ಬೆಂಗಳೂರು: ಒಂದು ವಾರದ ಲಾಕ್ಡೌನ್ನಿಂದ ಸಿಲಿಕಾನ್ ಸಿಟಿ ಮಂದಿಗೆ ಇಂದು ರಿಲೀಫ್ ಸಿಕ್ಕಿದೆ. ಇಂದಿನಿಂದ ಅನ್ ಲಾಕ್ 2.0 ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಬೆಳಗ್ಗೆಯೇ ಜನ ವಾಕಿಂಗ್, ಜಾಕಿಂಗ್ ಶುರು ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇಂದಿನಿಂದ ಲಾಕ್‌ಡೌನ್ ಓಪನ್ ಆಗಿದ್ದು, ಬೆಳಂಬೆಳಗ್ಗೆ ಆಟೋ, ಓಲಾ, ಉಬರ್ ಕ್ಯಾಬ್ಗಳು ಎಂದಿನಂತೆ ರಸ್ತೆಗಿಳಿದಿವೆ. ದೈನಂದಿನ ಕೆಲಸಗಳಲ್ಲಿ ಸಿಟಿ ಜನ ಬಿಜಿಯಾಗಿದ್ದಾರೆ.
ಬಸ್ ಸೇವೆ ಆರಂಭ ಲಾಕ್‌ಡೌನ್ ಅಂತ್ಯವಾಗಿರುವ ಹಿನ್ನೆಲೆ ಬಸ್ ಸೇವೆ ಆರಂಭವಾಗಿದೆ. ಬಿಎಂಟಿಸಿ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಬಸ್ ಸಂಚಾರ ಮಾಡಲಿದೆ. ಇಂದು 1,500 ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯಲಿವೆ. ಕಂಟೇನ್ಮೆಂಟ್ ಜೋನ್‌ಗಳಲ್ಲಿ BMTC ಬಸ್ ಸಂಚಾರ ಇಲ್ಲ. ಮೆಜೆಸ್ಟಿಕ್‌ನಿಂದ ಜಿಲ್ಲೆಗಳಿಗೆ KSRTC ಬಸ್ ಸೇವೆ ಆರಂಭವಾಗಿದೆ.
ಉಣಬಡಿಸಲು ಹೋಟೆಲ್ಗಳು ಸಿದ್ಧ ಇನ್ನು ಗ್ರಾಹಕರ ಟೇಬಲ್ ಸರ್ವೀಸ್ಗೆ ಹೋಟೆಲ್ಗಳಲ್ಲಿ ಸಿದ್ದತೆ ಜೋರಾಗಿದೆ. ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಸೇವೆ ಆರಂಭವಾಗಿದೆ. ಲಾಕ್‌ಡೌನ್ ಇದ್ದ ಕಾರಣ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಇಂದಿನಿಂದ ಎಂದಿನಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರ್ವಜಕರಿಗೆ ಸೇವೆ ಒದಗಿಸಲಿರುವ ಹೋಟೆಲ್ ಗಳು ಮುಂದಾಗಿವೆ. ಹೋಟೆಲ್ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಆ ಬಳಿಕ ಕೈಗಳನ್ನು ಸ್ಯಾನಿಟೈಜ್ ಮಾಡಿ ಗ್ರಾಹಕರಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಾಗುತ್ತೆ.
ಇಂದಿನಿಂದ ಎಎಲ್ಲವೂ ಸಹಜ ಸ್ಥಿತಿಗೆ ಮರಳಿದ್ದು, ಜನ ಹೆಚ್ಚಿನ ಎಚ್ಚರಿಕೆಯಿಂದಿರಬೇಕಿದೆ. ಲಾಕ್‌ಡೌನ್ ಅಂತ್ಯವಾಗಿದೆ ಕೊರೊನಾ ಅಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ತಮ್ಮ ತಮ್ಮ ಸುರಕ್ಷತೆಯಲ್ಲಿರಬೇಕಿದೆ. ನಮ್ಮ ಜೀವ ನಮ್ಮ ಕೈಯಲ್ಲಿದೆ.