AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸಲ್ಮಾನರ ಟೋಪಿ ಕಾಣಲ್ವಾ‌? ಮುಸ್ಲಿಮರ ಯಾವ ಚಿಂತನೆಗಳು, ಕೃತ್ಯಗಳು ನಿಮಗೆ ಕಾಣಲ್ವಾ? ಸಿದ್ದರಾಮಯ್ಯಗೆ ಹಾಲವೀರಪ್ಪಜ್ಜ ಸ್ವಾಮೀಜಿ ನೇರ ಪ್ರಶ್ನೆ

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಧಿಕ್ಕಾರವಿದೆ ಎಂದು ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜಶ್ರೀ(Halaveerappajja Swamiji)  ಆಕ್ರೋಶ ಹೊರ ಹಾಕಿದ್ದಾರೆ. ಹಿಂದೂ ಧರ್ಮ, ಸಂತರನ್ನು ಗುರಿಮಾಡುವುದನ್ನು ನೋಡಿದರೆ. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ. ಮಾಜಿ ಸಿಎಂ ಏನು ಸಂದೇಶ ಕೊಡುತ್ತಿದ್ದಾರೆಂಬ ಅರಿವಿರಬೇಕು. ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳನ್ನು ನಿಂದಿಸುವುದು ಏಕೆ?.

ಮುಸಲ್ಮಾನರ ಟೋಪಿ ಕಾಣಲ್ವಾ‌? ಮುಸ್ಲಿಮರ ಯಾವ ಚಿಂತನೆಗಳು, ಕೃತ್ಯಗಳು ನಿಮಗೆ ಕಾಣಲ್ವಾ? ಸಿದ್ದರಾಮಯ್ಯಗೆ ಹಾಲವೀರಪ್ಪಜ್ಜ ಸ್ವಾಮೀಜಿ ನೇರ ಪ್ರಶ್ನೆ
ಮುಸಲ್ಮಾನರ ಟೋಪಿ ಕಾಣಲ್ವಾ‌? ಮುಸ್ಲಿಮರ ಯಾವ ಚಿಂತನೆಗಳು. ಕೃತ್ಯಗಳು ನಿಮಗೆ ಕಾಣಲ್ವಾ? ಸಿದ್ದರಾಮಯ್ಯಗೆ ಹಾಲವೀರಪ್ಪಜ್ಜ ಸ್ವಾಮೀಜಿ ನೇರ ಪ್ರಶ್ನೆ
TV9 Web
| Edited By: |

Updated on:Mar 25, 2022 | 4:33 PM

Share

ವಿಜಯನಗರ: ಸ್ವಾಮೀಜಿಗಳ ತಲೆ ಮೇಲಿನ ಬಟ್ಟೆ ಬಗ್ಗೆ ಸಿದ್ದರಾಮಯ್ಯ(Siddaramaiah)  ಹೇಳಿಕೆ ನೀಡುತ್ತಿದ್ದಂತೆ ಖಾವಿಧಾರಿಗಳು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಹಿಂದೂಪರ ಸಂಘಟನೆಗಳು ಸಿಡಿದೆದ್ದಿವೆ. ಸಿದ್ದರಾಮಯ್ಯ ಕ್ಷಮೆ ಕೇಳ್ಬೇಕು ಅನ್ನೋ ಕೂಗು ಜೋರಾಗಿದೆ. ಸ್ವಾಮೀಜಿಗಳ ಶಿರವಸ್ತ್ರ ಪ್ರಶ್ನಿಸಿದ ಸಿದ್ದರಾಮಯ್ಯ ತಣ್ಣಗಾಗಿದ್ದ ಹಿಜಾಬ್‌ ಬೆಂಕಿಗೆ ತುಪ್ಪ ಸುರಿದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಧಿಕ್ಕಾರವಿದೆ ಎಂದು ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜಶ್ರೀ(Halaveerappajja Swamiji)  ಆಕ್ರೋಶ ಹೊರ ಹಾಕಿದ್ದಾರೆ.

ಹಿಂದೂ ಧರ್ಮ, ಸಂತರನ್ನು ಗುರಿಮಾಡುವುದನ್ನು ನೋಡಿದರೆ. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ. ಮಾಜಿ ಸಿಎಂ ಏನು ಸಂದೇಶ ಕೊಡುತ್ತಿದ್ದಾರೆಂಬ ಅರಿವಿರಬೇಕು. ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳನ್ನು ನಿಂದಿಸುವುದು ಏಕೆ?. ಸ್ವಾಮೀಜಿಗಳು ಶಾಲೆಗೆ ಹೋಗುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ವರ್ಣ ಭೇದ ಇರಬಾರದೆಂದು ಶಾಲೆಗಳಲ್ಲಿ ಸಮವಸ್ತ್ರದ ಜತೆ ಹೈಕೋರ್ಟ್ ಆದೇಶ ಮಾಡಿದೆ. ಕೋರ್ಟ್ ಆದೇಶ ಪಾಲಿಸುವಂತೆ ಸಿದ್ದರಾಮಯ್ಯ ಹೇಳಬೇಕಿತ್ತು. ನಮಗೆ ಬುದ್ಧಿ ಹೇಳುವ ನೀವು ಅವರಿಗೂ ಬುದ್ಧಿವಾದ ಹೇಳಿ. ಮುಸ್ಲಿಮರ ಟೋಪಿ, ಚಿಂತನೆ, ಇತರೆ ಕೃತ್ಯಗಳು ನಿಮಗೆ ಕಾಣಲ್ವಾ? ಇನ್ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜಶ್ರೀ ಕಿಡಿಕಾರಿದ್ದಾರೆ.

