ದರ್ಶನ್ ಜೊತೆ ಕುಳಿತು ತಂಬಾಕು ಜಗಿದ ಆರೋಪ: ಶ್ರೀನಿವಾಸ್ ಅಲಿಯಾಸ್​ ಕುಳ್ಳ ಸೀನ ವಿರುದ್ಧದ ಕೇಸ್​ಗೆ ಹೈಕೋರ್ಟ್ ತಡೆ

ಶ್ರೀನಿವಾಸ್​ ಅಲಿಯಾಸ್​ ಕುಳ್ಳ ಸೀನಾ ವಿರುದ್ಧದ ಕೇಸ್​ಗೆ ಹೈಕೋರ್ಟ್ ತಡೆ ನೀಡಿದೆ. ಫೋಟೋ ವೈರಲ್ ಆಗಿದ್ದಕ್ಕೆ ಕರ್ನಾಟಕ ಜೈಲು ಅಧಿನಿಯಮ 2022ರ ಸೆಕ್ಷನ್ 42 ಉಲ್ಲಂಘನೆ ಕೇಸ್ ದಾಖಲಿಸಲಾಗಿತ್ತು. ಯಾವುದೇ ಶಿಕ್ಷಾರ್ಹ ಅಪರಾಧ ಮಾಡಿಲ್ಲವೆಂದು ಶ್ರೀನಿವಾಸ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದಾರೆ.

ದರ್ಶನ್ ಜೊತೆ ಕುಳಿತು ತಂಬಾಕು ಜಗಿದ ಆರೋಪ: ಶ್ರೀನಿವಾಸ್ ಅಲಿಯಾಸ್​ ಕುಳ್ಳ ಸೀನ ವಿರುದ್ಧದ ಕೇಸ್​ಗೆ ಹೈಕೋರ್ಟ್ ತಡೆ
ದರ್ಶನ್ ಜೊತೆ ಕುಳಿತು ತಂಬಾಕು ಜಗಿದ ಆರೋಪ: ಶ್ರೀನಿವಾಸ್ ಅಲಿಯಾಸ್​ ಕುಳ್ಳ ಸೀನ ವಿರುದ್ಧದ ಕೇಸ್​ಗೆ ಹೈಕೋರ್ಟ್ ತಡೆ
Follow us
Ramesha M
| Updated By: ಗಂಗಾಧರ​ ಬ. ಸಾಬೋಜಿ

Updated on: Sep 26, 2024 | 10:10 PM

ಬೆಂಗಳೂರು, ಸೆಪ್ಟೆಂಬರ್​ 26: ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್ (Darshan) ಜೈಲು ಪಾಲಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್‌ ಸಿಗರೇಟ್‌ ಸೇದಿರುವ ಫೋಟೋಗಳು ವೈರಲ್ ಆಗಿದ್ದವು. ದರ್ಶನ್​ ಫೋಟೋ ಜೊತೆಗೆ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್​ ಕುಳ್ಳ ಸೀನಾ ಫೋಟೋ ಕೂಡ ವೈರಲ್ ಆಗಿತ್ತು. ಜೈಲಿನಲ್ಲಿ ದರ್ಶನ್ ಜೊತೆ ಕುಳಿತು ತಂಬಾಕು ಜಗಿಯುತ್ತಿದ್ದ ಆರೋಪದಿಡಿ ಆತನ ವಿರುದ್ಧ ಕೇಸ್​ ದಾಖಲಾಗಿತ್ತು. ಸದ್ಯ ಈ ಕೇಸ್​ಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಡೆ ನೀಡಿದೆ.

