ಗದಗ: ರಾಜ್ಯದಲ್ಲಿ ಕೊರೊನಾ ಹಾವಳಿಯಿಂದ ಲಾಕ್ಡೌನ್ ಜಾರಿಯಲ್ಲಿದ್ದು ಸಾಂಕ್ರಾಮಿಕ ಹರಡುವಿಕೆಯ ನಿಯಂತ್ರಣಕ್ಕಾಗಿ ಹೋರಾಟವೇ ನಡೆಯುತ್ತಿದೆ. ಹೀಗಾಗಿ ಅನಗತ್ಯವಾಗಿ ಜನರು ಹೊರಬಾರದಂತೆ ಪೊಲೀಸರು ಕಟ್ಟೆಚ್ಚರದಿಂದ ಕಾಯುತ್ತಿದ್ದಾರೆ. ಹೀಗಿದ್ದರೂ ಸಹ ಜನರು ಕೆಲವು ಕಾರಣಗಳನ್ನು ಒಡ್ಡುತ್ತಾ ಹೊರಗಡೆ ಓಡಾಡುತ್ತಿರುವ ಘಟನೆಗಳು ಕಿವಿಗೆ ಬೀಳುತ್ತಲೇ ಇದೆ. ಇಲ್ಲೋರ್ವ ವ್ಯಕ್ತಿ ಮನೆಯಿಂದ ಹೊರಬರಲು ಪೊಲೀಸರಿಗೆ ಹೇಳಿದ ಕಾರಣ ಕೇಳಿ ಪೊಲೀಸರು ಮುಸಿ-ಮುಸಿ ನಕ್ಕಿದ್ದಾರೆ. ಈತನು ಹೇಳಿದ ಕಾರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.
ಲಾಕ್ಡೌನ್ ಸಮಯದಲ್ಲಿ ಮನೆಯಿಂದ ಹೊರಟಿದ್ದ ಗದಗ ಜಿಲ್ಲೆ ವ್ಯಕ್ತಿಯೊಬ್ಬರು, ನನ್ನ ಕೋಳಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದೆ. ಹಾಗಾಗಿ ಚಿಕಿತ್ಸೆ ಕೊಡಲು ಪಶುವೈದ್ಯರ ಬಳಿ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೇ ಬುಟ್ಟಿಯಲ್ಲಿದ್ದ ಕೋಳಿಯನ್ನು ಹೊರ ತೆಗೆದು ನೋಡಿ ಎಂದು ತೋರಿಸಿದ್ದಾರೆ. ಕಾರಣ ಕೇಳಿ ನಕ್ಕ ಪೊಲೀಸರು, ಆತನಿಗೆ ಬುದ್ಧಿವಾದ ಹೇಳಿ ಹಿಂತಿರುಗಿ ಮನೆಗೆ ಕಳುಹಿಸಿದ್ದಾರೆ.
The police in #Gadag had a hearty laugh after a man claimed be was taking the hen to a vet as it had constipation issues. Police however sent him back home @santwana99 @ramupatil_TNIE @XpressBengaluru @KannadaPrabha @raghukoppar @karnatakacom @NammaBengaluroo @DgpKarnataka pic.twitter.com/BEdxton5ce
— Amit Upadhye (@Amitsen_TNIE) May 29, 2021
30 ಸೆಕೆಂಡುಗಳ ವಿಡಿಯೋ ಕ್ಲಿಪ್ಅನ್ನು ಮೇ 29ನೇ ತಾರೀಕಿನಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕೆಲವರು ವ್ಯಕ್ತಿಯ ಕಾರಣ ಕೇಳಿ ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ, ಪ್ರಾಣಿ ಪ್ರಿಯರಾದ ಇನ್ನಿತರರು ನಿಜವಾಗಿಯೂ ಆತ ಸಾಕಿದ ಕೋಳಿಗೆ ಮಲಬದ್ಧತೆ ಸಮಸ್ಯೆ ಕಾಡಿರಬಹುದು ಎಂದು ವ್ಯಕ್ತಿಯ ಪರ ನಿಂತಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್ ಸಮಯದಲ್ಲಿ ವಿಚಿತ್ರ ಕಾರಣಗಳನ್ನು ಕೊಟ್ಟು ಜನರು ಹೊರಬರುವ ಪ್ರಸಂಗಗಳು ಇತ್ತೀಚೆಗೆ ಬಾರೀ ಸದ್ದು ಮಾಡುತ್ತಿದೆ.
ಇದನ್ನೂ ಓದಿ:
ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು