ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ಭೀಕರ ಮಳೆಗೆ ತತ್ತರ, ಜಲ ದಿಗ್ಬಂಧನ: ಇಂದೂ ಮಳೆ ಮುಂದುವರಿದ್ರೆ ಕಷ್ಟ ಕಷ್ಟ

Chikkaballapur, Kolar heavy rains: ಕೋಲಾರದಲ್ಲಿ ಕೋಲಾರಮ್ಮ ಕೆರೆಯಲ್ಲಿ ಹೊರ ಹರಿವು ಹೆಚ್ಚಿದ್ದು, ಕೋಲಾರದ ಗಾಂಧಿನಗರ ಬಳಿ ಸೇತುವೆ‌ ಕುಸಿಯುವ ಆತಂಕ ಎದುರಾಗಿದೆ. ಸೇತುವೆಯ ಮೇಲೆ ಜನರ ಓಡಾಟಕ್ಕೆ ನಿರ್ಭಂದ ಹೇರಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಸೇತುವೆಗಳ ಮೇಲೆ ಭಾರಿ ನೀರು ಹರಿಯುತ್ತಿದೆ. ಗುಡಿಬಂಡೆ ತಾಲೂಕಿನ ಸೇತುವೆಗಳ ಮೇಲೆ ಸಂಚಾರ ನಿಷೇಧಿಸಲಾಗಿದೆ.

ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ಭೀಕರ ಮಳೆಗೆ ತತ್ತರ, ಜಲ ದಿಗ್ಬಂಧನ: ಇಂದೂ ಮಳೆ ಮುಂದುವರಿದ್ರೆ ಕಷ್ಟ ಕಷ್ಟ
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ತತ್ತರ, ಕೆರೆಕಟ್ಟೆಗಳು ಕೋಡಿ, ರಸ್ತೆಗಳು ಬಂದ್, ಜಲ ದಿಗ್ಬಂಧನ: ಹೇಗಿದೆ ಅಲ್ಲಿನ ಪರಿಸ್ಥಿತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 19, 2021 | 8:31 AM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆಯೇ ಹೆಚ್ಚಾಗಿತ್ತು. ಇದೀಗ ಹಿಂಗಾರು ಸಹ ವಿಪರೀತ ಎನ್ನಿಸುವಷ್ಟು ಮಳೆ ಸುರಿಯುತ್ತಿದೆ. ನಿರಂತರ ಧಾರಾಕರ ಮಳೆ ಹಿನ್ನೆಲೆಯಲ್ಲಿ ಚಿತ್ರಾವತಿ ಜಲಾಶಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಾಗೇಪಲ್ಲಿಯಲ್ಲಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯ ಮೇಲೆ ನೀರು ಹರಿಯುತ್ತಿದೆ. ಬಾಗೇಪಲ್ಲಿ ಪಟ್ಟಣ ಹೊರವಲಯದಲ್ಲಿ ಚಿತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯ ಮಳೆಯ ಅಬ್ಬರಕ್ಕೆ ತುಂಬಿದೆ. ಬಾಗೇಪಲ್ಲಿ ಪಟ್ಟಣಕ್ಕೆ ಜಲ ದಿಗ್ಬಂಧನವಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಸೇತುವೆಗಳ ಮೇಲೆ ಭಾರಿ ನೀರು ಹರಿಯುತ್ತಿದೆ (kolar rains). ಗುಡಿಬಂಡೆ ತಾಲೂಕಿನ ಸೇತುವೆಗಳ ಮೇಲೆ ಸಂಚಾರ ನಿಷೇಧಿಸಲಾಗಿದೆ. ಅಮಾನಿ ಬೈರಸಾಗರ ಕೆರೆ ಕಟ್ಟೆ, ನವಿಲುಗುರ್ಕಿ ಸೇತುವೆ, ಹಂಪಸಂದ್ರ ಸೇತುವೆಗಳ ಮೇಲೆ ಜನರ ಸಂಚಾರವನ್ನು ಗುಡಿಬಂಡೆ ತಾಲೂಕು ಆಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ಸೇತುವೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಬಂದೋಬಸ್ತ್ ಮಾಡಲಾಗಿದೆ. ಚಿಕ್ಕಬಳ್ಳಾಫುರ ಜಿಲ್ಲೆಯಲ್ಲಿ (chikkaballapur rains) ನಿರಂತರ ಧಾರಾಕರ ಮಳೆ ಹಿನ್ನೆಲೆ ಪಾಪಾಗ್ನಿ ನದಿ ನೀರು ಹರಿದು ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದರಿಂದ 15ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಚಿಂತಾಮಣಿ ತಾಲೂಕಿನಲ್ಲಿ ರಸ್ತೆ ಕಡಿತದಿಂದ ತಲಕಾಯಲಬೆಟ್ಟ, ಬುರುಡಗುಂಟೆ, ಕೋರ್ಲಪರ್ತಿ ರಸ್ತೆ ಮಾರ್ಗ ಬಂದ್ ಆಗಿದೆ (karnataka rains).

