ಬೆಂಗಳೂರು, (ಸೆಪ್ಟೆಂಬರ್ 19): ಚೈತ್ರಾ ಕುಂದಾಪುರ(Chaitra Kundapura) ವಂಚನೆ ಪ್ರಕರಣದ 3ನೇ ಆರೋಪಿಯಾಗಿರುವ ವಿಜಯನಗರದ(Vijayanagara) ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀಯನ್ನು(Abhinava Halashree) ಸಿಸಿಬಿ ಪೊಲೀಸರ ಮಾಹಿತಿ ಮೇರೆ ಕಟಕ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾವಿ ಬಿಟ್ಟು ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭವನೇಶ್ವರಿಯಿಂದ ಮಾರ್ಗವಾಗಿ ವಾರಾಣಸಿಗೆ ತೆರಳಲು ರೈಲಿನಲ್ಲಿ ಕುಳಿತುಕೊಂಡಿದ್ದ ವೇಳೆ ಪೊಲೀಸರು ಲಾಕ್ ಮಾಡಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ನಿನ್ನೆ(ಸೆಪ್ಟೆಂಬರ್ 18) ರಾತ್ರಿ 9:30ಕ್ಕೆ ಹಾಲಶ್ರೀಯನ್ನು ಕಟಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈಗಾಗಲೇ ಸಿಸಿಬಿ ಅಧಿಕಾರಿಗಳು ಕಟಕ್ ತಲುಪಿದ್ದು, ಟ್ರಾನ್ಸಿಟ್ ವಾರಂಟ್ ಪಡೆದು iಂದು (ಸೆಪ್ಟೆಂಬರ್ 19) ಸಂಜೆ ವೇಳೆಗೆ ಬೆಂಗಳೂರಿಗೆ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ವಾಮೀಜಿ ಸಿಕ್ಕಿಬಿದ್ದಿದ್ದೇಗೆ? ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಹಾಲಶ್ರೀ ಎಲ್ಲಿಂದ ಎಲ್ಲಿಗೆ ಹೋಗಿದ್ದರು? ಎನ್ನುವ ವಿವರ ಇಲ್ಲಿದೆ.
ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ಹಾಲಶ್ರೀ ಇತ್ತ ವಿಜಯನಗರದ ಹಿರೇ ಹಡಗಲಿಯ ಮಠಕ್ಕೂ ಬಾರದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಮೊದಲು ಹೊಸ ಮೊಬೈಲ್ ‘ಖರೀದಿ ಮಾಡಿದ್ದ ಸ್ವಾಮೀಜಿ, ಪ್ರತಿಯೊಂದು ಕಾಲ್‌ಗೂ ಮೊಬೈಲ್ ಸಿಮ್ ಚೇಂಜ್ ಮಾಡುತ್ತಿದ್ದ, ಆದ್ರೆ ಕರ್ನಾಟಕಕ್ಕೆ ಪೋನ್ ಮಾಡಿದ್ದಾಗ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕದ ಯಾರಿಗೋ ಒಬ್ಬರಿಗೆ ಕರೆ ಮಾಡಿದ್ದ ಲೋಕೇಷನ್ ಮೂಲಕ ಪತ್ತೆ ಹಚ್ಚಿ, ಹಾಲಶ್ರೀಯನ್ನು ಟ್ರೇಸ್ ಮಾಡಿ ಬಂಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್, ದೊಡ್ಡವರ ಹೆಸರು ಹೊರಬರುತ್ತಾ?
ಕರ್ನಾಟಕದ ಮೈಸೂರಿಗೆ ಹೋಗಿದ್ದ ಸ್ವಾಮೀಜಿ ಅಲ್ಲಿಂದ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದ. ಬಳಿಕ ಹೈದರಾಬಾದ್ ವಿಮಾನ ನಿಲ್ದಾಣದಿಂದ ಓಡಿಶಾದ ಕಟಕ್‌ಗೆ ತೆರಳಿದ್ದ ಸ್ವಾಮೀಜಿ, ನಂತರ ಖಾವಿ ಬಿಟ್ಟು ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭವನೇಶ್ವರಿಯಿಂದ ಮಾರ್ಗವಾಗಿ ವಾರಾಣಸಿಗೆ ತೆರಳಲು ರೈಲಿನಲ್ಲಿ ಕುಳಿತುಕೊಂಡಿದ್ದ ವೇಳೆ ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ.
Published On - 12:35 pm, Tue, 19 September 23