AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಾಲ ನೀಡುವ ಹೆಸರಲ್ಲಿ‌ ಗೋಲ್ಮಾಲ್; ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡ ಜನ

ಒಬ್ಬೊಬ್ಬ ಫಲಾನುಭವಿಗಳ ಹೆಸರಲ್ಲಿ 5 ರಿಂದ 10 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ಫಲಾನುಭವಿಗಳ ಗಮನಕ್ಕೆ ತಾರದೇ ಅವರದ್ದೇ‌ ಖಾತೆಯಿಂದ ಹಣ ತೆಗೆದುಕೊಂಡು ಏಜೆಂಟರು ಪರಾರಿಯಾಗಿದ್ದಾರೆ. 2 ಕೋಟಿ 50 ಲಕ್ಷ ರೂಪಾಯಿ ಗೋಲ್ಮಾಲ್ ಮಾಡಲಾಗಿದೆ.

ವಿಜಯಪುರದಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಾಲ ನೀಡುವ ಹೆಸರಲ್ಲಿ‌ ಗೋಲ್ಮಾಲ್; ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡ ಜನ
ವಿಜಯಪುರದಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಾಲ ನೀಡುವ ಹೆಸರಲ್ಲಿ‌ ಮಹಾ ಗೋಲ್ಮಾಲ್; ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ಜನರು
TV9 Web
| Edited By: |

Updated on:Mar 25, 2022 | 7:24 PM

Share

ವಿಜಯಪುರ: ಭೋವಿ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಾಲ ನೀಡುವ ಹೆಸರಲ್ಲಿ‌ ಮಹಾ ಗೋಲ್ಮಾಲ್ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಸಾಲ ಕೊಡಿಸುವ ವಿಚಾರದಲ್ಲಿ ಕೋಟಿ ಕೋಟಿ ಪಂಗನಾಮ ಹಾಕಲಾಗಿದೆ. ಬಡ ಫಲಾನುಭವಿಗಳಿಗೆ ಲೋನ್ ಹೆಸರಲ್ಲಿ ಏಜೆಂಟರು ಉಂಡೆನಾಮ ಹಾಕಿದ್ದಾರೆ. ಏಜೆಂಟರು, ನಿಗಮದ ಅಧಿಕಾರಿಗಳು, ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಈ ಮಹಾ ಮೋಸದಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ.

ಅವರೆಲ್ಲಾ ಬಡವರು. ನಿತ್ಯ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಏನೋ ಸರ್ಕಾರದಿಂದ ಸಹಾಯ ಧನ ಸಹಿತ ಸಾಲ ಸಿಗುತ್ತೇ ಅಂತ ನಂಬಿ ಇದೀಗ ಮಹಾ ವಂಚನೆಗೊಳಗಾಗಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಾಲದ ಹಣ ಮಂಜೂರಾಗಿ ನಗದಾಗಿದ್ದನ್ನಾ ಎಗರಿಸಿರೋದನ್ನಾ ತಿಳಿದು ದಂಗಾಗಿ ಹೋಗಿದ್ದಾರೆ. ಫಲಾನುಭವಿಗಳ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಏಜೆಂಟರು ಪಾಲಾಗಿದೆ.‌ ಕೂಲಿನಾಲಿ ಮಾಡಿ ಜೀವನ ‌ಸಾಗಿಸುತ್ತಿದ್ದೇನೆ ಈಗಾ ನನ್ನ ಮೇಲಿನ 5 ಲಕ್ಷ ಸಾಲ ಕಟ್ಟೋದು ಹೇಗೆ ಅಂತ ವಿಧವೆ ಮಹಿಳೆ ಕಣ್ಣೀರು ಹಾಕಿದ್ದಾರೆ. ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ ಅನ್ನೋ ಹಾಗೆ ಆಗಿದೆ ಇವರ ಪರಿಸ್ಥಿತಿ. ವಿಜಯಪುರ ತಾಲೂಕಿನ ಮದಭಾವಿ ಗ್ರಾಮದ ಭೋವಿ ಸಮಾಜದ 40 ಫಲಾನುಭವಿಗಳು ಮಹಾವಂಚನೆಗೊಳಗಾಗಿದ್ದಾರೆ. ಭೋವಿ ಅಭಿವೃದ್ಧಿ ನಿಗಮದಿಂದ ಉದ್ಯಮಶೀಲತೆ ಯೋಜನೆ ಅಡಿ ಬಡವರ ಆರ್ಥಿಕ ಸ್ವಾವಲಂಬನೆ ಆಗಲಿ ಅಂತಾ ಸ್ವ ಉದ್ಯೋಗಕ್ಕೆ ಸರ್ಕಾರ ಬ್ಯಾಂಕ್ ಮೂಲಕ ಸಬ್ಸಿಡಿ ಲೋನ್ ಕೊಡುತ್ತದೆ.

