ಸಿದ್ದರಾಮಯ್ಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ನಾಯಕರು; ಓಲೈಕೆ ಭರದಲ್ಲಿ ಏಕಾಂಗಿಯಾದ್ರಾ ಸಿದ್ದರಾಮಯ್ಯ?

| Updated By: ಸಾಧು ಶ್ರೀನಾಥ್​

Updated on: Mar 25, 2022 | 5:46 PM

Siddaramaiah: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು, ಹೈಕೋರ್ಟ್​​ ತೀರ್ಪಿಗೆ ವಿರುದ್ಧವಾಗಿ, ಬೆಂಬಲಿಸುವ ಭರದಲ್ಲಿ ಅಸೆಂಬ್ಲಿಯಲ್ಲಿ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಮೀಜಿಗಳು ತಲೆಯ ಮೇಲೆ ಪೇಟಾ ಹಾಕುವುದಿಲ್ಲವಾ? ಎಂದು ಮೈಸೂರಿನಲ್ಲಿ ಕುಚೋದ್ಯವಾಗಿ ಹೇಳಿರುವುದು ಈಗ ರಾಜ್ಯದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ.

ಸಿದ್ದರಾಮಯ್ಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ನಾಯಕರು; ಓಲೈಕೆ ಭರದಲ್ಲಿ ಏಕಾಂಗಿಯಾದ್ರಾ ಸಿದ್ದರಾಮಯ್ಯ?
ಸ್ವಾಮೀಜಿಗಳ ಶಿರವಸ್ತ್ರ ಮತ್ತು ಶಾಲಾ ಸಮವಸ್ತ್ರಕ್ಕೂ ಎಲ್ಲಿಯ ಹೋಲಿಕೆ, ಯಾಕೆ ಹೋಲಿಕೆ?
Follow us on

ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು, ಹೈಕೋರ್ಟ್​​ ತೀರ್ಪಿಗೆ ವಿರುದ್ಧವಾಗಿ, ಬೆಂಬಲಿಸುವ ಭರದಲ್ಲಿ ಅಸೆಂಬ್ಲಿಯಲ್ಲಿ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಮೀಜಿಗಳು ತಲೆಯ ಮೇಲೆ ಪೇಟಾ ಹಾಕುವುದಿಲ್ಲವಾ? ಎಂದು ಮೈಸೂರಿನಲ್ಲಿ ಕುಚೋದ್ಯವಾಗಿ ಹೇಳಿರುವುದು ಈಗ ರಾಜ್ಯದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಸ್ವಾಮೀಜಿಗಳ ಶಿರವಸ್ತ್ರ ಮತ್ತು ಶಾಲಾ ಸಮವಸ್ತ್ರಕ್ಕೂ ಎಲ್ಲಿಯ ಹೋಲಿಕೆ, ಯಾಕೆ ಹೋಲಿಕೆ? ಎಂದು ರಾಜ್ಯದಾದ್ಯಂತ ಸ್ವಾಮೀಜಿಗಳು ಸೌಮ್ಯವಾಗಿ ಕೆಂಡಕಾರಿದ್ದಾರೆ. ಇನ್ನು ಸಿದ್ದರಾಮಯ್ಯ ವಿರುದ್ಧ ಆಡಳಿತಾರೂಢ ಕೇಸರಿ ಪಡೆ ಮುಗಿಬಿದ್ದಿದೆ. ಹಾಗಾದರೆ ಹಿಜಾಬ್​ ಅಗ್ನಿಕುಂಡಕ್ಕೆ ತುಪ್ಪ ಸುರಿದ್ರಾ ಸಿದ್ದು? ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ಸ್ವಾಮೀಜಿಗಳ ಶಿರವಸ್ತ್ರ ಮತ್ತು ಶಾಲಾ ಸಮವಸ್ತ್ರಕ್ಕೂ ಎಲ್ಲಿಯ ಹೋಲಿಕೆ, ಯಾಕೆ ಹೋಲಿಕೆ?
ಸಿದ್ದರಾಮಯ್ಯರ ದಿಢೀರ್​ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಂಡಂತಿದ್ದಾರೆ. ವಿಷಯದ ಬಗ್ಗೆ ಅಂತರ ಕಾಯ್ದಯಕೊಂಡ ಕೆಲ ಶಾಸಕರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಕಾರ ಸೂಚಿಸಿದ್ದಾರೆ. ಈ ವಿಚಾರ ಸದ್ಯಕ್ಕೆ ಅನಗತ್ಯವಾಗಿತ್ತಾ? ಬೇರೆ ಉದಾಹರಣೆ ನೀಡಬಹುದಿತ್ತಲ್ಲವಾ ಎಂಬ ನಿಲುವು ಕೆಲ ನಾಯಕರದ್ದಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಕೆಲ ಕೈ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ಜೈನ್ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳುವುದಿಲ್ಲವೇ? ಸ್ವಾಮೀಜಿ ಹಾಕಿಕೊಳ್ಳುವುದಿಲ್ಲವೇ, ನಿಮಗೇನು ತೊಂದರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಇದು ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ‘ಸಿದ್ದರಾಮಯ್ಯ ಮಠಾಧೀಶರ ಸಮೂಹವನ್ನೇ ಅವಮಾನಿಸಿದ್ದಾರೆ. ಅವರು ಕೂಡಲೇ ಮಠಾಧೀಶರ ಕ್ಷಮೆ ಕೋರಬೇಕು. ಹಿಂದೂ ಧರ್ಮ, ಸಂಸ್ಕೃತಿಯನ್ನು ಹೀಯಾಳಿಸುವುದು ಸಿದ್ದರಾಮಯ್ಯ ಅವರ ಚಟ’ ಎಂದು ರಾಜ್ಯಾದ್ಯಂತ ಸ್ವಾಮೀಜಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ ಅಂತ ಕರೆಯಲಾ? ಇಲ್ಲಾ ಮಾನ ಇಲ್ಲದ ಸಿದ್ದರಾಮಯ್ಯನವರೇ ಅಂತ ಕರೀಲಾ? ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಕಿಡಿಕಾರಿದ್ದಾರೆ. ಮುಸಲ್ಮಾನರ ಟೋಪಿ ಕಾಣಲ್ವಾ‌? ಮುಸ್ಲಿಮರ ಯಾವ ಚಿಂತನೆಗಳು, ಕೃತ್ಯಗಳು ನಿಮಗೆ ಕಾಣಲ್ವಾ? ಎಂದು ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಶ್ರೀ ಆಕ್ರೋಶ ಹೊರ ಹಾಕಿದ್ದಾರೆ.

