ಚಿತ್ರದುರ್ಗ: ಎಲ್ಲೋ ದೂರದ ಕೇದಾರನಾಥ ಅಂತಹ ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿ ಬೆಟ್ಟಗಳು ಕುಸಿದವಂತೆ, ದೇಗುಲಗಳು ಕೊಚ್ಚಿ ಹೋದವಂತೆ, ದೊಡ್ಡದಾದ ಗುಡ್ಡ ಕುಸಿತವಾದವಂತೆ ಅಂತೆಲ್ಲಾ ನಾವು ಕೇಳುತ್ತಿದ್ದೆವು. ಆದರೆ ಈಗ ನಮ್ಮ ಮಧ್ಯೆಯೇ ಇಂತಹ ರುದ್ರ ಭಯಂಕರ ದೃಶ್ಯವನ್ನು ಕಾಣಬೇಕಾಯಿತು, ಅನುಭವಿಸುವಂತೆಯೋ ಆಗಿದೆ. ರಾಜ್ಯದಲ್ಲಿ ಈ ವರ್ಷ ಹಿಂದೆಂದು ಸುರಿಯದ ಭೀಕರ ಮಳೆಯೇ ಇದಕೆಲ್ಲ ಕಾರಣವಾಗಿದೆ.
ಕೇದಾರನಾಥದಲ್ಲಿ ಅಲ್ಲ, ಇಲ್ಲೇ ದುರ್ಗದ ಬಳಿ ಮಳೆಗೆ ಕೊಚ್ಚಿಹೋದ ಪುರಾತನ ದೇವಸ್ಥಾನ
ಬರದ ನಾಡು ಚಿತ್ರದುರ್ಗದಲ್ಲಿ ಒಂದೇ ಸಮನೆ ಮಳೆಯಾಗುತ್ತಿದ್ದು ಬೃಹತ್ ಬೆಟ್ಟವೇ ಕುಸಿದಿದೆ. ಅದರ ಜೊತೆಗೆ ಬೆಟ್ಟದಲ್ಲಿದ್ದ ಪುರಾತನ ದೇಗುಲವೂ ಕುಸಿದು ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ಬಳಿಯ ಐತಿಹಾಸಿಕ ಬೆಟ್ಟ ಕುಸಿತವಾಗಿದ್ದು, ಬೆಟ್ಟದಲ್ಲಿನ ಇತಿಹಾಸ ಪ್ರಸಿದ್ಧ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತವಾಗಿದೆ. ಆದರೆ ಬೆಟ್ಟ ಕುಸಿತದ ನಡುವೆ ಅಚ್ಚರಿ ರೀತಿಯಲ್ಲಿ ದೇಗುಲದ ಗರ್ಭಗುಡಿಯಲ್ಲಿರುವ ರಂಗನಾಥಸ್ವಾಮಿ ವಿಗ್ರಹ ಮಾತ್ರ ಉಳಿದುಕೊಂಡಿದೆ. ಬೆಟ್ಟದ ಕೆಳಭಾಗದಲ್ಲಿನ ಹನುಮಪ್ಪ ದೇಗುಲಕ್ಕೂ ಹಾನಿಯಾಗಿದೆ. ಕುಸಿದ ದೇಗುಲ ನೋಡಲು ಊರಿನ ಜನ ಕುತೂಹಲದಿಂದ ಬೆಟ್ಟದತ್ತ ತೆರಳುತ್ತಿದ್ದಾರೆ.
Published On - 2:02 pm, Tue, 22 October 19