ಇನ್ನು, ಕೋಲಾರದಲ್ಲಿ ಕೋಲಾರಮ್ಮ ಕೆರೆಯಲ್ಲಿ ಹೊರ ಹರಿವು ಹೆಚ್ಚಿದ್ದು, ಕೋಲಾರದ ಗಾಂಧಿನಗರ ಬಳಿ ಸೇತುವೆ‌ ಕುಸಿಯುವ ಆತಂಕ ಎದುರಾಗಿದೆ. ಸೇತುವೆಯ ಮೇಲೆ ಜನರ ಓಡಾಟಕ್ಕೆ ನಿರ್ಭಂದ ಹೇರಲಾಗಿದೆ. ಕೋಲಾರಮ್ಮ ಕೆರೆ ಅಪಾಯದ ಮಟ್ಟಕ್ಕೆ ಹರಿಯುತ್ತಿದ್ದು, ಹೊರ ಹರಿವು ಹೆಚ್ಚಾಗಿದೆ. ಇದರಿಂದ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ವಾಹನ ಸಂಚಾರ ನಿಷೇಧ: ಆಡಿಯೋ ಹರಿಬಿಟ್ಟ ಗುಡಿಬಂಡೆ ಪೊಲೀಸ್ ಇನ್ಸ್​ಪೆಕ್ಟರ್: ಚಿಕ್ಕಬಳ್ಳಾಫುರ ಜಿಲ್ಲೆಯಲ್ಲಿ ನಿರಂತರ ಧಾರಾಕರ ಮಳೆ ಹಿನ್ನೆಲೆ ಸೇತುವೆಗಳ ಮೇಲೆ ಗುಡಿಬಂಡೆ ತಾಲೂಕು ಆಡಳಿತ ಜನ ಸಂಚಾರ ನಿಷೇಧ ಮಾಡಿದೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಕಟ್ಟೆ, ನವಿಲುಗುರ್ಕಿ ಸೇತುವೆ, ಹಂಪಸಂದ್ರ ಸೇತುವೆ ಮೇಲೆ ಜನ ಸಂಚಾರ ನಿಷೇಧ ಮಾಡಲಾಗಿದೆ. ಸೇತುವೆಗಳ ಮೇಲೆ ನೀರು ರಭಸವಾಗಿ ಹರಿಯುತ್ತಿರುವ ಹಿನ್ನೆಲೆ ಕ್ರಮ ಬೈಕ್ ಕಾರು ಸೇರಿದಂತೆ ಎಲ್ಲ ವಾಹನಗಳ ಸಂಚಾರವೂ ನಿಷೇಧಿಸಲಾಗಿದೆ. ಈ ಸಂಬಂಧ ಆಡಿಯೋ ಹರಿಬಿಟ್ಟ ಗುಡಿಬಂಡೆ ಪೊಲೀಸ್ ಇನ್ಸ್​ಪೆಕ್ಟರ್ ಲಿಂಗರಾಜು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸಾಗನಹಳ್ಳಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮೂಗನಹಳ್ಳಿ ಹಳ್ಳ ತುಂಬಿ ಗ್ರಾಮದೊಳಕ್ಕೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ಅಪಾರ ಪ್ರಮಾಣದ ಅಕ್ಕಿ, ಧಾನ್ಯ ನೀರುಪಾಲಾಗಿದೆ. ರಾತ್ರಿಯಿಡೀ ನಿದ್ದೆಯಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ದೇಗುಲದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೈಅಲರ್ಟ್ ಘೋಷಿಸಿದೆ. ಅಲರ್ಟ್ ಆಗಿರುವಂತೆ ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸೂಚನೆ ನೀಡಿದ್ದಾರೆ. ಸಹಾಯವಾಣಿ ಆರಂಭಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೆಲ್ಪ್‌ಲೈನ್ ಸಂಖ್ಯೆ: 08156-277071 ಮತ್ತು 08156-277077 ಕಾರ್ಯಗತಗೊಳಿಸಿದೆ.

ಇಂದೂ ಮಳೆ ಮುಂದುವರಿದ್ರೆ ಕಷ್ಟ ಕಷ್ಟ: ಕೋಲಾರ ನಗರದಲ್ಲಿ ನಿರಂತರ ಮಳೆಯಿಂದ ಅವಾಂತರವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕೋಲಾರದ ಕಾರಂಜಿಕಟ್ಟೆ, ಬೆತ್ಲಹೆಮ್ ನಗರ, ಶಾಂತಿನಗರದ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ರಾತ್ರಿಯಿಡೀ ಜನ ಜಾಗರಣೆ ಮಾಡಿದ್ದಾರೆ. ಇಂದೂ ಮಳೆ ಮುಂದುವರಿದ್ರೆ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುವುದು ಖಚಿತ.

ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿರುವ ಮಹಿಳೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎ.ಕೊತ್ತೂರಿನಲ್ಲಿ ಅಮರಾವತಮ್ಮ ಎಂಬ ಮಹಿಳೆ ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಅಮರಾವತಮ್ಮ ಶೋಧ ಕಾರ್ಯ ನಡೆದಿದೆ.

Karnataka Rains: ದಕ್ಷಿಣ ಕರ್ನಾಟಕದಲ್ಲೂ ಕೂಡ ಮಳೆಯ ಆರ್ಭಟ! ಹಲವು ಜಿಲ್ಲೆಗಳು ವರುಣನ ರೌದ್ರಾವತಾರಕ್ಕೆ ತತ್ತರ!

Published On - 8:09 am, Fri, 19 November 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