ಮಾನ್ಯ ಸಿದ್ದರಾಮಯ್ಯನವರೇ ಅಂತ ಕರೆಯಲಾ? ಇಲ್ಲಾ ಮಾನ ಇಲ್ಲದ ಸಿದ್ದರಾಮಯ್ಯನವರೇ ಅಂತ ಕರೀಲಾ? ಕಾಳಿ ಸ್ವಾಮೀಜಿ ಆಕ್ರೋಶ

ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕೋದನ್ನ ನೀವು ಯಾಕೆ ಪ್ರಶ್ನೆ ಮಾಡಲ್ಲ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಕಾಳಿ ಸ್ವಾಮೀಜಿ ಗರಂ ಆಗಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪ್ಪಟ್ಟ ಹಾಕಿಕೊಂಡರೆ ತಪ್ಪೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ ಅಂತ ಕರೆಯಲಾ? ಇಲ್ಲಾ ಮಾನ ಇಲ್ಲದ ಸಿದ್ದರಾಮಯ್ಯನವರೇ ಅಂತ ಕರೀಲಾ? ಕಾಳಿ ಸ್ವಾಮೀಜಿ ಆಕ್ರೋಶ
ಮಾನ್ಯ ಸಿದ್ದರಾಮಯ್ಯನವರೇ ಅಂತ ಕರೆಯಲಾ? ಇಲ್ಲಾ ಮಾನ ಇಲ್ಲದ ಸಿದ್ದರಾಮಯ್ಯನವರೇ ಅಂತ ಕರೀಲಾ? ಕಾಳಿ ಸ್ವಾಮೀಜಿ ಆಕ್ರೋಶ
Follow us
TV9 Web
| Updated By: ಆಯೇಷಾ ಬಾನು

Updated on: Mar 25, 2022 | 3:21 PM

ಚಿಕ್ಕಮಗಳೂರು: ಮಾನ್ಯ ಸಿದ್ದರಾಮಯ್ಯನವರೇ(Siddaramaiah) ಅಂತ ಕರೀಲಾ? ಇಲ್ಲಾ ಮಾನ ಇಲ್ಲದ ಸಿದ್ದರಾಮಯ್ಯನವರೇ ಅಂತ ಕರೀಲಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಳಿ ಸ್ವಾಮೀಜಿ(Kali Swamiji) ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಉಡುಪಿಯಲ್ಲಿ ಗೋವಿಂದ ಸರಸ್ವತಿ ಸ್ವಾಮೀಜಿ(Govinda Saraswati Swamiji) ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕೋದನ್ನ ನೀವು ಯಾಕೆ ಪ್ರಶ್ನೆ ಮಾಡಲ್ಲ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಕಾಳಿ ಸ್ವಾಮೀಜಿ ಗರಂ ಆಗಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪ್ಪಟ್ಟ ಹಾಕಿಕೊಂಡರೆ ತಪ್ಪೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಬಾಯಿಗೆ ಬಂದ ಹೇಳಿಕೆಗಳನ್ನು ಕೊಟ್ಟು ನಿಮ್ಮನ್ನು ನೀವು ಹಾಳುಮಾಡಿಕೊಳ್ಳುತ್ತಿದ್ದೀರಾ. ನಾವು ಪೇಟ ಹಾಕೊಂಡು ಶಾಲೆಗೆ ಹೋಗಿದ್ದೀವಾ? ಮನೆಯಲ್ಲೂ ದುಪ್ಪಟ ಹಾಕಬಾರದು ಅಂತ ನ್ಯಾಯಾಲಯ ಏನಾದ್ರೂ ಹೇಳಿದ್ಯಾ? ನೋಡಿದ್ರೆ ನಿಮ್ಮನ್ನ ನೀವು ಓಕೆ ಇಲ್ಲ ಅಂತ ಘೋಷಣೆ ಮಾಡಿಕೊಳ್ಳುತ್ತೀರಿ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ. ಹಿಂದೂ ಧರ್ಮದ ಯತಿಗಳನ್ನು ಈ ವಿಚಾರಕ್ಕೆ ಯಾಕೆ ಎಳೆದುಕೊಂಡಿರಿ. ಟೋಪಿ ಹಾಕಿಕೊಂಡು ಮಸೀದಿಗೆ ಹೋಗಿ ನಮಾಜ್ ಮಾಡುತ್ತೀರಿ. ಆದರೆ ಖಾವಿ ಪೇಟ ನಿಮ್ಮ ತಲೆಗೆ ತೋಡಿಸೋಕೆ ಬಂದರೆ ಕಿತ್ತು ಬಿಸಾಕ್ತೀರಿ. ಯತಿಗಳ ಮೇಲೆ ಇರುವ ದ್ವೇಷ ಕೇಸರಿ ಪೇಟವನ್ನು ಬಿಸಾಕುವ ಹಾಗೆ ಮಾಡಿದೆ. ಇನ್ಮುಂದೆ ಹಿಂದೂ ಧರ್ಮದ ಯತಿಗಳ ಸುದ್ದಿಗೆ ಬಂದ್ರೆ ಕಥೆ ಬೇರೆ ಆಗುತ್ತೆ ಎಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಎಂಬ ಪದ ಉಚ್ಚರಣೆ ಮಾಡಲಿಕ್ಕೂ ನಿಮಗೆ ಅಧಿಕಾರ ಇಲ್ಲ ಇನ್ನು ಉಡುಪಿಯಲ್ಲಿ ಗೋವಿಂದ ಸರಸ್ವತಿ ಸ್ವಾಮೀಜಿ ಮಾತನಾಡಿದ್ದು, ಸಾವಿರ ಕೋಟಿ ಜನ್ಮ ಎತ್ತಿದರೂ ಹಿಂದೂ ಸಂತರ ಬಗ್ಗೆ ಮಾತನಾಡಲು ನೀವು ಲಾಯಕ್ಕಾಗೂದಿಲ್ಲ. ಸುಮ್ಮನೆ ಮನೆಯಲ್ಲಿ ಇದ್ದುಕೊಂಡು ರಾಮನಾಮ ಜಪ ಮಾಡಿಕೊಳ್ಳಿ. ನಿಮ್ಮ ಜನ್ಮ ಉದ್ದಾರ ಆಗುತ್ತದೆ. ಹಿಂದೂ ಧರ್ಮದ ಮೇಲೆ ಕೈ ಇಡುತ್ತೇನೆ. ಹಿಂದೂ ಧರ್ಮವನ್ನು ಪ್ರಶ್ನೆ ಮಾಡುತ್ತೇನೆ ಎಂದು ಮುಂದಾದರೆ. ಹಿಂದೆ ರಾಕ್ಷಸರಿಗೆ ಆದ ಗತಿ ನಿಮಗೂ ಆಗುತ್ತದೆ. ನಿಮಗೆ ಸ್ವಲ್ಪವೂ ಬುದ್ಧಿ ಜ್ಞಾನ ಇಲ್ಲವೇ. ಹಿಂದೂ ಸನ್ಯಾಸಿಗಳಲ್ಲ ಹಿಂದೂ ಧರ್ಮೀಯರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಹಿಂದೂ ಎಂಬ ಪದ ಉಚ್ಚರಣೆ ಮಾಡಲಿಕ್ಕೂ ನಿಮಗೆ ಅಧಿಕಾರ ಇಲ್ಲ. ಇಂಥ ಜನಗಳು ಬಂದು ನಾಯಕರಾದರೆ ಅಧರ್ಮವಾಗಿ ಹೋಗುತ್ತದೆ. ಇಂತಹ ನಾಯಕರಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕು. ಸಿದ್ದರಾಮಯ್ಯ ಒಬ್ಬರಿಗೆ ಎಚ್ಚರಿಕೆಯಲ್ಲ ಎಲ್ಲಾ ನಾಯಕರಿಗೆ ಇದೆ ಎಚ್ಚರಿಕೆ. ರಾವಣಾಸುರನಿಗೆ ಹಿರಣ್ಯಾಕ್ಷನಿಗೆ ಯಾವ ಗತಿಯಾಯಿತೋ ಅವರುಗಳಿಗೂ ಅದೇ ಗತಿಯಾಗುತ್ತದೆ ಎಂದು ಕಿಷ್ಕಿಂದದ ಶ್ರೀಗೋವಿಂದ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಮಾತನಾಡುವುದು ಹಿಂದೂ ಧರ್ಮ ವಿರೋಧ. ಇಂಥ ಹೇಳಿಕೆಗಳನ್ನೆಲ್ಲಾ ಅವರು ಕೊಡಬಾರದು. ಸಿದ್ದರಾಮಯ್ಯ ಹೆಸರಿನಲ್ಲಿ ರಾಮನ ಹೆಸರು ಇದೆ. ಹಿಂದೂ ಧರ್ಮ ಹಿಂದೂ ದೇವರ ವಿರುದ್ಧ ಅವರು ಕೆಲಸ ಮಾಡುತ್ತಿರುವುದು ತಪ್ಪು. ಸಿದ್ದರಾಮಯ್ಯನವರ ವರ್ತನೆ ಸರಿಯಲ್ಲ. ತಲೆಯ ಮೇಲಿನ ಬಟ್ಟೆ ತೆಗೆಯಲು ಸನ್ಯಾಸಿಗಳು ಕಾಲೇಜಿಗೆ ಹೋಗುತ್ತಿದ್ದೇವಾ? ಹಿಜಬ್ ವಿಚಾರಕ್ಕೂ ಸನ್ಯಾಸಿಗಳ ವಿಚಾರಕ್ಕೂ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಕ್ಷಮೆ ಕೇಳಬೇಕು -ಪ್ರಮೋದ್ ಮುತಾಲಿಕ್ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಕ್ಷಮೆ ‌ಕೇಳುವಂತೆ ಧಾರವಾಡದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಹಿಜಾಬ್ ಬಗ್ಗೆ ನ್ಯಾಯಾಲಯದ ತೀರ್ಪು ಆಗಿದೆ. ಅದರ ಬಗ್ಗೆ ಮಾತನಾಡುವಾಗ ವಿಚಾರ ಮಾಡಬೇಕು. ಇದು ಅವಮಾನಕರ ಹೇಳಿಕೆ. ಸಂತರ ಪರಂಪರೆ ಪ್ರಶ್ನೆ ಮಾಡಿದ್ದು ಅಪರಾಧ. ಇದು ಕೀಳು ಮಟ್ಟದ ಹೇಳಿಕೆ. ಪೇಟಾವನ್ನು ಹಿಜಾಬ್ ಗೆ ಹೋಲಿಸುವಂಥದ್ದು ಸರಿಯಲ್ಲ. ಮಾತನಾಡುವಾಗ ಕಾಮನ್‌ಸೆನ್ಸ್ ಬೇಕು. ಮುಖ್ಯಮಂತ್ರಿಯಾಗಿದ್ದವರು ನೀವು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು‌ ನೀವು. ಇದು ಹಿಂದೂ ಸಮಾಜ ಅಪಮಾನ ಮಾಡುವಂಥದ್ದು. ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ವಕೀಲರೂ ಆದವರು ನೀವು. ಕೋರ್ಟ್ ಹಿಜಾಬ್ ಬ್ಯಾನ್ ಮಾಡಿಲ್ಲ. ಕ್ಲಾಸ್ ರೂಂನಲ್ಲಿ ಹಾಕಿಕೊಳ್ಳಲು ಅವಕಾಶ ನೀಡಿಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಅಂತ್ಯ ಬಂದಿದೆ. ಹಿಂದೂ ಸಮಾಜ ನಿಮ್ಮನ್ನು ಮೂಲೆಗುಂಪು ಮಾಡುತ್ತೆ. ನಿಮಗೆ ಹಿಂದೂಗಳು ಮತ ಹಾಕುವುದಿಲ್ಲ. ಮುಸ್ಲಿಂ ರೇ ಕೋರ್ಟ್ ಗೆ ಹೋಗಿದ್ದು. ಅವರಿಗೆ‌ ನ್ಯಾಯಾಲಯ ಸ್ಪಷ್ಟನೆ ಕೊಟ್ಟಿದೆ. ಮಠದ ಪರಂಪರೆಗೆ ಅವಮಾನ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ರು.

ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಧಿಕ್ಕಾರ ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಧಿಕ್ಕಾರ ಇದೆ ಎಂದು ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮ ಹಾಗೂ ಹಿಂದೂ ಧರ್ಮದ ಸಂತರನ್ನ ಟಾರ್ಗೆಟ್ ಮಾಡೋದು ನೋಡಿದ್ರೆ ಅನುಮಾನ ಮೂಡುತ್ತೆ. ಮಾಜಿ ಮುಖ್ಯಮಂತ್ರಿಗಳಾದವರು ಎನೋ ಸಂದೇಶ ಕೊಡುತ್ತಿದ್ದಾರೆ ಅನ್ನೋ ಅರಿವು ಅವರಿಗೆ ಇರಬೇಕು. ಹಿಜಾಬ್ ವಿಚಾರ ಬಂದಾಗ ಹಿಂದೂ ಧರ್ಮ ಹಾಗೂ ಹಿಂದೂ ಆರ್ಚಾರನ್ನ ನಿಂದನೆ ಮಾಡೋದು ಯಾಕೆ. ಸ್ವಾಮೀಜಿಗಳು ಶಾಲೆಗೆ ಹೋಗಲ್ಲ. ಶಾಲೆ ಕಾಲೇಜುಗಳಲ್ಲಿ ಅನ್ಯಧರ್ಮದವರ ಮಧ್ಯೆ ವರ್ಣ ಬೇಧ ಇರಬಾರದೆಂದು ನ್ಯಾಯಾಲಯ‌ ಆದೇಶ ಮಾಡಿದೆ. ನ್ಯಾಯಾಲಯದ ಆದೇಶ ಪರಿಪಾಲನೆ ಮಾಡಿ ಅಂತಾ ಹೇಳಬೇಕಾದವರು ಸಂತರನ್ನ ಟಾರ್ಗೆಟ್ ಮಾಡುವುದು ಎಷ್ಟರಮಟ್ಟಿಗೆ ಸರಿ. ಸಿದ್ದರಾಮಯ್ಯ ಹೇಳಿಕೆಯನ್ನ ವಿರೋಧಿಸುತ್ತೇವೆ. ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಧಿಕ್ಕಾರ ಇದೆ. ನಮಗೆ ಬುದ್ದಿ ಹೇಳುವ ನೀವೂ ಅವರಿಗೂ ಬುದ್ದಿ ಹೇಳಿ. ಮುಸ್ಲಿಮರ ಟೋಪಿ ಕಾಣಲ್ವಾ‌‌? ಮುಸ್ಲಿಮರ ಯಾವ ಚಿಂತನೆಗಳು, ಕೃತ್ಯಗಳು ನಿಮಗೆ ಕಾಣಲ್ವಾ? ಇನ್ನುಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿಗೆ ಕಸಿವಿಸಿ: ಉಕ್ರೇನ್​ ಯುದ್ಧದ ಹಿನ್ನೆಲೆ ಇಂಗ್ಲೆಂಡ್ ಪರ ರಿಷಿ ತೋರಿದ ಬದ್ಧತೆ ಏನು?

ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಷನ್​​ಗಳನ್ನು ವಿಲೀನಗೊಳಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್