Byrathi Suresh: ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ವಿರುದ್ಧ 30% ಕಮಿಷನ್ ಆರೋಪ ಮಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು; ಭೈರತಿ ಸುರೇಶ್ ಕೌಂಟರ್ ಹೇಗಿದೆ?

| Updated By: ಸಾಧು ಶ್ರೀನಾಥ್​

Updated on: Jul 16, 2022 | 3:07 PM

Katta Subramanya naidu: ವೈದ್ಯಕೀಯ ಬೇಲ್ ಪಡೆಯಲು ಲಿಪೋಮ ಕ್ಯಾನ್ಸರ್ ಎಂದಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಾ? ಈಗ ಚಿಕಿತ್ಸೆ ಯಾವ ಹಂತದಲ್ಲಿದೆ? ತಾವು ಈಗಲೂ ಸಹ ಮಡಿಕಲ್ ಬೇಲ್ ಮೇಲೆ ಇದಿರೋ ಅಥವಾ ಇಲ್ಲವೂ? ಯಾವ ತರಹದ ಬೇಲ್ ನಲ್ಲಿದೀರಾ? ರೆಗ್ಯುಲರ್ ಬೇಲ್ ಪಡೆದಿದ್ದೀರಾ ಕಟ್ಟಾ ಸುಬ್ರಮಣ್ಯ ನಾಯ್ಕು ರವರೇ ?

Byrathi Suresh: ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ವಿರುದ್ಧ 30% ಕಮಿಷನ್ ಆರೋಪ ಮಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು; ಭೈರತಿ ಸುರೇಶ್ ಕೌಂಟರ್ ಹೇಗಿದೆ?
ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ವಿರುದ್ಧ 30% ಕಮಿಷನ್ ಆರೋಪ ಮಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು; ಭೈರತಿ ಸುರೇಶ್ ಕೌಂಟರ್ ಹೇಗಿದೆ?
Follow us on

ಬೆಂಗಳೂರು: ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿ (Hebbal) ನಡೆಯುತ್ತಿರುವ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಗೆ 30% ಕಮಿಷನ್​ ಕೊಡಬೇಕು ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ನಡೆಸಿದ ಕಟ್ಟಾ ಸುಬ್ರಹ್ಮಣ್ಯ ಅವರು (Katta Subramanya naidu) ಶಾಸಕ ಭೈರತಿ ಸುರೇಶ್​ಗೆ (Byrathi Suresh) ಹಣ ನೀಡಿದರೆ ಪೂಜೆಗೆ ಬರುತ್ತಾರೆ. ₹ 650 ಕೋಟಿ ಕಾಮಗಾರಿಯಲ್ಲಿ ಕೇವಲ ಶೇ. 40ರಷ್ಟು ಕೆಲಸ ಆಗಿದೆ. ಭ್ರಷ್ಟಾಚಾರ ಇಲ್ಲದೇ ಯಾವುದೇ ಕಾಮಗಾರಿ ಇಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಇನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕುಪತ್ರಗಳಲ್ಲಿ ನಕಲಿ ಸಹಿ ಆರೋಪವೂ ಕೇಳಿಬಂದಿದೆ. ನಾನು ಶಾಸಕನಾಗಿದ್ದಾಗ ಬಂದಿರುವ ಹಕ್ಕು ಪತ್ರಗಳಿಗೆ ನಕಲಿ ಸಹಿ ಹಾಕುವ ದಂಧೆ ನಡೆಯುತ್ತಿದೆ. ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಎಸಿಬಿಯಿಂದ ತನಿಖೆ ನಡೆಸಬೇಕು ಎಂದು ಶಾಸಕ ಭೈರತಿ ಸುರೇಶ್​ ವಿರುದ್ಧ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪ ಮಾಡಿದರು.

