
ಬೆಂಗಳೂರು: ರಾಜಕಾರಣಿಗಳ ಕುಟುಂಬಕ್ಕೂ ಕೊರೊನಾ ಆತಂಕ ಹೆಚ್ಚಾಗಿದೆ. ಮಹಾಮಾರಿ ಕೊರೊನಾ ಸೋಂಕಿಗೆ ಮಾಜಿ ಸಚಿವ H.M.ರೇವಣ್ಣ ಸಂಬಂಧಿ ಬಲಿಯಾಗಿದ್ದಾರೆ.
H.M.ರೇವಣ್ಣ ಪತ್ನಿಯ ಸಹೋದರಿ ಎಂ.ಎಸ್ ರೋಹಿಣಿ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊರೊನಾಗೆ ಮೃತಪಟ್ಟಿದ್ದಾರೆ. ಇವರಿಗ 61 ವರ್ಷ ವಯಸ್ಸಾಗಿತ್ತು. ಆಸ್ಪತ್ರೆಗೆ ಸೇರಿಸುವಾಗ ಸ್ವತಹ ರೇವಣ್ಣ ಅವರೇ ಅವರನ್ನ ಕರೆದುಕೊಂಡು ಹೋಗಿದ್ರು.
ಹೀಗಾಗಿ ಸದ್ಯ ರೇವಣ್ಣ ಅವರಿಗೂ ಪ್ರಾಥಮಿಕ ಸಂಪರ್ಕ ಹೊಂದಿರೋದ್ರಿಂದ ಆತಂಕ ಶುರುವಾಗಿದೆ. ಹೀಗಾಗಿ ರೇವಣ್ಣ ಹಾಗೂ ಅವರ ಪುತ್ರ, ನಟ ಅನೂಪ್ ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ್ದಾರೆ.
Published On - 10:40 am, Wed, 22 July 20