Something Serious.. ನಾಳೆ ಸಾರಿಗೆ ನೌಕರರಿಂದ ವಿಧಾನಸೌಧ ಚಲೋ, ಜಾಥಾದಲ್ಲಿ ನೌಕರರ ಹೆಂಡತಿ-ಮಕ್ಕಳೂ ಭಾಗಿ!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ನಾಳೆ ಬೆಳಗ್ಗೆ 10 ಗಂಟೆಗೆ ಸಾರಿಗೆ ನೌಕರರ ಜಾಥಾ ನಡೆಯಲಿದೆ.

Something Serious.. ನಾಳೆ ಸಾರಿಗೆ ನೌಕರರಿಂದ ವಿಧಾನಸೌಧ ಚಲೋ, ಜಾಥಾದಲ್ಲಿ ನೌಕರರ ಹೆಂಡತಿ-ಮಕ್ಕಳೂ ಭಾಗಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 07, 2022 | 5:32 PM

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿಸುವಂತೆ ಆಗ್ರಹಿಸಿ ನಾಳೆ ಸಾರಿಗೆ ನೌಕರರಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ. ‘ಸಾರಿಗೆ ನೌಕರರ ನಡಿಗೆ-ಸರ್ಕಾರಿ ನೌಕರರಾಗುವ ಕಡೆಗೆ’ ಎಂಬ ಘೋಷಣೆಯಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಬೆಳಗ್ಗೆ 10 ಗಂಟೆಗೆ ಜಾಥಾ ಹೊರಡಲಿದೆ.

ಜಾಥಾದಲ್ಲಿ ಯಾರೆಲ್ಲಾ ಭಾಗಿಯಾಗುತ್ತಾರೆ? ರಾಜ್ಯದಲ್ಲಿ ಸುಮಾರು 1 ಲಕ್ಷ 40 ಸಾವಿರ ಸಾರಿಗೆ ನೌಕರರು ಇದ್ದಾರೆ. KSRTC, BMTC, NEKRTC ಸಿಬ್ಬಂದಿ ನಾಳಿನ ಕಾಲ್ನಡಿಗೆ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಈ ಸಂದರ್ಭದಲ್ಲಿ ಸಾರಿಗೆ ನೌಕರರ ಜೊತೆಯಾಗಲಿದ್ದಾರೆ. ಈ ಬಗ್ಗೆ ಸಾರಿಗೆ ನೌಕರರ ಮುಖಂಡ ಆನಂದ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ಜಾಥಾದಲ್ಲಿ ಸಾರಿಗೆ ನೌಕರರ ಹೆಂಡತಿ ಮಕ್ಕಳೂ ಭಾಗಿ! ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ನೌಕರರು ಅವರ ಹೆಂಡತಿ ಮಕ್ಕಳ ಸಹಿತ ಭಾಗವಹಿಸಲಿದ್ದಾರೆ. ಕನ್ನಡಪರ, ಹಿಂದೂಪರ ಸಂಘಟನೆಗಳು ಹಾಗೂ ವಕೀಲರ ಸಂಘ ಜಾಥಾಕ್ಕೆ ಬೆಂಬಲ ಸೂಚಿಸಿವೆ ಎಂದು ತಿಳಿದುಬಂದಿದೆ. ಸಾರಿಗೆ ನೌಕರರ ಬೃಹತ್ ಕಾಲ್ನಡಿಗೆ ಜಾಥಾದ ಕಾರಣ, ನಾಳೆ KSRTC, BMTC ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ವಿಧಾನಸೌಧ ಚಲೋ

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು? ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು. ಸರ್ಕಾರಿ ನೌಕರರಿಗೆ ನೀಡುವಂತಹ ಸವಲತ್ತುಗಳನ್ನು ಸಾರಿಗೆ ನೌಕರರಿಗೂ ನೀಡಬೇಕು. ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ, ಘೋಷಣೆ ಮಾಡಿದ್ದ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬುದು ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಾಗಿವೆ.

ವಾಯವ್ಯ ಸಾರಿಗೆಯಿಂದ ಬಾರದ ಹಣ: ಬೇಸತ್ತ ನಿವೃತ್ತ ಚಾಲಕ ಆತ್ಮಹತ್ಯೆ

Published On - 11:11 am, Wed, 9 December 20