ಹಿಜಾಬ್ ವಿವಾದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಮುಸ್ಲಿಂ ಹೆಣ್ಣು ಮಕ್ಕಳು ದುಪಟ್ಟಾ ಹಾಕಿಕೊಂಡ್ರೇ ತಪ್ಪೇನು ಅಂತಾ ಪ್ರಶ್ನಿಸೋ ಸಂದರ್ಭದಲ್ಲಿ, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಲ್ವಾ? ಹಿಂದೂ ಮಹಿಳೆಯರು ತಲೆ ಮೇಲೆ ಬಟ್ಟೆ ಹಾಕಿಲ್ವಾ ಅಂತಾ ಪ್ರಶ್ನೆ ಎತ್ತಿದ್ದಾರೆ. ಇದೇ ಪ್ರಶ್ನೆ ಈಗ ಮಠಾಧೀಶರು, ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರನ್ನ ಬಡಿದೆಬ್ಬಿಸಿದೆ. ಸಿದ್ದರಾಮಯ್ಯ ಮಾತಿಗೆ ಬಿಜೆಪಿ ನಾಯಕರಂತೂ ಕೆಂಡ ಉಗುಳಿದ್ದಾರೆ. ಸಿದ್ದರಾಮಯ್ಯ ಕ್ಷಮೆಯಾಚಿಸ್ಬೇಕು ಅಂತಾ ಸಚಿವರಾದ ಆರ್‌.ಅಶೋಕ್ ಮತ್ತು ಬಿ.ಸಿ ನಾಗೇಶ್ ಆಗ್ರಹಿಸಿದ್ರೆ, ಸಿದ್ದರಾಮಯ್ಯ ಮಾಡಿರುವ ಪಾಪದ ಫಲ ಅನುಭವಿಸ್ತಿದ್ದಾರೆ ಅಂತಾ ಆರಗ ಜ್ಞಾನೇಂದ್ರ ಕೆಂಡಾಮಂಡಲರಾಗಿದ್ದಾರೆ.

ಇನ್ನೂ ಹಿಜಾಬ್‌ಗೂ ಸ್ವಾಮೀಜಿಗಳ ಶಿರವಸ್ತ್ರಕ್ಕೂ ಹೋಲಿಕೆ ಮಾಡಿದ್ದು ಸರಿಯಲ್ಲ ಅಂತಾ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ಹೀಗೆ ಮಾತನಾಡ್ತಾರೆ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ವಿರುದ್ದ ಸಿಡಿದೆದ್ದ ಮಠಾಧೀಶರು ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಲ್ವಾ ಅಂತಾ ಪ್ರಶ್ನಿಸಿರೋ ಸಿದ್ದು ವಿರುದ್ಧ ಸ್ವಾಮೀಜಿಗಳು ಸಿಡಿದೆದ್ದಿದಾರೆ. ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀಗಳು ವಾಗ್ದಾಳಿ ನಡೆಸಿದ್ದು, ಓಲೈಕೆ ರಾಜಕಾರಣದ ನಿಸ್ಸೀಮರಾಗಿರೋ ಸಿದ್ದರಾಮಯ್ಯಗೆ ಅವರ ಸ್ಟ್ಯಾಂಡ್ ಯಾವುದೇ ಅನ್ನೋದೇ ಅವರಿಗೆ ಗೊತ್ತಿಲ್ಲ ಎಂದಿದ್ದಾರೆ.

‘ಸಿದ್ದು ಹೇಳಿಕೆ ಮಾನ ಮರ್ಯಾದೆ ಇಲ್ಲದ ಹೇಳಿಕೆ’ ಸಿದ್ದು ವಿರುದ್ದ ವಾಕ್ಪ್ರಾಹರ ನಡೆಸಿರೋ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಈ ರೀತಿಯ ಹೇಳಿಕೆಗಳಿಂದ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ನಿಮ್ಮ ಹೇಳಿಕೆ ಮಾನ ಮರ್ಯಾದೆ ಇಲ್ಲದ ಹೇಳಿಕೆ ಅಂತಾ ಗುಡುಗಿದ್ದಾರೆ.

ಇದನ್ನೂ ಓದಿ: ‘ತಲೆ ಉಪಯೋಗಿಸಿ ಸ್ವಂತವಾಗಿ ಏನನ್ನಾದರೂ ಮಾಡಿ’; ಕರಣ್ ಜೋಹರ್​ಗೆ ನೆಟ್ಟಿಗರ ಟೀಕೆ

ಮಾನ್ಯ ಸಿದ್ದರಾಮಯ್ಯನವರೇ ಅಂತ ಕರೆಯಲಾ? ಇಲ್ಲಾ ಮಾನ ಇಲ್ಲದ ಸಿದ್ದರಾಮಯ್ಯನವರೇ ಅಂತ ಕರೀಲಾ? ಕಾಳಿ ಸ್ವಾಮೀಜಿ ಆಕ್ರೋಶ

Published On - 4:17 pm, Fri, 25 March 22