ಪೂಜೆಗೆ ಸೈಕಲ್ ನಲ್ಲಿ ಬರುವುದು, ಅಲ್ಲಿ ಬೋರ್ಡ್ ಹಾಕಿಕೊಳ್ಳುವುದು. ಸುಳ್ಳ ಅಂದರೆ ಅದು ಭೈರತಿ ಸುರೇಶ್. ಹಿಂದೆ ವೀರಪ್ಪ ಮೊಯ್ಲಿ ಇದ್ದರು, ಈಗ ಇವರು ಸುಳ್ಳು ಹೇಳುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ಸಾಧನೆ ಶೂನ್ಯವಾಗಿದೆ. ಭ್ರಷ್ಟಾಚಾರ ಇಲ್ಲದ ಕಾಮಗಾರಿ ಒಂದೂ ಇಲ್ಲ. ಅಧಿಕಾರಿಗಳಿಗೆ 30 % ಪರ್ಸಂಟೇಜ್ ಕೊಡಬೇಕು. ಎಂಎಲ್ ಎಗೆ ದುಡ್ಡು ಕೊಟ್ಟರೆ ಪೂಜೆಗೆ ಬರುತ್ತಾರೆ. ರಾಧಾಕೃಷ್ಣ ವಾರ್ಡ್ ನಲ್ಲಿ 50 ಲಕ್ಷ ಬಿಲ್ ಆಗಿದೆ, 40 % ಅಷ್ಟೇ ಕೆಲಸ ಆಗಿದೆ. 650 ಕೋಟಿ ಕಾಮಗಾರಿಯಲ್ಲಿ ಕೇವಲ 40 % ಅಷ್ಟೇ ಕೆಲಸ ಆಗಿದೆ. ಎಸಿಬಿಯಿಂದ ತನಿಖೆ ಆಗಬೇಕು. ಗುತ್ತಿಗೆದಾರರನ್ನು ಕೇಳಿದ್ರೆ ಎಲ್ಲಾ ಗೊತ್ತಾಗುತ್ತದೆ. ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಕೂಡಲೇ ಎಸಿಬಿಗೆ ದೂರು ಕೊಡಬೇಕು. ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಾರೆ. ಸರ್ಕಾರಿ ಸರ್ಟಿಫಿಕೇಟ್ ನಲ್ಲಿ ಫೋರ್ಜರಿ ಮಾಡಿ ತನ್ನ ಪೋಟೋ ಹಾಕಿಕೊಂಡಿರುವುದು ತಪ್ಪು. ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕುಪತ್ರದಲ್ಲಿ ಪೊರ್ಜರಿ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ ಬಂದಿರುವ ವಸತಿಯ ಹಕ್ಕು ಪತ್ರ. ಆದರೆ ಇದಕ್ಕೆ ಈಗ ಬೈರತಿ ಸುರೇಶ್ ತನ್ನ ಪೋಟೋ ಪೋರ್ಜರಿ ಮಾಡಿದ್ದಾರೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪಿಸಿದರು.

ಇದಾದ ಮೇಲೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪತ್ರಿಕಾಗೋಷ್ಟಿಗೆ ಶಾಸಕ ಭೈರತಿ ಸುರೇಶ್ ಕೌಂಟರ್ ಕೊಟ್ಟಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಪ್ರಶ್ನೆಗಳನ್ನು ಕೇಳಿ ಭೈರತಿ ಸುರೇಶ್ ಪ್ರಕಟಣೆ ಹೊರಡಿಸಿದ್ದಾರೆ. ಭೈರತಿ ಸುರೇಶ್ ಪ್ರಶ್ನಾವಳಿ ಹೀಗಿದೆ.

