ಳಿ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ನೀರು ನಿಂತಿದ್ದು ನೀರಿನಲ್ಲಿ ಹೋಗಲು ಯತ್ನಿಸಿ ಟ್ರ್ಯಾಕ್ಟರ್, ಕ್ಯಾಂಟರ್ ಸಿಲುಕಿಕೊಂಡಿದೆ. ಜೆಸಿಬಿ ಮುಖಾಂತರ ಎರಡನ್ನೂ ಗ್ರಾಮಸ್ಥರು ಹೊರತೆಗೆದಿದ್ದಾರೆ. ಇದೀಗ ರಸ್ತೆ ಬಂದ್ ಆದ ಕಾರಣ 6 ಕಿಲೋ ಮೀಟರ್ ಸುತ್ತಿಕೊಂಡು ರೈಲ್ಬೆ ಹಳಿ ಮೇಲೆಯೆ ಬೈಕ್ಗಳಲ್ಲಿ ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಗಿಣಾ ನದಿಯಲ್ಲಿ ಕೊಚ್ಚಿ ಹೋದ ರೈತ ಮಹಾ ಮಳೆಗೆ.. ಮಳೆರಾಯನ ಆರ್ಭಟಕ್ಕೆ ಅಂದಾಜಿಗೆ ಸಿಗದ ರೇಂಜ್ಗೆ ನದಿಗಳು ಉಕ್ಕಿ ಹರಿಯುತ್ತಿವೆ. ಇಂತಹ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋತಂಗಲ ಗ್ರಾಮದಲ್ಲಿ ದುರಂತವೊಂದು ನಡೆದುಬಿಟ್ಟಿದೆ. ಎತ್ತುಗಳಿಗೆ ನೀರು ಕುಡಿಸಲು ಹೋಗಿದ್ದ ಪ್ರಹ್ಲಾದ್ ಎಂಬಾತ ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಇಷ್ಟೇ ಅಲ್ಲ.. ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲೂ ಭಾರಿ ಮಳೆಯಾಗಿದೆ. ಇದ್ರಿಂದ ಹಳ್ಳ ಕೊಳ್ಳಗಳು ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದೆ. ದೇಗುಲಮಡಿ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡಿದ್ರು.

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾದಿಹಳ್ಳಿ ಹಾಗೂ ಬೂದಿಹಾಳ್ ಹಳ್ಳದ ಸೇತುವೆ ಮಳೆ ನೀರಿನಿಂದ ಸಂಪೂರ್ಣವಾಗಿ ಮುಳುಗಿತ್ತು. ಹೀಗಿದ್ರೂ ಸಂತೋಷ್ ಎಂಬಾತ ದುಸ್ಸಾಹಸಕ್ಕೆ ಕೈಹಾಕಿದ್ದ. ಅಂದ್ರೆ, ಬೈಕ್ನಲ್ಲಿ ಸೇತುವೆ ದಾಟಲು ಹೋಗಿ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ.. ಈ ವೇಳೆ ಯುವಕನ ಸಹಾಯಕ್ಕೆ ಬಂದ ಸ್ಥಳೀಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನನ್ನ ರಕ್ಷಣೆ ಮಾಡಿದ್ರು.

ಕೆರೆ ಕೋಡಿ ಬಿದ್ದು ಗದ್ದೆ, ತೋಟ ಜಲಾವೃತ ಭಾರೀ ಮಳೆಯಿಂದಾಗಿ ದಾವಣಗೆರೆಯಲ್ಲೂ ಜನ ತತ್ತರಿಸಿ ಹೋಗಿದ್ದಾರೆ. ಮಾಗಾನಹಳ್ಳಿ, ಕಡ್ಲೆಬಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆರೆ ಕೋಡಿ ಬಿದ್ದು ನೀರು ನುಗ್ಗಿದೆ. ಇದ್ರಿಂದ ಸಾವಿರಾರು ಎಕರೆ ಗದ್ದೆ, ಅಡಿಕೆ ತೋಟ ಜಲಾವೃತವಾಗಿದೆ.

