ಬೆಂಗಳೂರು: ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ‌ ಅಧಿಕಾರವಿಲ್ಲ; ಹೈಕೋರ್ಟ್

ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ. ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹೀಗಾಗಿ ಪಿಂಚಣಿಯ ಹಕ್ಕನ್ನು 2ನೇ ಪತ್ನಿ ಕೇಳುವಂತಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ  ನ್ಯಾ.ಕೃಷ್ಣ ಎಸ್ ದೀಕ್ಷಿತ್‌ರಿದ್ದ ಪೀಠ ಆದೇಶಿಸಿದೆ.

ಬೆಂಗಳೂರು: ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ‌ ಅಧಿಕಾರವಿಲ್ಲ; ಹೈಕೋರ್ಟ್
ಹೈಕೋರ್ಟ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Nov 24, 2023 | 8:51 PM

ಬೆಂಗಳೂರು, ನ.24: ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ‌(Pension)ಅಧಿಕಾರವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ. ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹೀಗಾಗಿ ಪಿಂಚಣಿಯ ಹಕ್ಕನ್ನು 2ನೇ ಪತ್ನಿ ಕೇಳುವಂತಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ  ನ್ಯಾ.ಕೃಷ್ಣ ಎಸ್ ದೀಕ್ಷಿತ್‌ರಿದ್ದ ಪೀಠ ಆದೇಶಿಸಿದೆ.

ಈ ಪಿಂಚಣಿ ಎಂಬುದು ಸಾಮಾನ್ಯವಾಗಿ, ಜನರು ಉದ್ಯೋಗದಿಂದ ಕ್ರಮಬದ್ಧ ವರಮಾನವನ್ನು ಗಳಿಸದಿರುವಂಥ ಕಾಲದಲ್ಲಿ ಅವರಿಗೆ ವರಮಾನವನ್ನು ಒದಗಿಸುವಂತಹ ಒಂದು ವ್ಯವಸ್ಥೆಯಾಗಿದೆ. ಅದು ನಿವೃತ್ತಿ ಆದಾಯವಾಗಿ ಆ ಮೇಲಿನ ಬಳಕೆಗಾಗಿ ನಿಧಿಯ ತೆರಿಗೆ-ಮುಕ್ತ ಶೇಖರಣೆಗೆ ಎಡೆಗೊಡುವ ಒಂದು ತೆರಿಗೆ ಮುಕ್ತ ಉಳಿತಾಯ ಸಾಧನವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