ಇದನ್ನೆ ಬಂಡವಾಳ ಮಾಡಿಕೊಂಡಿರೋ ಏಜೆಂಟರು, ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಫಲಾನುಭವಿಗಳಿಗೆ ಪಂಗನಾಮ ಹಾಕಿರೋದು ಬೆಳಕಿಗೆ ಬಂದಿದೆ. ಮೊದಲು ಮದಭಾವಿ ಗ್ರಾಮದ 40 ಫಲಾನುಭವಿಗಳಿಗೆ ಕಾಯಿಪಲ್ಲೆ‌ವ್ಯಾಪಾರ ಹಾಗೂ‌ ಮಾರಾಟ, ಕಿರಾಣಿ ಶಾಪ್ ಹಾಕಲು ಹಾಗೂ ಇತರೆ ಸ್ವ ಉದ್ಯೋಗಕ್ಕೆ ತಲಾ 50 ಸಾವಿರ ಸಬ್ಸಿಡಿ ಸಾಲ ಕೊಡುತ್ತೇವೆ ಅಂತ ಹೇಳಿ ಏಜೆಂಟರಾದ, ಪರಶುರಾಮ ಹೊಸಪೇಟೆ, ಪುಂಡಲೀಕ ಮುರಾಳ,ಗುಜ್ಜಲಕೇರಿ,ಕಾಂತು ಒಡೆಯರ ಎಂದು ಜನರನ್ನು ನಂಬಿಸಿದ್ದಾರೆ. ಫಲಾನುಭವಿಗಳಿಂದ ಚೆಕ್ ಗೆ ಮೊದಲೇ ಸಹಿ ಮಾಡಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ,ಮಾರ್ಚ್ ತಿಂಗಳಲ್ಲಿ ಮದಭಾವಿ ಗ್ರಾಮದ 30 ಜನ ಫಲಾನುಭವಿಗಳಿಗೆ 5 ಲಕ್ಷ , ಹಾಗೂ 10 ಫಲಾನುಭವಿಗಳಿಗೆ 10 ಲಕ್ಷ ಹಣ ಖಾತೆಗೆ ಜಮಾ ಆಗಿದೆ. ತಕ್ಷವೇ ಫಲಾನುಭವಿಗಳಿಂದ ಪಡೆದಿದ್ದ ಚೆಕ್ ಮೂಲಕ ಅವರ ಅಕೌಂಟ್ ನಲ್ಲಿದ್ದ ಎಲ್ಲಾ ಹಣವನ್ನಾ ಚೆಕ್ ಮೂಲಕ ಒಂದೇ ದಿನ ಡ್ರಾ ಮಾಡಿಕೊಂಡಿದ್ದಾರೆ. ಇದೀಗ ಬರೋಬ್ಬರಿ 2 ಕೋಟಿ 50 ಲಕ್ಷ ರೂಪಾಯಿಗಳನ್ನು ನಾಲ್ವರು ಏಜೆಂಟರು ಲಪಟಾಯಿಸಿದ್ದಾರೆ. ಇದಕ್ಕೆ ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಐಡಿಬಿಐ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರೋ ವಾಸನೆ ಬಂದಿದೆ. ಸರ್ಕಾರದಿಂದ ಮಂಜೂರಾದ ಸಬ್ಸಿಡಿ ಸಹಿತ ಸಾಲದ ಹಣದಲ್ಲಿ ನಯಾಫೈಸೆ ಫಲಾನುಭವಿಗಳಿಗೆ ಸಿಕ್ಕಿಲ್ಲ. ಇದರಿಂದ ಫಲಾನುಭವಿಗಳು ವಿಜಯಪುರ ನಗರದ ಐಡಿಬಿಐ ಬ್ಯಾಂಕ್ ಮುಂದೆ ಜಮಾಯಿಸಿ ಅಳಲು ತೋಡಿಕೊಂಡರು

