ವಿಮಾನ ನಿಲ್ದಾಣದಲ್ಲಿ ನಮ್ಮ ಪೊಲೀಸರಿಗಾಗಿ ಐಷಾರಾಮಿ ಕ್ಯಾಬಿನ್ಸ್.. ಕಿಚನ್, ಟಾಯ್ಲೆಟ್, ರೆಸ್ಟ್ ರೂಂ ಸೌಲಭ್ಯ ಲಭ್ಯ
ದೇವನಹಳ್ಳಿ: ಅತಿ ಹೆಚ್ಚು ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಜೊತೆಗೆ ಹಚ್ಚ ಹಸಿರಿನ ಪರಿಸರದಿಂದ ಪ್ರಸಿದ್ಧಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಂದು ಸೇವೆ ನೀಡುವುದರ ಮೂಲಕ ಸುದ್ದಿಯಲ್ಲಿದೆ. ಬೆಂಗಳೂರಿನಲ್ಲಿ ಹಗಲು-ರಾತ್ರಿ ಗಾಳಿ, ಮಳೆ, ಬಿಸಿಲು ಅನ್ನದೆ ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆಯೂ ದುಡಿಯುವ ಪೊಲೀಸರ ಅನುಕೂಲಕ್ಕಾಗಿ ಹೈಟೆಕ್ ಕ್ಯಾಬಿನ್ಗಳನ್ನ ನಿರ್ಮಾಣ ಮಾಡಿಕೊಟ್ಟಿದೆ. ಹೌದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದ ಅಡಿಯಲ್ಲಿ ಬೆಂಗಳೂರು ಸಿಟಿ ಪೊಲೀಸರ ಅನುಕೂಲಕ್ಕಾಗಿ […]
ದೇವನಹಳ್ಳಿ: ಅತಿ ಹೆಚ್ಚು ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಜೊತೆಗೆ ಹಚ್ಚ ಹಸಿರಿನ ಪರಿಸರದಿಂದ ಪ್ರಸಿದ್ಧಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಂದು ಸೇವೆ ನೀಡುವುದರ ಮೂಲಕ ಸುದ್ದಿಯಲ್ಲಿದೆ.
ಬೆಂಗಳೂರಿನಲ್ಲಿ ಹಗಲು-ರಾತ್ರಿ ಗಾಳಿ, ಮಳೆ, ಬಿಸಿಲು ಅನ್ನದೆ ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆಯೂ ದುಡಿಯುವ ಪೊಲೀಸರ ಅನುಕೂಲಕ್ಕಾಗಿ ಹೈಟೆಕ್ ಕ್ಯಾಬಿನ್ಗಳನ್ನ ನಿರ್ಮಾಣ ಮಾಡಿಕೊಟ್ಟಿದೆ. ಹೌದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದ ಅಡಿಯಲ್ಲಿ ಬೆಂಗಳೂರು ಸಿಟಿ ಪೊಲೀಸರ ಅನುಕೂಲಕ್ಕಾಗಿ 7 ಹೈಟೆಕ್ ಕ್ಯಾಬಿನ್ಗಳನ್ನ ನಿರ್ಮಾಣ ಮಾಡಿಸಿದ್ದು ಈಗಾಗಲೇ ಬೆಂಗಳೂರು ಸಿಟಿ ಪೊಲೀಸರಿಗೆ 7 ಕ್ಯಾಬಿನ್ಗಳನ್ನ ಹಸ್ತಾಂತರ ಮಾಡಿದ್ದಾರೆ.
ನೆರವು ಶಿರ್ಷಿಕೆಯಡಿಯಲ್ಲಿ .. ಜತೆಗೆ ಪ್ರತಿಯೊಂದು ಕ್ಯಾಬಿನ್ನಲ್ಲೂ ಎಲ್ಇಡಿ ವಿದ್ಯುತ್ ಬಲ್ಬ್, ಸೀಲಿಂಗ್ ಪ್ಯಾನ್ಸ್, ಎಲೆಕ್ಟಿಕ್ ಸಾಕೆಟ್ ಏರ್ ಕಂಡೀಷನ್, ಅಡುಗೆ ಮನೆ ಶೌಚಾಲಯದ ಜೊತೆಗೆ ವಿಶ್ರಾಂತಿ ಕೊಠಡಿ ಮತ್ತು ಕ್ಯಾಬಿನ್ನ ಮೇಲ್ಭಾಗದಲ್ಲಿ 300 ಲೀಟರ್ ನೀರಿನ ಸಾಮರ್ಥ್ಯವುಳ್ಳ ಟ್ಯಾಂಕ್ ಅನ್ನು ಅಳವಡಿಸಿದ್ದಾರೆ.
ಈಗಾಗಲೇ ಈ ಮಾದರಿ ಹೈಟೆಕ್ ಪೊಲೀಸ್ ಕ್ಯಾಬಿನ್ಗಳನ್ನ ನೆರವು ಶಿರ್ಷಿಕೆಯಡಿಯಲ್ಲಿ ಸಿಲಿಕಾನ್ ಸಿಟಿಯ ಟೌನ್ ಹಾಲ್ ಸೇರಿದಂತೆ 7 ಕಡೆ ಸ್ಥಾಪನೆ ಮಾಡಿದ್ದು, ದಿನಪೂರ್ತಿ ಕೆಲಸ ಮಾಡಿ ದಣಿಯುವ ಪೊಲೀಸರು ಮನೆಯ ರೀತಿ ಕ್ಯಾಬಿನ್ನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ.
KIABಯಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ: 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಹಾರಾಡಿದ ವಿಮಾನ
Published On - 10:29 am, Wed, 9 December 20