AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲೂ ಕಬಂಧ ಬಾಹು ಚಾಚಿದ ಕೊರೊನಾ: ಗಡಿ ಪ್ರದೇಶ ವ್ಯಾಪ್ತಿಯಲ್ಲೂ ಹೈ ಅಲರ್ಟ್

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಇಡೀ ಚೀನಾ ದೇಶವನ್ನೇ ಹುರಿದು ಮುಕ್ಕುತ್ತಿದೆ. 300ಕ್ಕೂ ಹೆಚ್ಚು ಅಮಾಯಕರನ್ನು ಬಲಿಪಡೆದು ಸಾವಿನ ಕೇಕೆ ಹಾಕುತ್ತಿದೆ. ಸಾಲ್ದು ಅಂತಾ ಇಡೀ ಜಗತ್ತನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದು, ಭಾರತಕ್ಕೂ ಎಂಟ್ರಿ ಕೊಟ್ಟಿದೆ. ಆದ್ರೆ, ಆ ಡೆಡ್ಲಿ ವೈರಸ್ ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಲು ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚಿದ ಕೊರೊನಾ ಭೀತಿ.. ಹುಬ್ಬಳ್ಳಿಯಲ್ಲಿ ಹೈ ಅಲರ್ಟ್..! ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ ಸಂದೀಪ್ ತೇಳಸಂಗದ್ ಚೀನಾದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ರು. ಆದ್ರೆ, ಜನವರಿ 18 ರಂದು ಹುಬ್ಬಳ್ಳಿಗೆ ಬಂದಿದ್ರು. […]

ಕೇರಳದಲ್ಲೂ ಕಬಂಧ ಬಾಹು ಚಾಚಿದ ಕೊರೊನಾ: ಗಡಿ ಪ್ರದೇಶ ವ್ಯಾಪ್ತಿಯಲ್ಲೂ ಹೈ ಅಲರ್ಟ್
ಸಾಧು ಶ್ರೀನಾಥ್​
|

Updated on: Feb 04, 2020 | 7:51 AM

Share

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಇಡೀ ಚೀನಾ ದೇಶವನ್ನೇ ಹುರಿದು ಮುಕ್ಕುತ್ತಿದೆ. 300ಕ್ಕೂ ಹೆಚ್ಚು ಅಮಾಯಕರನ್ನು ಬಲಿಪಡೆದು ಸಾವಿನ ಕೇಕೆ ಹಾಕುತ್ತಿದೆ. ಸಾಲ್ದು ಅಂತಾ ಇಡೀ ಜಗತ್ತನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದು, ಭಾರತಕ್ಕೂ ಎಂಟ್ರಿ ಕೊಟ್ಟಿದೆ. ಆದ್ರೆ, ಆ ಡೆಡ್ಲಿ ವೈರಸ್ ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಲು ಕಟ್ಟೆಚ್ಚರ ವಹಿಸಲಾಗಿದೆ.

ಹೆಚ್ಚಿದ ಕೊರೊನಾ ಭೀತಿ.. ಹುಬ್ಬಳ್ಳಿಯಲ್ಲಿ ಹೈ ಅಲರ್ಟ್..! ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ ಸಂದೀಪ್ ತೇಳಸಂಗದ್ ಚೀನಾದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ರು. ಆದ್ರೆ, ಜನವರಿ 18 ರಂದು ಹುಬ್ಬಳ್ಳಿಗೆ ಬಂದಿದ್ರು. ಅದೇ ಹೊತ್ತಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸಲು ಶುರು ಮಾಡಿತ್ತು. ಆದ್ರೆ, 14 ದಿನಗಳ ನಂತ್ರ ಸಂದೀಪ್​ಗೆ ಮೊನ್ನೆ ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡಿದೆ.

ತಕ್ಷಣವೇ ಕುಟುಂಬಸ್ಥರು ಸಂದೀಪ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು.‌ ನಂತರ ಧಾರವಾಡ ಡಿಹೆಚ್​ಒ ಮಾರ್ಗದರ್ಶನದ ಮೇಲೆ ಕಿಮ್ಸ್​ನ ಸ್ಪೆಷಲ್‌ ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿದೆ. ಅಲ್ದೆ ಸಂದೀಪ್ ರಕ್ತದ ಮಾದರಿಯನ್ನ ಮಂಬೈಗೆ ಕಳುಹಿಸಲಾಗಿದ್ದು, ರಿಪೋರ್ಟ್​ ಬಂದ ಮೇಲೆ ಮುಂದಿನ ನಿರ್ಧಾರ ಮಾಡ್ತೇವೆ ಅಂತಾ ವೈದ್ಯರು ಹೇಳಿದ್ದಾರೆ.

ಯಾರನ್ನೂ ವಾರ್ಡ್​ಗೆ ಬಿಡದಂತೆ ನೋಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್​ ಘೋಷಿಸಲಾಗಿದ್ದು, ಯಾವುದೇ ಕ್ಷಣದಲ್ಲೂ ವೈದ್ಯರು, ಸಿಬ್ಬಂದಿ ಚಿಕಿತ್ಸೆ ನೀಡಲು ತುರ್ತು ಸೂಚನೆ‌ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟೆಚ್ಚರ..! ಕೇರಳದಲ್ಲಿ ಕೊರೊನಾ ವೈರಸ್ ಎಂಟ್ರಿ ಕೊಟ್ಟಿದೆ. ಹೀಗಾಗಿ, ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತಂಕ ಮೂಡಿಸಿದೆ. ಕರಾವಳಿಯಲ್ಲಿ ಈವರೆಗೂ ಸೋಂಕು ಬಾಧಿತರು ಕಂಡು ಬರದಿದ್ರೂ, ಕೇರಳದಿಂದ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಬರ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್​ಪೋರ್ಟ್​, ನವಮಂಗಳೂರು ಬಂದರು, ರೈಲ್ವೆ ಸ್ಟೇಷನ್, ಕೆಎಸ್ಆರ್​ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಜಾಗೃತಿ ನೀಡುವ ಕಾರ್ಯ ನಡೆಯುತ್ತಿದೆ.

ವಿದೇಶದಿಂದ ಬರುವ ಯಾವುದೇ ವ್ಯಕ್ತಿ ಬಗ್ಗೆ ಆರೋಗ್ಯ ಸಂಶಯವಿದ್ದರೆ ತಕ್ಷಣವೇ ಆರೋಗ್ಯ ಇಲಾಖೆಗೆ ತಿಳಿಸುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಇದ್ರ ಜತೆಗೆ ಕೊರೊನಾ ವೈರಸ್ ಬಾಧಿತರು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆಗೆಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ 10 ಬೆಡ್​ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಖಾಸಗಿ ಬೆಡ್​ನಲ್ಲೂ ತಲಾ‌ 5 ಬೆಡ್​ಗಳನ್ನು ಮೀಸಲಿಡಲಾಗಿದ್ದು, ಸಹಾಯವಾಣಿ ನಂಬರ್​ನ್ನೂ ತೆರೆಯಲಾಗಿದೆ. ಒಟ್ನಲ್ಲಿ, ರಾಜ್ಯದಲ್ಲೂ ಕೊರೊನಾ ವೈರಸ್ ಆತಂಕ ಮೂಡಿಸಿದ್ದು, ಹುಬ್ಬಳ್ಳಿ, ಮಂಗಳೂರಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!