ಇನ್ನು ಐಡಿಬಿಐ ಬ್ಯಾಂಕ್ ನ ಮ್ಯಾನೇಜರ್ ಬ್ಯಾಂಕ್ ನಲ್ಲಿ ಸಿಗದ ಕಾರಣ, ವಂಚನೆಗೊಳಗಾದ ಫಲಾನುಭವಿಗಳು ವಿಜಯಪುರ ಜಿಲ್ಲಾಧಿಕಾರಿ ಮೊರೆ ಹೋಗಿ ಮನವಿ ಸಲ್ಲಿಸಿದರು. ಫಲಾನುಭವಿಗಳ ಹೆಸರಿನಲ್ಲಿ ಲೋನ್ ತೆಗೆದುಕೊಂಡು, ನಮಗೆ ನಯಾ ಪೈಸೆ ಕೊಟ್ಟಿಲ್ಲ. ಮುಂದೆ ಲೋನ್ ತುಂಬೋದು ಹೇಗೆ ಅಂತ ಅಳಲು ತೋಡಿಕೊಂಡರು. ಇದರಲ್ಲಿ ಏಜೆಂಟರು, ನಿಗಮದ ಅಧಿಕಾರಿಗಳು, ಬ್ಯಾಂಕ್ ನವರು ಶಾಮೀಲಾಗಿರೋ ಆರೋಪ ಕೇಳಿ ಬಂದಿದೆ. ಇನ್ನು ಸಾಲದ ಹಣ ಕೇಳಿದರೆ ಏಜೆಂಟರು ಬೆದರಿಕೆ ಹಾಕುತ್ತಿದ್ದಾರಂತೆ. ಫಲಾನುಭವಿಗಳ ಮೊಬೈಲ್ ಗೆ ಹಣ ತೆಗೆದಿರೋ ಮೆಸೆಜ್ ಬಂದ ಬಳಿಕ ವಂಚನೆ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಫಲಾನುಭವಿಗಳು ಬ್ಯಾಂಕ್ ನವರನ್ನು ವಿಚಾರಿಸಿದರೆ ಸ್ಪಂದಿಸುತ್ತಿಲ್ಲ. ಫಲಾನುಭವಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣ ನುಂಗಿದ ಪ್ರಕಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಕೊಡಬೇಕಿದೆ. ಈ ಬಗ್ಗೆ ತನಿಖೆ ನಡೆದಿ ಸೂಕ್ತ ಕ್ರಮ ತೆಗೆದುಕೊಳ್ಳೋದಾಗಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಬಡ ಫಲಾನುಭವಿಗಳ ಹೆಸರಲ್ಲಿ ಏಜೆಂಟರು ಬ್ಯಾಂಕ್ ಮೂಲಕವೇ ಕೋಟಿ ಕೋಟಿ ಹಣ ಪಂಗನಾಮ ಹಾಕಿರೋದು ಮಾತ್ರ ವಿಪರ್ಯಾಸ. ಇನ್ಮೇಲಾದರೂ ಜಿಲ್ಲಾಡಳಿತ ತಪ್ಪಿತಸ್ಥ ಅಧಿಕಾರಿಗಳು, ಏಜೆಂಟರು, ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅಂತ ಕಾದು ನೋಡಬೇಕಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇದನ್ನೂ ಓದಿ: ಮಗಳಿಗೆ ಎಸ್ ಸಿ ಸರ್ಟಿಫಿಕೇಟ್ ಪಡೆದುಕೊಂಡಿರುವ ರೇಣುಕಾಚಾರ್ಯ ವಿರುದ್ಧ ಕ್ರಮ ಜರುಗಲೇಬೇಕು: ಸಿದ್ದರಾಮಯ್ಯ

Covid 4th Wave: ಚೀನಾ, ಯುರೋಪ್​ನಲ್ಲಿ ಹೆಚ್ಚಿದ ಕೊರೊನಾವೈರಸ್ ಕೇಸ್;​ ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ

Published On - 5:21 pm, Fri, 25 March 22

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