KAS ಅಧಿಕಾರಿ ರಂಗನಾಥ್ ವಿರುದ್ಧ ತನಿಖೆ: ಅನುಮತಿ ಬಗ್ಗೆ ನಿರ್ಧರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಂಗನಾಥ್ ವಿರುದ್ಧ ತನಿಖೆಗೆ ಅನುಮತಿ ಬಗ್ಗೆ ನಿರ್ಧರಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಪೂರ್ವಾನುಮತಿ ನೀಡುವ ಬಗ್ಗೆ 1 ತಿಂಗಳಲ್ಲಿ ನಿರ್ಧರಿಸಿ ಎಂದು ಹೈಕೋರ್ಟ್​ ಸೂಚಿಸಿದೆ.

KAS ಅಧಿಕಾರಿ ರಂಗನಾಥ್ ವಿರುದ್ಧ ತನಿಖೆ: ಅನುಮತಿ ಬಗ್ಗೆ ನಿರ್ಧರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಅಧಿಕಾರಿ ರಂಗನಾಥ್
Updated By: ಸಾಧು ಶ್ರೀನಾಥ್​

Updated on: Jan 15, 2021 | 5:04 PM

ಬೆಂಗಳೂರು: KAS ಅಧಿಕಾರಿ ಕೆ. ರಂಗನಾಥ್ ವಿರುದ್ಧ ತನಿಖೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ. ಪೂರ್ವಾನುಮತಿ ನೀಡುವ ಬಗ್ಗೆ 1 ತಿಂಗಳಲ್ಲಿ ನಿರ್ಧರಿಸಿ ಎಂದು ಹೈಕೋರ್ಟ್​ ಸೂಚಿಸಿದೆ.

2020 ನವೆಂಬರ್ 25ರಿಂದ ಮನವಿ ಬಾಕಿ ಇದೆ
ಅಧಿಕಾರಿ ಕೆ. ರಂಗನಾಥ್ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ CBI ತನಿಖೆಗೆ ಕೋರಿದ್ದ PIL ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಎಸಿಬಿ ಎಡಿಜಿಪಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತನಿಖೆಗೆ ಪೂರ್ವಾನುಮತಿ ನೀಡುವಂತೆ ಎಸಿಬಿ ಮನವಿ ಮಾಡಿದೆ. ಸರ್ಕಾರದ ಅನುಮತಿಗೆ ನಾವು ಕಾಯುತ್ತಿದ್ದೇವೆ. 2020 ನವೆಂಬರ್ 25ರಿಂದ ನಮ್ಮ ಮನವಿ ಬಾಕಿ ಇದೆ ಎಂದು ಎಸಿಬಿ ಮಾಹಿತಿ ನೀಡಿತ್ತು.

ಬೆಂಗಳೂರು ಉತ್ತರ ಎ.ಸಿ. ಹುದ್ದೆಯಲ್ಲಿದ್ದ ಅಧಿಕಾರಿ ಕೆ. ರಂಗನಾಥ್ ಲಾಕ್‌ಡೌನ್ ವೇಳೆ ಖಾಸಗಿ ವ್ಯಕ್ತಿಗಳಿಗೆ ಜಮೀನು ಖಾತೆ ಮಾಡಿಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವೇಳೆ, ಎ.ಸಿ. ರಂಗನಾಥ್ ಪ್ರಕರಣವನ್ನು TV9 ಬಯಲಿಗೆಳೆದಿತ್ತು.

ಭ್ರಷ್ಟಾಚಾರ ಎಸಗಿದ ಜಾಗಕ್ಕೇ ಮತ್ತೆ ಟ್ರಾನ್ಸ್​ಫರ್​: ಆರೋಪ ಹೊತ್ತ ಅಧಿಕಾರಿಗೆ ಸರ್ಕಾರದ ಮಣೆ