ಹೌದು. ಶ್ರೀನಿವಾಸ್​ ಅಲಿಯಾಸ್​ ಕುಳ್ಳ ಸೀನಾ ವಿರುದ್ಧದ ಕೇಸ್​ಗೆ ಹೈಕೋರ್ಟ್ ತಡೆ ನೀಡಿದೆ. ಫೋಟೋ ವೈರಲ್ ಆಗಿದ್ದಕ್ಕೆ ಕರ್ನಾಟಕ ಜೈಲು ಅಧಿನಿಯಮ 2022ರ ಸೆಕ್ಷನ್ 42 ಉಲ್ಲಂಘನೆ ಕೇಸ್ ದಾಖಲಿಸಲಾಗಿತ್ತು. ಯಾವುದೇ ಶಿಕ್ಷಾರ್ಹ ಅಪರಾಧ ಮಾಡಿಲ್ಲವೆಂದು ಶ್ರೀನಿವಾಸ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ​ ರಾಜಾತಿಥ್ಯ ಬೆನ್ನಲ್ಲೇ ಜೈಲು ಇಲಾಖೆಗೆ ಸರ್ಜರಿ, ಅಧಿಕಾರಿಗಳ ವರ್ಗ

ಜೈಲು ಕೈಪಿಡಿಯಲ್ಲಿ ಒಂದೆಡೆ ಧೂಮಪಾನ ನಿಷೇಧವಿದೆ. ನಿಯಮದ ಮತ್ತೊಂದೆಡೆ ಸ್ಮೋಕಿಂಗ್ ಝೋನ್ ಬಗ್ಗೆ ಹೇಳಲಾಗಿದೆ. ನಿಯಮದಲ್ಲೇ ವೈರುಧ್ಯವಿರುವ ಹಿನ್ನೆಲೆ‌ ಕೇಸ್​ಗೆ ತಡೆ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

ಶ್ರೀನಿವಾಸ್ ಅಲಿಯಾಸ್​ ಕುಳ್ಳ ಸೀನಾ ಕೋಣನಕುಂಟೆ ಠಾಣಾ ವ್ಯಾಪ್ತಿಯ ರೌಡಿ ಶೀಟರ್. ತಲಘಟ್ಟಪುರ ಠಾಣಾ ವ್ಯಾಪ್ತಿಯ ಕೊಲೆ ಕೇಸ್​ನಲ್ಲಿ ಜೈಲುಪಾಲಾಗಿದ್ದಾನೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್​ಗೆ ರಾಜ್ಯಾತಿಥ್ಯ: ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂದು ಜೋಶಿ

ಮತ್ತೊಂದು ಕಡೆ ವಿಲ್ಸನ್ ಗಾರ್ಡನ್ ನಾಗ ಬೇರೆ ಜೈಲಿಗೆ ಶಿಫ್ಟ್ ಆಗುವ ಆದೇಶ ಬಂದರೂ ಪೊಲೀಸರು ಆತನನ್ನ ವಶಕ್ಕೆ ತೆಗೆದುಕೊಂಡಿದ್ದರು. ಇತ್ತೀಚೆಗೆ ದಿಢೀರ್ ಬೆಳವಣಿಗೆಯಿಂದ ವಿಲ್ಸನ್ ಗಾರ್ಡನ್ ನಾಗನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ರಾಜತಿಥ್ಯ ಕೇಸ್ ಹೊರಬಂದ ಮೇಲೆ ಜೈಲಿನ ಮೇಲೆ ದಾಳಿ ನಡೆಸಿದ್ದ ಪೊಲೀಸರು ನಾಗ ಸೇರಿದಂತೆ ಅನೇಕ ಕೈದಿಗಳಿಂದ ಸುಮಾರು 15 ಮೊಬೈಲ್​ಗಳನ್ನ ವಶಕ್ಕೆ ಪಡೆದಿದ್ದರು. ಈ ಮೊಬೈಲ್ ಫೋನ್ ಪತ್ತೆ ಸಂಬಂಧ ಆರೋಪಿಗಳು ಜೈಲಿನಲ್ಲಿ ತನಿಖೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ವಿಚಾರಣೆ ಮಾಡಬೇಕಿದೆ ಎಂದು ನಾಗ ಮತ್ತು ಮತ್ತೊಬ್ಬ ರೌಡಿಶೀಟರ್ ವೇಲುನನ್ನ ಮೂರು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.