ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್: ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್ ರದ್ದು

|

Updated on: Mar 25, 2021 | 6:49 PM

ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್​ನ ಹೈಕೋರ್ಟ್​ ರದ್ದುಪಡಿಸಿದೆ. ಇದಲ್ಲದೆ,ಹೈಕೋರ್ಟ್ JMFC ಕೋರ್ಟ್​ಗೆ ಪ್ರಕರಣ ಹಿಂತಿರುಗಿಸಿದೆ. ವಕೀಲ ರಮೇಶ್ ನಾಯ್ಕ್ ಎಂಬುವವರು ನಟಿ ವಿರುದ್ದ ಖಾಸಗಿ ದೂರು ಸಲ್ಲಿಸಿದ್ದರು. ಅಂತೆಯೇ, ತುಮಕೂರಿನ JMFC ಕೋರ್ಟ್ ತನಿಖೆಗೆ ಆದೇಶಿಸಿತ್ತು.

ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್: ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್ ರದ್ದು
ಕಂಗನಾ ರಣಾವತ್​
Follow us on

ಬೆಂಗಳೂರು: ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್​ನ ಹೈಕೋರ್ಟ್​ ರದ್ದುಪಡಿಸಿದೆ. ಇದಲ್ಲದೆ,ಹೈಕೋರ್ಟ್ JMFC ಕೋರ್ಟ್​ಗೆ ಪ್ರಕರಣ ಹಿಂತಿರುಗಿಸಿದೆ. ವಕೀಲ ರಮೇಶ್ ನಾಯ್ಕ್ ಎಂಬುವವರು ನಟಿ ವಿರುದ್ದ ಖಾಸಗಿ ದೂರು ಸಲ್ಲಿಸಿದ್ದರು. ಅಂತೆಯೇ, ತುಮಕೂರಿನ JMFC ಕೋರ್ಟ್ ತನಿಖೆಗೆ ಆದೇಶಿಸಿತ್ತು.

ಹಾಗಾಗಿ, ಪ್ರಕರಣ ರದ್ದು ಕೋರಿ ಕಂಗನಾ ರಣಾವತ್ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ, ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಲೋಪವಿದ್ದ ಹಿನ್ನೆಲೆಯಲ್ಲಿ JMFC ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಹಿಂದೆ, ತಮ್ಮ ವಿರುದ್ಧ ತುಮಕೂರಿನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ತಡೆ ನೀಡಬೇಕು ಎಂದು ನಟಿ ಕಂಗನಾ ರಣಾವತ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸಿಲ್ಲ ಎಂಬ ಕಾರಣಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತ್ತು. ಹೊಸ ರೈತ ಮಸೂದೆಯನ್ನು ವಿರೋಧಿಸುವವರನ್ನು ಭಯೋತ್ಪಾದಕರು ಎಂದು ಟ್ವೀಟ್​ ಮಾಡಿದ್ದ ಕಂಗನಾ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು.

ಸಿಎಎ ವಿರುದ್ಧ ವದಂತಿ ಮತ್ತು ತಪ್ಪು ಮಾಹಿತಿಯನ್ನು ಹಬ್ಬಿಸಿ ದಂಗೆಗೆ ಕಾರಣರಾದ ಜನರೇ ಈಗ ರೈತ ಮಸೂದೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಾ, ದೇಶದಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಅವರು ಭಯೋತ್ಪಾದಕರು ಎಂದು ಕಂಗನಾ ರಣಾವತ್​ ಟ್ವೀಟ್ ಮಾಡಿದ್ದರು. ಈ ಬಗ್ಗೆ ತುಮಕೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್​ನಲ್ಲಿ ಕಂಗನಾ ಮನವಿ ಸಲ್ಲಿಸಿದ್ದರು.

ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆ ಕೋರಿ ಪಿಐಎಲ್
ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆಯಾಗುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್​ನ ವಿಚಾರಣೆ ಕೈಗೊಂಡ ಹೈಕೋರ್ಟ್​ ‌ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ. ಕಂಪ್ಲಿಯ ಕೆ.ಎಸ್.ಚಾಂದ್ ಬಾಷಾ ಮತ್ತಿತ್ತರರು ಪಿಐಎಲ್ ಸಲ್ಲಿಸಿದ್ದರು. ‌ಜಿಲ್ಲೆ ರಚನೆಗೆ ನಾವು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ. ಕಂಪ್ಲಿ ಹೊಸಪೇಟೆಯ ಸಮೀಪದಲ್ಲಿದೆ. ಹಾಗಾಗಿ, ಅದನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ನಿರ್ದೇಶನಕ್ಕೆ ಮನವಿ ಮಾಡಿದ್ದರು.

ಇದೀಗ, ವಿಜಯನಗರ ಜಿಲ್ಲೆ ಅಧಿಸೂಚನೆಗೆ ತಡೆ ನೀಡಲು ಕೋರ್ಟ್​ ನಿರಾಕರಿಸಿದೆ. ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿಸುವಂತೆ ನ್ಯಾಯಾಲಯ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ‘ಸುಧಾಕರ್​ ಆ ಹೆಣ್ಣುಮಕ್ಕಳನ್ನೂ ಸೇರಿಸಿ ಹೀಗೆಲ್ಲಾ ಹೇಳಿದರಲ್ಲಾ.. ಪಾಪ ಅವ್ರು ಗಂಡನ ಹತ್ತಿರ ಹೋಗಿ ಬೈಸಿಕೊಳ್ಳಬೇಕು’

Published On - 5:30 pm, Thu, 25 March 21