ಸ್ವಾಮೀಜಿಗಳನ್ನ ಎಳೆದು ತರೋ ಅವಶ್ಯಕತೆ ಇರಲಿಲ್ಲ -ಹೆಚ್​ ಡಿ ಕೆ
ಹಿಜಾಬ್ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆಗೆ ನಾನು ಮಹತ್ವ ನೀಡಲ್ಲ. ಅಸೆಂಬ್ಲಿಯಲ್ಲಿ ಹಿಜಾಬ್ ವಿಚಾರವಾಗಿ ಅವರು ಮಾತನಾಡಲಿಲ್ಲ. ಅವರು ಕನ್ನಡ ಪಂಡಿತರು. ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳನ್ನ ಎಳೆದು ತರೋ ಅವಶ್ಯಕತೆ ಇರಲಿಲ್ಲ ಎಂದು ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಹಿಂದೆ ವೀರಶೈವ-ಲಿಂಗಾಯತ ಇಬ್ಭಾಗ ಮಾಡಲು ಹೋಗಿಯೇ ಕಾಂಗ್ರೆಸ್ ಗೆ ಹಿನ್ನಡೆ ಆಗಿತ್ತು -ರಂಭಾಪುರಿ ಶ್ರೀ ಗರಂ:
ಒಬ್ಬ ಪ್ರಬುದ್ಧ ರಾಜಕಾರಣಿ ಆಗಿ ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ. ಇದರಿಂದ ಅವರ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಈ ಹಿಂದೆ ವೀರಶೈವ ಲಿಂಗಾಯತ ಇಬ್ಭಾಗ ಮಾಡಲು ಹೋಗಿಯೇ ಕಾಂಗ್ರೆಸ್ ಗೆ ಕಳೆದ ಚುನಾವಣೆಯಲ್ಲಿ ಹಿನ್ನಡೆ ಆಗಿತ್ತು. ಈಗ ನೀಡಿದ ಹೇಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಕಾರಣ ಇನ್ನೊಂದು ವರ್ಷದಲ್ಲಿ‌ಮತ್ತೆ ವಿಧಾನಸಭೆ ಚುನಾವಣೆ ಬರಲಿದೆ. ತಾವು ನೀಡಿದ ಹೇಳಿಕೆ ಬಗ್ಗೆ ಸಿದ್ಧರಾಮಯ್ಯ ಅವರು ಚಿಂತನೆ ಮಾಡಲಿ. ಸ್ವಾಮೀಜಿಗಳ ಬಟ್ಟೆಗೆ ಹಿಜಾಬ್ ಹೊಲಿಕೆ ಮಾಡುವುದು ಸೂಕ್ತವಲ್ಲ. ಈಗಾಗಲೇ ಕೋರ್ಟ ಹಿಜಾಬ್ ಬಗ್ಗೆ ಒಂದು ನಿರ್ಧಾರ ಪ್ರಕಟಿಸಿದೆ. ಅದರ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ರಂಭಾಪುರಿ ಶ್ರೀ ಹೇಳಿದ್ದಾರೆ.

ಇದನ್ನೂ ಓದಿ:
ಮುಸಲ್ಮಾನರ ಟೋಪಿ ಕಾಣಲ್ವಾ‌? ಮುಸ್ಲಿಮರ ಯಾವ ಚಿಂತನೆಗಳು, ಕೃತ್ಯಗಳು ನಿಮಗೆ ಕಾಣಲ್ವಾ? ಸಿದ್ದರಾಮಯ್ಯಗೆ ಹಾಲವೀರಪ್ಪಜ್ಜ ಸ್ವಾಮೀಜಿ ನೇರ ಪ್ರಶ್ನೆ

ಇದನ್ನೂ ಓದಿ:
Yogi Adityanath Oath Taking ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ ; ಉಪ ಮುಖ್ಯಮಂತ್ರಿಯಾಗಿ ಕೇಶವ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಪ್ರಮಾಣ ವಚನ

Published On - 5:04 pm, Fri, 25 March 22