  1.  ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕುಂತಿ, ಗ್ರಾಮ ಗುಡ್ಡದಹಳ್ಳಿ ಸರ್ವೆ ನಂ:1 ರಲ್ಲಿ 03 ಎಕರೆ 45 ಗುಂಟೆ ಸರ್ಕಾರಿ ಜಾಗದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನೀವು ಅಕ್ರಮವಾಗಿ ಟಿ.ಡಿ.ಆರ್ ಪಡೆದು 200 ಕೋಟಿ ಹಗರಣ ನಡೆದಿರುವುದು ಸರ್ಕಾರಿ ಮಟ್ಟದಲ್ಲಿ ಹಾಗೂ ಕೋರ್ಟ್ ತನಿಖೆಯು ಯಾವ ಹಂತದಲ್ಲಿದೆ ?
  2. ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನಿಮ್ಮ ಕಂಪನಿ ಇಟಾಸ್ಕ ಕಂಪನಿಯ ಮೇಲೆ ಸಿಬಿಐ ಮತ್ತು ಇ.ಡಿ ಹಾಗೂ ಲೋಕಾಯುಕ್ತರು ನಡೆಸುತ್ತಿರುವ ತನಿಖೆಗಳು ಎಷ್ಟು ಇವೆ ? ಇನ್ನೂ ಎಷ್ಟು ಕ್ರಿಮಿನಲ್ ಹಗರಣಗಳು ಮತ್ತು ಸಿವಿಲ್ ಹಗರಣಗಳು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯಿದೆಗಳ ಕೇಸ್ ಹಾಗೂ ಬಾಗಲೂರು ಮತ್ತು ಬಂಡ ಕೊಡಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮ ಮೇಲೆ ಇರುವ ಮೊಕದ್ದಮೆಗಳು ಎಷ್ಟು ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ?
  3. ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನಿಮ್ಮ ಮೇಲೆ ಇರುವ ಹೈಕೋರ್ಟ್ ಪಿಟೇಶನ್ ನಂ: 432/2013 ಹಾಗೂ ಕೈಂ ನಂ:57/2010 ರ ಕೇಸ್ ತನಿಖೆ ಯಾವ ಮಟ್ಟದಲ್ಲಿದೆ, ತಿಳಿಸುವಿರಾ ?
  4. ವೈದ್ಯಕೀಯ ಬೇಲ್ ಪಡೆಯಲು ಲಿಪೋಮ ಕ್ಯಾನ್ಸರ್ ಎಂದಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಾ? ಈಗ ಚಿಕಿತ್ಸೆ ಯಾವ ಹಂತದಲ್ಲಿದೆ? ತಾವು ಈಗಲೂ ಸಹ ಮಡಿಕಲ್ ಬೇಲ್ ಮೇಲೆ ಇದಿರೋ ಅಥವಾ ಇಲ್ಲವೂ? ಯಾವ ತರಹದ ಬೇಲ್ ನಲ್ಲಿದೀರಾ? ರೆಗ್ಯುಲರ್ ಬೇಲ್ ಪಡೆದಿದ್ದೀರಾ ಕಟ್ಟಾ ಸುಬ್ರಮಣ್ಯ ನಾಯ್ಕು ರವರೇ ?
  5. ಕೆ.ಐ.ಎ.ಡಿ.ಬಿ ಲ್ಯಾಂಡ್ ಕೇಸ್ ಯಾವ ಹಂತದಲ್ಲಿದೆ ? ಪಿಟಿಶನ್ ನಂ: 5698/2019 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ರವರು ಹಾಗೂ ಆರ್ ಸುಭಾಶ್ ರವರು ನೀಡಿರುವ ತೀರ್ಪು ಎನು ಬಂದಿದೆ ತಿಳಿಸುವಿರಾ ? ಹಾಗೂ ಇ.ಡಿ ಕೇಸ್ 27 ಕೋಟಿ ಹಗರಣದಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಕುಟುಂಬದ ಪಾತ್ರವೇನು?