ರೈತರಿಗೆ ವರುಣ ಶಾಕ್.. ಹೂವಿನ ಗಿಡ ಜಲಾವೃತ ಆಷಾಢ ಮಾಸ ಮುಗಿಯುತ್ತಿದ್ದಂತೆ ಹೂವಿಗೆ, ತರಕಾರಿಗೆ ಬಾರಿ ಡಿಮ್ಯಾಂಡ್ ಬರುತ್ತೆ ಅಂತಾ ಕನಸು ಕಂಡಿದ್ದ ಚಿಕ್ಕಬಳ್ಳಾಪುರದ ರೈತರಿಗೆ ವರುಣ ಶಾಕ್ ಕೊಟ್ಟಿದ್ದಾನೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮಳೆಯ ಆರ್ಭಟಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ, ಕಳವಾರ, ಕಣಜೇನಹಹಳ್ಳಿಯಲ್ಲಿ ಸೇವಂತಿಗೆ, ರೋಸ್, ಬೀನ್ಸ್ ಎಲ್ಲವೂ ಜಲಾವೃತವಾಗಿವೆ.

ಮನೆಗಳಿಗೆ ನುಗ್ಗಿದ ನೀರು.. ಜನ ಪರದಾಟ ಧಾರಾಕಾರ ಮಳೆಗೆ ಗದಗನ್ ಗಂಗಿಮಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು. ಇದ್ರಿಂದ ಜನ ಮನೆಯಿಂದ ನೀರು ಹೊರಹಾಕಲು ಜನರ ಪರದಾಡಿದ್ರು. ಇತ್ತ, ಶಿವಮೊಗ್ಗ ಜಿಲ್ಲೆಯಲ್ಲೂ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ.. ಪರಿಣಾಮ ಕೆರೆ ಮತ್ತು ನದಿ ತುಂಬಿ ಹರಿಯುತ್ತಿದೆ. ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ಭಾಗದಲ್ಲಿ ಭಾರಿ ಮಳೆ ಆಗಿದ್ದು, ವಿವಿಧ ಭಾಗಗಳಲ್ಲಿ ಹೊಲ, ಗದ್ದೆ ಜಲಾವೃತವಾಗಿದೆ. ಮತ್ತೊಂದ್ಕಡೆ, ಶಿವಮೊಗ್ಗ ನಗರದ ಇಲ್ಯಾಸ್ ನಗರದ ವಾರ್ಡ್ 31ರಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗಿತ್ತು.

ಉತ್ತರಕನ್ನಡ ಜಿಲ್ಲೆಯಲ್ಲಿ ಅವಾಂತರ ಉಂಟಾಗಿದೆ.. ಕಳೆದೊಂದು ವಾರದಿಂದ ಸುರಿಯತ್ತಿರುವ ಭಾರಿ ಮಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇನ್ನಿತರ ಪ್ರದೇಶಗಳು ಜಲಾವೃತವಾಗಿದ್ದು, ಶರಾಭಿ ನದಿ ಮತ್ತೆ ಉಕ್ಕಿ ಹರಿದು ಆತಂಕ ಉಂಟುಮಾಡಿದೆ.

ಸದ್ಯ, ಮಳೆರಾಯನ ಅವಾತಾರಕ್ಕೆ.. ವರುಣನ ಆರ್ಭಟಕ್ಕೆ ಜನಜೀವ ಅಸ್ತವ್ಯಸ್ತವಾಗಿದೆ.. ಅದೆಷ್ಟೋ ಕಡೆ ರೈತರ ಬೆಳೆ ಸಂಪೂರ್ಣವಾಗಿ ಸರ್ವನಾಶ ಆಗಿದೆ.

ಇದನ್ನೂ ಓದಿ: Karnataka Weather Update: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್