  6. 19 ಡಿಸಂಬರ್ 2020 ರ ಹೈಕೋರ್ಟ್ ನ್ಯಾಯಧೀಶರಾದ ಮೈಕಲ್ ಡಿ ಕೋನ ರವರ ನೀಡಿರುವ ತೀರ್ಪು ಮನಿ ಲಾಂಡ್ರಿಗ್ ಕೇಸ್ ನ ಬಗ್ಗೆ ವಿವರ ನೀಡುವಿರಾ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ? ಇನ್ನೂ ಈ ಕೇಸ್ ಯಾವ ಹಂತದಲ್ಲಿದೆ?
  7. ಇಂಡ್ ಸಿಂಡ್ ಡೆವಲಪರ್ಸ್ ರವರರಿಗೆ ತಾವುಗಳು ಕಟ್ಟಾ ಸುಬ್ರಮಣ್ಯ ನಾಯ್ಡು, ರವರೇ 3ಕೋಟಿ ವಂಚನೆ ಮಾಡಿರುವ ಕ್ರಿಮಿನಲ್ ಮೊಕದ್ದಮೆ ಯಾವ ಹಂತದಲ್ಲಿದೆ ?
  8. ಮಾರ್ಚ್ 18 2021 ಡಿನೋಟಿಫೀಕೇಶನ್ ಹಗರಣ ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ರವರ ಕೇಸ್ ಹೈಕೋರ್ಟ್ ಮಟ್ಟದಲ್ಲಿ ಯಾವ ಹಂತದಲ್ಲಿದೆ ?
  9. ಕಟ್ಟಾ ಸುಬ್ರಮಣ್ಯ ತಾವುಗಳು ಆರ್.ಟಿ.ಐ ಕಾರ್ಯಕರ್ತರನ್ನು ಬಳಸಿಕೊಂಡು ಹೆಬ್ಬಾಳ ಕ್ಷೇತ್ರದ ಎಲ್ಲಾ ವಿಭಾಗದ ಸರ್ಕಾರಿ ಅಧಿಕಾರಿಗಳನ್ನು ಭಯಪಡಿಸಿ ಎದುರಿಸಿ ಹಣ ವಸೂಲಿ ಮಾಡುತ್ತಿರುವ ನೀವು ಹಾಗೂ ಕಟ್ಟಾ ಜಗದೀಶ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನಿಮ್ಮ ಉತ್ತರವೇನು ?
  10. ಬಿ.ಬಿ.ಎಂ.ಪಿ ವಾರ್ಡ್ ಸಂಖ್ಯೆ: 20 & 34 ರ ಗಂಗಾನಗರ & ಗಂಗೇನಹಳ್ಳಿ ವಾರ್ಡ್‌ಗಳಲ್ಲಿ ನೀವು ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ಹಾಗೂ ನಿಮ್ಮ ಜೊತೆಯಲ್ಲಿರುವ ರೌಡಿಗಳು ಅಕ್ರಮವಾಗಿ ಅಕ್ರಮ ಮತದಾರ ರ ಪಟ್ಟಿಯಲ್ಲಿ ಮತದಾರರನ್ನು ಸೇರಿಸುತ್ತಿರುವವರ ಮೇಲೆ ನಿಮ್ಮ ಹಾಗೂ ನಿಮ್ಮ ಕಾರ್ಯಕರ್ತ ರ ಮೇಲೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆಯಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ?
  11. ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನಿಮ್ಮಗೇ ತಿಳಿದಿದೆಯಾ ? ಒಂದು ತಿಂಗಳ ಹಿಂದೆ ಹೆಬ್ಬಾಳದ ಚೋಳನಾಯ್ಕನಹಳ್ಳಿ ನಿವಾಸಿ ಹೆಣ್ಣುಮಗಳು ಮುನಿಲಕ್ಷ್ಮಮ್ಮ ರವರು ನಿಮ್ಮ ಬಳಿ ಸಹಾಯ ಕೇಳಿ ಬಂದಾಗ ಅವರನ್ನು ನೀವು ದಲಿತ ಮಹಿಳೆ ಎಂದು ಹಿಯಾಳಿಸಿದ್ದೀರಿ.

    ಭೈರತಿ ಸುರೇಶ್ ಪ್ರಶ್ನಾವಳಿ